Ravichandran : ಕೆಜಿಎಫ್ 2 ಚಿತ್ರಕ್ಕೆ ಭಾಷೆ ಅನ್ನುವುದು ಇಲ್ಲ ಎಂದ ರವಿಚಂದ್ರನ್ ಯಾಕೆ ಗೊತ್ತಾ?
Updated:Tuesday, May 3, 2022, 06:30[IST]

ಕಳೆದ ಒಂದು ವಾರದಿಂದ ಭಾಷೆ ವಿಚಾರಕ್ಕೆ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲಿ ಭಾರೀ ವಿವಾದ ಉಂಟಾಗಿತ್ತು. ಹಿಂದಿ ರಾಷ್ಟ್ರ ಭಾಷೆ ಅಂತ ವಾದ ನಡೆಯುತ್ತಿತ್ತು. ಈ ಬಗ್ಗೆ ಎಲ್ಲರೂ ಕಿಚ್ಚ ಸುದೀಪ್ ರನ್ನು ಸಪೋರ್ಟ್ ಮಾಡಿದ್ದರು. ಅಜಯ್ ದೇವಗನ್ ಅವರ ವಾದವನ್ನು ಅಲ್ಲಗಳೆದಿದ್ದರು. ಸೋನು ಸೂದ್ ರಿಂದ ಹಿಡಿದು ಹಲವರು ಹಿಂದಿಯನ್ನು ನಾವು ಭಾರತದ ರಾಷ್ಟ್ರ ಭಾಷೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಭಾರತಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆಯಷ್ಟೇ ಎಂದು ಹೇಳಿದ್ದರು.
ಇನ್ನು ನಿನ್ನೆಯಷ್ಟೇ, ಕನ್ನಡದ ಪ್ರತಿಷ್ಠಿತ ಲಹರಿ ಸಂಸ್ಥೆಗೆ ಗ್ರ್ಯಾಮಿ ಪ್ರಶಸ್ತಿ ದೊರಕಿದೆ. ಲಹರಿ ಸಂಸ್ಥೆಯೂ ರಿಲೀಸ್ ಮಾಡಿದ್ದ ಆಲ್ಬಂದ ಒಂದಕ್ಕೆ ಈ ಪ್ರಶಸ್ತಿ ಸಿಕ್ಕಿದೆ. ಲಹರಿ ಸಂಸ್ಥೆಯ ಡಿವೈನ್ ಟ್ರೈಡ್ಸ್ ಆಲ್ಬಂ ಈ ಪ್ರಶಸ್ತಿಯನ್ನು ತಬ್ಬಿಕೊಂಡಿದೆ. ಈ ಆಲ್ಬಂಗೆ ಸಂಗೀತ ನಿರ್ದೇಶನವನ್ನು ರಿಕ್ಕಿಕೇಜ್ ಅವರು ಮಾಡಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಈ ಸಂಬಂಧ ನಿನ್ನೆಯಷ್ಟೇ ಲಹರಿ ಸಂಸ್ಥೆಯ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ರಿಕಿ ಕೇಜ್, ಸಿಎಂ ಬಸವರಾಜ್ ಬೊಮ್ಮಾಯಿ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್ ಅವರು, ಭಾಷೆ ಒಂದು ಮನರಂಜನೆ ಎಂಬುದನ್ನು ಹೇಳಿದರು. ಭಾಷೆ ಒಂದು ಮನರಂಜನೆ ಸತ್ಯ. ಜನರನ್ನು ಮೆಚ್ಚಿಸಲು ಯಾವ ಭಾಷೆಯಲ್ಲಿ ಸಿನಿಮಾ ಮಾಡಿದ್ವಿ ಎಂಬುದು ಮುಖ್ಯವಲ್ಲ ಎಂದು ಹೇಳಿದರು. ಅಲ್ಲದೇ, ಕೆಜಿಎಫ್ 2 ಚಿತ್ರದ ಬಗ್ಗೆ ಇಡೀ ವಿಶ್ವವೇ ಮಾತಾಡುತ್ತಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ ದಾಖಲೆ ಮುರಿಯೋದೆ ನಮ್ಮ ನಿಮ್ಮೆಲ್ಲರ ಗುರಿ ಆಗಿರಬೇಕು. ಕೆಜಿಎಫ್ ಚಿತ್ರದಿಂದಾಗಿ ಇಡೀ ಪ್ರಪಂಚ ನಮ್ಮ ಕಡೆ ತಿರುಗಿ ನೋಡುವಂತಾಗಿದೆ. ಕೆಜಿಎಫ್ ಚಿತ್ರದ ಯಶಸ್ಸನ್ನು ನಾವೆಲ್ಲಾ ಹೆಮ್ಮೆಯಿಂದ ಸಂಭ್ರಮಿಸೋಣ ಎಂದು ರವಿಚಂದ್ರನ್ ಹೇಳಿದರು.