Ravichandran : ಸುದೀಪ್, ನನ್ನ ಮಗ ಎಂದು ಮತ್ತೊಮ್ಮೆ ಹೇಳಿದ ರವಿಚಂದ್ರನ್ ಯಾಕೆ ಗೊತ್ತಾ?

By Infoflick Correspondent

Updated:Thursday, June 23, 2022, 07:25[IST]

Ravichandran :  ಸುದೀಪ್, ನನ್ನ ಮಗ ಎಂದು ಮತ್ತೊಮ್ಮೆ ಹೇಳಿದ ರವಿಚಂದ್ರನ್ ಯಾಕೆ ಗೊತ್ತಾ?

ಕನ್ನಡದ ಬಹುನಿರೀಕ್ಷಿತ ಚಿತ್ರ ನಟ ಕಿಚ್ಚ ಸುದೀಪ್ ಅವರ ಅಭಿನಯದ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇಂದು ನೆರವೇರಿತು. ಹೌದು ಬೆಂಗಳೂರಿನಲ್ಲಿ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯಿತು ಎನ್ನಬಹುದು. ಕಿಚ್ಚ ಸುದೀಪ್ ಅಭಿನಯದಲ್ಲಿ ಇದು ಫ್ಯಾನ್ ಇಂಡಿಯಾ ಮೂವಿಯಾಗಿ ಹೊರಬರುತ್ತಿದ್ದು, ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ವಿಚಾರ ಇದು. ನಮ್ಮ ಕನ್ನಡ ಸಿನಿಮಾರಂಗದ ಬಗ್ಗೆ ಹೇಗೆ ಬೇಕೋ ಮಾತನಾಡುತ್ತಿದ್ದ ಜನರ ಬಾಯಿ ಮುಚ್ಚಿಸುವ ಮತ್ತೊಂದು ಸಿನಿಮಾ ಇದಾಗಿರಲಿದೆ ಎಂದು ಹೇಳಬಹುದು. ಕೆಜಿಎಫ್, ಚಾರ್ಲಿ ಈಗ ದೊಡ್ಡದಾಗಿ ಯಶಸ್ವಿಯಾಗಿವೆ.

ಅದೇ ಸಾಲಿನಲ್ಲಿ ಈಗ ವಿಕ್ರಾಂತ್ ರೋಣ ಸಿನಿಮಾ ಬೇರೆ ಫ್ಯಾಂಟಸಿಯ ಲೋಕಕ್ಕೆನೆ ನಿಮ್ಮನ್ನೆಲ್ಲಾ ಕರೆದುಕೊಂಡು ಹೋಗೋದು ಪಕ್ಕಾ ಆಗಿದೆ. ಹೌದು ಇಂದು ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಶಿವಣ್ಣ, ರವಿಚಂದ್ರನ್, ನಟ ರಮೇಶ್ ಅರವಿಂದ್, ಡಾಲಿ, ರಕ್ಷಿತ್ ಶೆಟ್ಟಿ, ಹಾಗೂ ಇಡೀ ಚಿತ್ರತಂಡ ಆಗಮಿಸಿತ್ತು. ಹೌದು ರವಿಚಂದ್ರನ್ ಅವರು ವೇದಿಕೆ ಮೇಲೆ ಹೋದಾಗ, ಅನುಪ್ ಭಂಡಾರಿ ಅವರೇ ನೀವು ಆಗಲೇ ಏನೋ ಒಂದು ಡೈಲಾಗ್ ಹೇಳಿದಿರಿ, ಭಯ ಹಾಗೆ ಹೀಗೆ ಎಂದು ರವಿಚಂದ್ರನ್ ಮಗರಿ ಸುದೀಪ್, ಅವನಿಗೆ ಭಯ ಅನ್ನೋದೇ ಇಲ್ಲ ಎಂದು ನಗೆ ಬೀರುತ್ತ ತಮ್ಮ ಮಾತನ್ನು ಆರಂಭಿಸಿದರು.     

ಹಾಗೆ ಮಾತು ಮುಂದುವರೆಸಿದ ರವಿಚಂದ್ರನ್ ಅವರು ಪ್ರೇಮಲೋಕದ ಸಮಯದಲ್ಲಿ ನಮ್ಮ ತಂದೆ ನನ್ನ ಭುಜದ ಮೇಲೆ ಒರಗಿಕೊಂಡೆ ಕಣ್ಣೀರು ಹಾಕಿದ್ದು ನಾನು ಎಂದಿಗೂ ಮರೆಯುವುದಿಲ್ಲ. ನಾನು ಎಂದಿಗೂ ಕಣ್ಣೀರು ಹಾಕಿಲ್ಲ. ಕಣ್ಣೀರು ಹಾಕಿಸುವ ಸಿನಿಮಾ ಮಾಡಿ ಎಂದು ನನ್ನ ಮಕ್ಕಳ ಮುಂದೆ ಚಾಲೆಂಜ್ ಇಟ್ಟಿದ್ದೇನೆ. ಈಗ ಸುದೀಪ್ ಅದನ್ನ ಮಾಡುತ್ತಾನೆ ಎನ್ನುವ ಹಾಗೆ ಸಿನಿಮಾ ಬಂದಿದೆ. ವಿಕ್ರಾಂತ್  ರೋಣ ಸಿನಿಮಾ ನೋಡಿದ ಮೇಲೆ ಅನಿಸಿತು. ಇದೊಂದು ಫ್ಯಾಂಟಸಿ ಸಿನಿಮಾ, ನಿಮ್ಮನ್ನು ಬೇರೆ ಲೋಕದ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಸುದೀಪ್ ಕೂಡ ನನ್ನ ಮಗ ಇದ್ದಹಾಗೆ ಅವನು ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾನೆ ಎಂದು ಈ ಸಿನಿಮಾ ನೋಡುವಾಗ ಎನಿಸಿತು ಎಂದು ಭಾವುಕರಾದರು ರವಿಚಂದ್ರನ್.

ಜೊತೆಗೆ ನಮ್ಮ ಕನ್ನಡ ಚಿತ್ರರಂಗ ಇದೀಗ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ. ಎಲ್ಲರೂ ಎತ್ತರಕ್ಕೆ ಬೆಳೆಯುತ್ತಾ, ಬೆಳೆಯುತ್ತಾ ಬುರ್ಜ ಕಲಿಪ ಅದಕ್ಕಿಂತ ಎತ್ತರ ಎಲ್ಲರೂ ಬೆಳೆಯೋಣ ಇಡೀ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹೇಳಿ ರವಿಚಂದ್ರನ್ ಅವರು ವಿಕ್ರಾಂತ್ ರೋಣ ಬಗ್ಗೆ ಮಾತನಾಡಿದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ಸುದೀಪ್ ಅವರ ಬಗ್ಗೆ ನಟ ರವಿಚಂದ್ರನ್ ಅವರು ಇನ್ನೂ ಏನೆನೆಲ್ಲ ಹೇಳಿದರು ಎಂದು ತಿಳಿಯಲು ಈ ವೀಡಿಯೋವನ್ನು ಕೊನೆಯವರೆಗೂ ನೋಡಿ ಇಷ್ಟ ಆದರೆ ಶೇರ್ ಮಾಡಿ ಧನ್ಯವಾದಗಳು... ( video credit : top kannada tv)