Manoranjan : ರವಿಚಂದ್ರನ್ ಪುತ್ರನಿಗೆ ಕಂಕಣಭಾಗ್ಯ! ವಧು ಯಾರು ಗೊತ್ತೆ ?

By Infoflick Correspondent

Updated:Wednesday, July 13, 2022, 14:05[IST]

Manoranjan :  ರವಿಚಂದ್ರನ್ ಪುತ್ರನಿಗೆ ಕಂಕಣಭಾಗ್ಯ! ವಧು ಯಾರು ಗೊತ್ತೆ ?

ಕ್ರೇಜಿ ಸ್ಟಾರ್​' ಪುತ್ರ ಮನೋರಂಜನ್​ ರವಿಚಂದ್ರನ್​ ಅವರು ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ.‌ ಕಂಕಣ ಭಾಗ್ಯ ಕೂಡಿ ಬಂದಿದೆ. ಕ್ರೇಜಿ ಸ್ಟಾರ್​' ಪುತ್ರನ ಮದುವೆ ಸುದ್ದಿ ತಿಳಿದು ಅಭಿಮಾನಿಗಳು ಖುಷಿ ಆಗಿದ್ದಾರೆ.ರವಿಚಂದ್ರನ್​ ಅವರಿಗೆ ಮೂವರು ಮಕ್ಕಳು. 2019ರಲ್ಲಿ ಅವರ ಮಗಳ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ ಪುತ್ರ ಮನೋರಂಜನ್​ ವಿವಾಹದ ಬಗ್ಗೆ ಸುದ್ದಿ ಕೇಳಿಬಂದಿದೆ. ಈ ಕುರಿತು ಕುಟುಂಬದಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ.

ನಾನು 2021ರಲ್ಲೇ ಮದುವೆ ಆಗಲಿದ್ದೇನೆ. ಅಪ್ಪ-ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆ ಆಗಲಿದ್ದೇನೆ. ನನ್ನದು ಸಂಪೂರ್ಣ ಅರೇಂಜ್ ಮ್ಯಾರೇಜ್ ಆಗಿರಲಿದೆ. ನನಗೂ ಈಗ 32 ವರ್ಷ ತುಂಬಿದೆ. ಮನೆಯಲ್ಲಿ ಹುಡುಗಿ ಹುಡುಕುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮನು ಹೇಳಿದ್ದರು. ಈಗ 2022 ರಲ್ಲಿ ಮಾತಿನಂತೆ ಆರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ. 

ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಜೊತೆ ಮನೋರಂಜನ್​ ಮದುವೆ ಆಗಲಿದ್ದಾರೆ ಎನ್ನಲಾಗಿದೆ.ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 21 ಹಾಗೂ 22ರಂದು ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಧುವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಪ್ರೇಮಲೋಕದ ನಾಯಕನ ಮಗನ ಮದುವೆ ಲವ್ ಮ್ಯಾರೇಜ್ ಅಲ್ಲವಂತೆ ಅರೇಂಜ್ ಎಂದು ಬಲ್ಲಮೂಲಗಳು ತಿಳಿಸಿವೆ.

ಮುಂದಿನ ತಿಂಗಳು ಮದುವೆಯಾಗಿದ್ದರಿಂದ ಸದ್ಯದಲ್ಲೇ ಕ್ರೇಜಿ ಕುಟುಂಬ ಮಗನ ಮದುವೆ ಸಂಭ್ರವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಸಾಧ್ಯತೆ ಇದೆ.