Ravichandran son marriage : ಮದುವೆ ಆಮಂತ್ರಣಪತ್ರಿಕೆ ನೀಡಿದ ರವಿಚಂದ್ರನ್ ಕುಟುಂಬ!  ಮನೋರಂಜನ್​ ರವಿಚಂದ್ರನ್ ಮದುವೆ ?

By Infoflick Correspondent

Updated:Thursday, May 5, 2022, 09:21[IST]

Ravichandran son marriage : ಮದುವೆ ಆಮಂತ್ರಣಪತ್ರಿಕೆ ನೀಡಿದ ರವಿಚಂದ್ರನ್ ಕುಟುಂಬ!  ಮನೋರಂಜನ್​ ರವಿಚಂದ್ರನ್ ಮದುವೆ ?

ರವಿಚಂದ್ರನ್​ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ತಂದೆ ವೀರಾಸ್ವಾಮಿ ಕಾಲದಿಂದಲೂ ಅವರ ಕುಟುಂಬ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ರವಿಚಂದ್ರನ್ ಅವರ ಪುತ್ರನಾದ ಮನೋರಂಜನ್​ ಮತ್ತು ವಿಕ್ರಮ್​ ಅವರು ಕೂಡ ಈಗ ಬಣ್ಣದ ಲೋಕದಲ್ಲಿ ತೊಡಗಿಕೊಂಡಿದ್ದಾರೆ. ಮನೋರಂಜನ್​ ರವಿಚಂದ್ರನ್ ಅವರ ಇನ್ನೊಂದು ಸಿನಿಮಾ 'ಪ್ರಾರಂಭ' ಕೂಡ ಬಿಡುಗಡೆಗೆ ಸಜ್ಜಾಗಿದೆ. 

ಸಿನಿಮಾಗೆ ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದ್ದಾರೆ. ಈ ಸಿನಿಮಾ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾವೆಲ್ಲಾ ಅಲ್ಪಪ್ರಿಯರು, ಕುಬೇರರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದು ಎಂದು ಚಿತ್ರಮಂದಿರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೇಳಿದ್ದಾರೆ. 

ಡಾ. ರವಿಚಂದ್ರನ್​ ಅವರ ಆಶೀರ್ವಾದದೊಂದಿಗೆ ಎಂಬ ಬರಹದೊಂದಿಗೆ ಈ ಆಹ್ವಾನ ಪತ್ರಿಕೆ ಆರಂಭ ಆಗಿದೆ. 'ಶ್ರೀ ದೇವರ ಅನುಗ್ರಹದಿಂದ ಹಾಗೂ ಗುರುಹಿರಿಯ ಕೃಪಡೆಯಿಂದ ನಮ್ಮ ಸಿನಿಮಾ ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಶಾಲಿವಾಹನ ಶಕ ವರ್ಷಗಳು 1994ನೇ ಶ್ರೀ ಶುಭಕೃತ ನಾಮ ಸಂವತ್ಸರದ ವೈಶಾಖ ಮಾಸ, ಶುಕ್ಲ ಪಕ್ಷ ದಿನಾಂಕ 13-5-2022ನೇ ಶುಕ್ರವಾರ ನಮ್ಮ ಪ್ರಾರಂಭ ಚಿತ್ರ ಬಿಡುಗಡೆ ಆಗಲಿದೆ' ಎಂದು ಬರೆಯಲಾಗಿದೆ. ಇದರಲ್ಲಿ ಬರೆದಿರುವುದು ಪಕ್ಕಾ ಸಿನಿಮಾ ವಿಚಾರ. ಆದರೆ ವಿನ್ಯಾಸ ಮಾತ್ರ ವೆಡ್ಡಿಂಗ್​ ಕಾರ್ಡ್​ ರೀತಿಯಲ್ಲಿದೆ.      

ನವಜೋಡಿಯ ರೀತಿಯಲ್ಲಿ ಹೀರೋ-ಹೀರೋಯಿನ್​ ಹೆಸರು ಮುದ್ರಿಸಲಾಗಿದೆ.
ಚಿ | ರಾ | ಮನೋರಂಜನ್​ ರವಿಚಂದ್ರನ್​ (ಶ್ರೀಮತಿ ಸುಮತಿ ಮತ್ತು ಶ್ರೀ ಡಾ. ಕ್ರೇಜಿಸ್ಟಾರ್​ ರವಿಚಂದ್ರನ್​ ಇವರ ಜೇಷ್ಠ ಪುತ್ರ) ಮತ್ತು ಚಿ | ಸೌ | ಕು | ಕೀರ್ತಿ ಕಲ್ಕೇರಿ (ಶ್ರೀಮತಿ ಅಶ್ವಿನಿ ಮತ್ತು ರಮೇಶ್​ ಕಲ್ಕೇರಿ ಅವರ ಜೇಷ್ಠ ಪುತ್ರಿ) ಎಂದು ಬರೆಯಲಾಗಿದೆ. 

ಕೊವಿಡ್​ ಕಾರಣದಿಂದ ಈ ಸಿನಿಮಾದ ಕೆಲಸಗಳು ತಡವಾಗಿದ್ದವು. ಲೇಟ್​ ಆದ್ರೂ ಲೇಟೆಸ್ಟ್​ ಆಗಿ ಬರ್ತೀವಿ ಎನ್ನುವಂತೆ ಈ ಚಿತ್ರತಂಡ ಸದ್ದು ಮಾಡುತ್ತಿದೆ. ಈಗ ಈ ಸಿನಿಮಾದ ಆಮಂತ್ರಣ ಪತ್ರಿಕೆಯ ಪೋಸ್ಟರ್​ ಸಖತ್​ ವೈರಲ್​ ಆಗಿದೆ. 

ಜೇನುಶ್ರೀ ತನುಷ ಪ್ರೊಡಕ್ಷನ್ ನಿರ್ಮಿಸಿರುವ ಮನೋರಂಜನ್ ರವಿಚಂದ್ರನ್ ನಾಯಕನಾಗಿ ಅಭಿನಯಿಸಿರುವ ಪ್ರಾರಂಭ ಸಿನಿಮಾ ಮೇ 13ರಂದು ಬಿಡುಗಡೆಗೊಳ್ಳುತ್ತಿದೆ.   ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಯನ್ನು ಮನು ಕಲ್ಯಾಡಿ ಅವರೆ ಬರೆದಿದ್ದಾರೆ. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ‌ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 

ಮನೋರಂಜನ್​ ರವಿಚಂದ್ರನ್​  ಅವರು 2017ರಿಂದ ನಟನೆ ಆರಂಭಿಸಿದರು. 'ಸಾಹೇಬ', 'ಬೃಹಸ್ಪತಿ', 'ಮುಗಿಲ್​ ಪೇಟೆ' ಸಿನಿಮಾ ಮೂಲಕ ಅವರು ಜನರನ್ನು ರಂಜಿಸಿರುವ ಇವರು ಈ ಬಾರಿ ಹೊಸ ರೂಪದಲ್ಲಿ ವಿಭಿನ್ನವಾಗಿ ಗಮನಸೆಳೆಯಲಿದ್ದಾರೆ.