Ravichandran : ರವಿಚಂದ್ರನ್ ತಂದೆ ತಾಯಿ ಬಗ್ಗೆ ನುಡಿದ ಚಿನ್ನದಂತ ಮಾತು..! ವಾವ್ ಜನ್ಮ ಸಾರ್ಥಕ ಬಿಡಿ

By Infoflick Correspondent

Updated:Sunday, August 14, 2022, 21:28[IST]

Ravichandran : ರವಿಚಂದ್ರನ್ ತಂದೆ ತಾಯಿ ಬಗ್ಗೆ ನುಡಿದ ಚಿನ್ನದಂತ ಮಾತು..! ವಾವ್ ಜನ್ಮ ಸಾರ್ಥಕ ಬಿಡಿ

ಸ್ಯಾಂಡಲ್ ವುಡ್ನ ಮೋಸ್ಟ ಸಕ್ಸಸ್ ಫುಲ್ ನಾಯಕ ನಟ ಆಗಿ ಆರಂಭದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಸಿನಿಮಾದ ಮೇಲೆ ಇದ್ದ ಹೆಚ್ಚು ಆಸಕ್ತಿಯಿಂದ ಸಿನಿಮಾ ಪರದೆಯ ಮೇಲೆ ಇದ್ದ ಹೆಚ್ಚು ಪ್ರೀತಿಯಿಂದ ಕನ್ನಡಿಗರ ಮನೆ ಮಾತಾಗಿ ಇಂದಿಗೂ ಅವರು ಮಾಡುವ ಸಿನಿಮಾ ಮೂಲಕ ಜನಮನ್ನಣೆ ಗಳಿಸಿ ಎಲ್ಲರ ಪ್ರೀತಿ ಪಾತ್ರರಾಗಿರುವ ನಟ ರವಿಚಂದ್ರನ್ ಅವರು ಇಂದಿಗೂ ಕೂಡ ಸಿನಿಮಾ ಮಾಡುವುದನ್ನು ಬಿಟ್ಟಿಲ್ಲ. ಅವರ ರವಿ ಬೋಪಣ್ಣ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗಿದೆ. ಹೌದು ನಟ ರವಿಚಂದ್ರನ್ ಅವರು ಇತ್ತೀಚೆಗೆ ಸಂದರ್ಶನ ಒಂದನ್ನು ನೀಡುತ್ತಿದ್ದರು. ರವಿ ಬೋಪಣ್ಣ ಸಿನಿಮಾದ ಕೆಲ ವಿಚಾರವಾಗಿ ಕೊಟ್ಟ ಸಂದರ್ಶನ ಇದಾಗಿತ್ತು. ಹೌದು ಆಗ ನಿರೂಪಕಿ ಸಿನಿಮಾ ಬಗ್ಗೆ ಮಾತನಾಡುವಾಗ ನಿಮ್ಮ ತಂದೆ ಮತ್ತು ಈಶ್ವರಿ ಪ್ರೊಡಕ್ಷನ್ ಬಗ್ಗೆ ನೀವು ರವಿ ಬೋಪಣ್ಣದ ನಡುವೆ ನೆನಪಿಸಿಕೊಂಡಿದ್ದೀರಿ, ಅದರ ಬಗ್ಗೆ ನೀವೂ ಏನನ್ನ ಹೇಳುತ್ತೀರಿ ಎಂದಾಗ.

ನಾನು ಯಾವುದೇ ಸಿನಿಮಾ ಮಾಡಲಿ ನನ್ನ ತಂದೆ ಮತ್ತು ಈಶ್ವರಿ ಪ್ರೊಡಕ್ಷನ್ ಹೆಸರು ಬರಲೇಬೇಕು. ಅದು ಇದ್ದರೆ ನನ್ನ ಸಿನಿಮಾಗೆ ಶಕ್ತಿ, ಅದೇ ನನ್ನ ಸ್ಪೂರ್ತಿ ಎಂದರು. ಹಾಗೆ ಯಾವುದಾದರೂ ಮರೆಯಲಾಗದ ಒಂದು ಇನ್ಸಿಡೆಂಟ್ ಬಗ್ಗೆ ಹೇಳುವುದಾದರೆ ಎಂದಾಗ, ರವಿಚಂದ್ರನ್ ಅವರು ಶಾಂತಿ ಕ್ರಾಂತಿ ಸಿನಿಮಾ ಮಾಡುವಾಗ ಇದು ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ನನ್ನ ತಂದೆ ಬಳಿ ಬಂದು ಹೇಳಿದ್ದೆ. ಆ  ಸಿನಿಮಾ ಬೇರೆಯೇ ರೀತಿ ಹೋಗುತ್ತಿದೆ ಎಂದು ನನ್ನ ತಂದೆ ಬಳಿ ಬಂದು ನಾನು ಸಿನಿಮಾವನ್ನು ನಿಲ್ಲಿಸುತ್ತೇನೆ ಎಂದಿದ್ದೆ. ಆಗ ಅವರು ಸಂಸ್ಥೆ ಮರ್ಯಾದೆ ಪ್ರಶ್ನೆ ನೀನು ಸಿನಿಮಾವನ್ನು ನಿಲ್ಲಿಸಬಾರದು. ನಿನಗಾಗಿ ರಜನಿಕಾಂತ್, ನಾಗಾರ್ಜುನ ಡೇಟ್ಸ್ ಕೊಟ್ಟಿದಾರೆ. ಅವರ ನಂಬಿಕೆ, ಅಭಿಮಾನಿಗಳ ನಂಬಿಕೆ ಉಳಿಸಿಕೊಳ್ಳಲೇ ಬೇಕು, ಸಿನಿಮಾ ಅದೇನೇ ಆಗಲಿ ಅದೆಷ್ಟೇ ದಿನಗಳಾಗಲಿ, ಸಿನಿಮಾವನ್ನು ಮುಕ್ತಾಯ ಮಾಡಿಯೇ ನೀನು ಮಾಡುತ್ತೀಯಾ ಎಂದು ನನಗೆ ಹೇಳಿದರು. 

ಅದೇ ರೀತಿ ನಾನು ಸಿನಿಮಾ ಮಾಡಿದೆ, ಅದರ ಸಾಲವನ್ನು ತೀರಿಸಲು ನನಗೆ 15 ವರ್ಷ ಬೇಕಾಯಿತು. ನನ್ನ ತಂದೆ ಸಾವನ್ನಪ್ಪುವಾಗಲೂ ಕೂಡ ನನ್ನ ಜೊತೆಗೆ ಮಾತನಾಡಿ ಸಾವನ್ನಪ್ಪಿದ್ದಾರೆ. ಒಂದು ವಾರದಿಂದ ಅವರು ಆಸ್ಪತ್ರೆಯಲ್ಲೇ ಇದ್ದರೂ ಮಾತನಾಡಲಿಲ್ಲ ಕೊನೆಯ ದಿನ ನನ್ನ ಜೊತೆ ಹೇಗಿದ್ದಿಯ ಎಂದು ಮಾತನಾಡಿಸಿದರು ಎಂದರು. ಅಂತಹ ತಂದೆಯನ್ನು ಪಡೆಯಲಿಕ್ಕೆ ನಾನು ಪುಣ್ಯ ಮಾಡಿದ್ದೆ, ಹಾಗೆ ನನ್ನ ತಾಯಿ ಸಹ ಅಷ್ಟೇ. ಆಸ್ಪತ್ರೆಗೆ ಹಾಕಿದಾಗ ಒಂದು ವರ್ಷದಲ್ಲಿ ಸಾವನ್ನಪ್ಪುತ್ತಾರೆ ಎಂದು ವೈದ್ಯರು ಹೇಳಿದ್ದು, ನಾನು ಹತ್ತು ವರ್ಷ ನನ್ನ ತಾಯಿಯನ್ನು  ಕಾಪಾಡಿಕೊಂಡೇ ಎಂದರು ರವಿಚಂದ್ರನ್. ನಿಜಕ್ಕೂ ಅವರಿಬ್ಬರ ಪ್ರೀತಿ ಮತ್ತೊಂದು ಜನ್ಮದಲ್ಲಿ ನನಗೆ ಸಿಗಲು ಸಾಧ್ಯವಿಲ್ಲ, ಅಷ್ಟು ಪ್ರೀತಿ ಈ ಜನ್ಮದಲ್ಲಿ ನನಗೆ ನೀಡಿದ್ದಾರೆ.

ನನಗೆ ಮುಂದಿನ ಜನ್ಮ ಇದ್ದರೆ ಅವರ ಹೊಟ್ಟೆಯಲ್ಲಿಯೇ ಮತ್ತೆ ಮಗನಾಗಿ ಹುಟ್ಟಬೇಕು, ಇಲ್ಲವೇ ನನ್ನ ಹೊಟ್ಟೆಯಲ್ಲಿ ಅವರ ಹುಟ್ಟಬೇಕು, ಎಲ್ಲರೂ ಕೂಡ ನನಗೆ ಹೆಚ್ಚು ಪ್ರೀತಿ ನೀಡಿದ್ದಾರೆ. ನನ್ನ ತಂದೆ ತಾಯಿ ಅದಕ್ಕಿಂತ ಹೆಚ್ಚಾಗಿಯೇ ನೀಡಿದ್ದಾರೆ. ಅವರ ಮಗನಾಗಿ ಮತ್ತೆ ಹುಟ್ಟಬೇಕು ಎಂದರು ರವಿಚಂದ್ರನ್. ಜೊತೆಗೆ ನಮ್ಮ ಕುಟುಂಬಸ್ಥರು ನನ್ನ ಮಕ್ಕಳು ಎಲ್ಲರೂ ಅಭಿಮಾನಿಗಳು ಸಹ ಪ್ರೀತಿ ನೀಡಿದ್ದಾರೆ. ಆದ್ರೆ ನನ್ನ ಮಕ್ಕಳಿಗೆ ನಾನು ಬಹಳ ವರ್ಷ ನ್ಯಾಯ ಒದಗಿಸಿಲ್ಲ. ಇದೀಗ ಒದಗಿಸುತ್ತಿದ್ದೇನೆ ಎಂದು ರವಿಚಂದ್ರನ್ ಅವರು ನಂತರ ಭಾವುಕರಾದರು. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನಟ ರವಿಚಂದ್ರನ್ ತಂದೆ-ತಾಯಿಗಳ ಬಗ್ಗೆ ಆಡಿದ ಮಾತುಗಳನ್ನು ಕೇಳಿದರೆ ಮೈ ರೋಮಾಂಚನ ಆಗುತ್ತೆ. ಈ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...