Ravichandran About KGF : ಕೆಜಿಎಫ್ ಬರುವ ಮುನ್ನವೇ ಅದಕ್ಕೆ ಫೌಂಡೇಶನ್ ಹಾಕಿದ್ದು ನಾನೇ ಎಂದ ರವಿಚಂದ್ರನ್..! ಹೇಳಿದ್ದೆ ಬೇರೆ

By Infoflick Correspondent

Updated:Monday, May 2, 2022, 09:39[IST]

Ravichandran About KGF : ಕೆಜಿಎಫ್ ಬರುವ ಮುನ್ನವೇ ಅದಕ್ಕೆ ಫೌಂಡೇಶನ್ ಹಾಕಿದ್ದು ನಾನೇ ಎಂದ ರವಿಚಂದ್ರನ್..! ಹೇಳಿದ್ದೆ ಬೇರೆ

ಕನ್ನಡ ಚಿತ್ರರಂಗದ ಹಿರಿಯ ನಟ ರವಿಚಂದ್ರನ್ ಅವರು ಈಗಲೂ ಕೂಡ ಅದೇ ರೀತಿ ನಟನೆ ಹಾಗೆ ಹ್ಯಾಂಡ್ಸಮ್ ಇಟ್ಟುಕೊಂಡು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 90ರ ದಶಕದಲ್ಲಿಯ ಜನರಿಗೆ ನಟ ರವಿಚಂದ್ರನ್ ಅವರ ಶಕ್ತಿ, ಅವರ ನಟನೆಯ ಆಸಕ್ತಿ, ಹಾಗೆ ಅವರಲ್ಲಿರುವ ಸಿನಿಮಾ ಕನಸು ಹೇಗಿತ್ತು ಎಂಬುದಾಗಿ ಎಲ್ಲರಿಗೂ ಗೊತ್ತು. ಈಗಲೂ ಕೂಡ ಅದು ಹಾಗೆ ಇದೆ ಎನ್ನಬಹುದು. ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ನಟ ರವಿಚಂದ್ರನ್ ಅವರು ವಾರಂತ್ಯದ ಡ್ರಾಮಾ ಜೂನಿಯರ್ ಸೀಸನ್ ನಾಲ್ಕರಲ್ಲಿ ಇದೀಗ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಅವರು ಹೊಸಬರ ಸಿನಿಮಾಗಳ ಕುರಿತು ಹೆಚ್ಚು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದೀಗ ಕೆಜಿಎಫ್ ಸಿನಿಮಾ ನೋಡಿ ಇಡಿ ವಿಶ್ವವೇ ನಮ್ಮ ಕನ್ನಡದ ಬಗ್ಗೆ ಮಾತನಾಡುತ್ತಿದೆ. ನಮ್ಮ ಕರ್ನಾಟಕದ ಕಡೆ ನೋಡುತ್ತಿದೆ. ಹೌದು ಕೆಜಿಎಫ್ 2 ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ರವಿಚಂದ್ರನ್ ಅವರು ದಾಖಲೆಗಳನ್ನು ಮುರಿಯುವುದೇ ನಮ್ಮ ಮುಂದಿನ ಗುರಿಯಾಗಿರಬೇಕು ಎಂದಿದ್ದಾರೆ. ಕೆಜಿಎಫ್ ಟು ಸಿನಿಮಾ ನೋಡಿ ಇಡೀ ವಿಶ್ವವೇ ಕರ್ನಾಟಕದ ಬಗ್ಗೆ ಮಾತನಾಡುತ್ತಿದೆ. ಇದು ಹೆಮ್ಮೆಯ ವಿಷಯ. ದಾಖಲೆ ಮೇಲೆ ದಾಖಲೆ ಮಾಡುತ್ತಿದೆ, ಇದು ಸಹ ಹೆಮ್ಮೆಯ ವಿಷಯ. ಆದರೆ ಇದಕ್ಕೆ ಮೊದಲು ಫೌಂಡೇಶನ್ ಹಾಕಿದ್ದು ನಾವೇ. ಪ್ಯಾನ್ ಇಂಡಿಯಾ ಸಿನಿಮಾವನ್ನ 90ರ ದಶಕದಲ್ಲಿಯೇ ಮಾಡಿದ್ದೆವು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ರವಿಚಂದ್ರನ್.

ಕೆಜಿಎಫ್ 2 ಸಕ್ಸಸ್ ನೋಡಿ ಖುಷಿ ವ್ಯಕ್ತಪಡಿಸಿದ ನಟ  ರವಿಚಂದ್ರನ್ ಅವರು ಹೇಳುವ ಹಾಗೆ, ಕೆಜಿಎಫ್2 ದಾಖಲೆ ಮಾಡಿದೆ. ನಮ್ಮಲ್ಲಿ ಆ ಶಕ್ತಿ ಇದೆ. ಎಲ್ಲರೂ ಸೇರಿ ಮಾಡಿದರೆ ನಿಜ ಜೀವನದಲ್ಲಿ ಏನಾದರೂ ಮಾಡಲಿಕ್ಕೆ ಸಾಧ್ಯ. ನಮ್ಮ ಕೈಯಿಂದ ಎಲ್ಲವೂ ಆಗುತ್ತದೆ. ಕೆಜಿಎಫ್ ಸಿನಿಮಾ ದಾಖಲೆ ಮಾಡಿದೆ. ಆ ದಾಖಲೆಯ ಮುರಿಯೋದು ನಮ್ಮ ಮುಂದಿನ ಗುರಿ ಆಗಿರಬೇಕು. ಹಾಗೆ ಕೆಲಸ ನಿರಂತರವಾಗಿರಬೇಕು ಎಂದಿದ್ದಾರೆ ರವಿಚಂದ್ರನ್. ನಟ ರವಿಚಂದ್ರನ್ ಅವರು ಇನ್ನು ಏನೆನೆಲ್ಲ ಹೇಳಿದರು ಗೊತ್ತಾ. ಈ ವಿಡಿಯೋ ನೋಡಿ.  ಹಾಗೆ ರವಿಚಂದ್ರನ್ ಅವರ ಮಾತಿಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ವಿಡೀಯೋ ಶೇರ್ ಮಾಡಿ ಧನ್ಯವಾದಗಳು...