Ravichandran : ರವಿಚಂದ್ರನ್ ತಂದೆಯನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದರು ಗೊತ್ತಾ...? ಅವರ ಬಾಯಲ್ಲೇ ಕೇಳಿ

By Infoflick Correspondent

Updated:Wednesday, May 25, 2022, 08:51[IST]

Ravichandran  :  ರವಿಚಂದ್ರನ್ ತಂದೆಯನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದರು ಗೊತ್ತಾ...? ಅವರ ಬಾಯಲ್ಲೇ ಕೇಳಿ

ಕನ್ನಡ ಚಿತ್ರರಂಗದ ಖ್ಯಾತ ನಟ ವಿ ರವಿಚಂದ್ರನ್ ಅವರು ಇದೀಗ ಉನ್ನತ ಸ್ಥಾನದಲ್ಲಿದ್ದಾರೆ. ಹೌದು ವಿ ರವಿಚಂದ್ರನ್ ಅವರು ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಹಿಟ್ ಸಿನಿಮಾಗಳ ನೀಡಿ ಕನ್ನಡಕ್ಕೆ ಗೌರವ ಕೂಡ ತಂದಿದ್ದಾರೆ ಎನ್ನಬಹುದು. ಹೌದು ರವಿಚಂದ್ರನ್ ಅವರು ಸಿನಿಮಾರಂಗದಲ್ಲಿ ಬೆಳೆದ ರೀತಿಯೇ ಒಂದು ವಿಭಿನ್ನವಾದ ರೀತಿ. ಪ್ರೇಮಲೋಕದ ಸರದಾರ ಆಗಿ ಮೆರೆದವರು. ಅಂದು ಅವರ ಕುಟುಂಬದ ಜೊತೆ ಸಾಕಷ್ಟು ಕಷ್ಟಗಳನ್ನು ಎದುರಿಸಿ ನಟ ರವಿಚಂದ್ರನ್ ಅವರು ದೊಡ್ಡ ಮಟ್ಟಕ್ಕೆ ಬೆಳೆದರು. ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಅವರು ಕಂಡುಬಂದ ದೃಶ್ಯದಲ್ಲಿ, ಅವರ ತಂದೆ ಸಲುವಾಗಿ ನಟ ರವಿಚಂದ್ರನ್ ಅವರು ಎಷ್ಟು ಕಷ್ಟಪಟ್ಟಿದ್ದರು, ಹಾಗೆ ಅವರನ್ನು ಉಳಿಸಿಕೊಳ್ಳಲು ಹೇಗೆ ಪ್ರಯತ್ನ ಪಟ್ಟಿದ್ದರು ಎಂದು ಇದೀಗ ತಿಳಿದುಬಂದಿದೆ.  

ಹೌದು ಕನಸುಗಾರನ ಅಂತರಂಗದ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಅವರು ಕೆಲವೊಂದಿಷ್ಟು ವಿಚಾರ ಬಹಿರಂಗ ಪಡಿಸಿದ್ದಾರೆ. ರವಿಚಂದ್ರನ್ ಅವರು ಹೇಳುವ ಹಾಗೆ, ಶಾಂತಿ ಕ್ರಾಂತಿ ಸಿನಿಮಾಗಾಗಿ ರವಿಚಂದ್ರನ್ ಅವರು ತುಂಬಾನೇ ಕಷ್ಟ ಪಟ್ಟಿದ್ದರಂತೆ. ಸ್ವಂತ ಅವರೇ ದುಡ್ಡು ಹಾಕಿ ಸಿನಿಮಾ ಮಾಡಿದ್ದರು. ಆದರೆ ಅಂದುಕೊಂಡ ಮಟ್ಟಕ್ಕೆ ಸಿನಿಮಾ ರಿಚ್ ಆಗಲಿಲ್ಲ, ಜನರು ಸಿನಿಮಾವನ್ನು ಗೆಲ್ಲಿಸಲಿಲ್ಲ. ರವಿಚಂದ್ರನ್ ಅವರ ಬಳಿ ಆಗ ಏನು ಇರಲಿಲ್ಲವಂತೆ. ಅವರ ತಂದೆ ಶಾಂತಿ ಕ್ರಾಂತಿ ಸಿನಿಮಾದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರಂತೆ. ಆಗ ರವಿಚಂದ್ರನ್ ಅವರ ತಲೆಯಲ್ಲಿ ಓಡಿದ್ದು ಒಂದೇ, ಒಂದು ವೇಳೆ ಡಾಕ್ಟರ್ ಏನಾದರೂ ನಿಮ್ಮ ತಂದೆಯನ್ನು ಅಮೆರಿಕ ಅಥವಾ ಇನ್ಯಾವುದೋ ಫಾರಿನ್ ದೇಶಕ್ಕೆ ಕರೆದುಕೊಂಡು ಚಿಕಿತ್ಸೆ ಕೊಡಿಸಬೇಕು ಎಂದರೆ ನಾನೇನು ಮಾಡಲಿ ಎಂದು.  

ಹೌದು ತುಂಬಾ ಯೋಚನೆ ಮಾಡಿದ್ದರಂತೆ ರವಿಚಂದ್ರನ್. ಆಗ ಮದ್ರಾಸಿನಲ್ಲಿ ರಾಮಾಚಾರಿ ಸಿನಿಮಾ ನೋಡಿ ಖುಷ್ಬು ಅವರ ಜೊತೆ ಮಾತನಾಡಿ ರಾಮಾಚಾರಿ ಕಥೆ ಪರ್ಮಿಷನ್ ಕೇಳಲು ನಿರ್ದೇಶಕರ ಬಳಿ ಹೋಗಿದ್ದಾಗ 1 ಲಕ್ಷಕ್ಕೆ ಸಿನಿಮಾ ಕಥೆ ಕೊಂಡುಕೊಳ್ಳಲು ಪಿ ವಾಸು ಅವರು ಕೇಳಿದರಂತೆ. ಆಗ ರವಿಚಂದ್ರನ್ ಅವರ ಬಳಿ ಇದ್ದದ್ದು ಕೇವಲ 60000 ಉಳಿದ ಹಣವನ್ನು ರವಿಚಂದ್ರನ್ ಸ್ನೇಹಿತ ಸುಬ್ಬು ಎಂಬುವವರು ಉಳಿದ ಹಣಕೊಟ್ಟರು, ನಂತರ ಸಿನಿಮಾವನ್ನು ತಂದರು ಎಂದು ಹೇಳಲಾಗುತ್ತಿದೆ. ನಂತರ ಮಾಲಾಶ್ರೀ ಅವರನ್ನು ಜೊತೆಗೆ ಕರೆದುಕೊಂಡು ಡಿಸ್ಟ್ರಿಬ್ಯೂಟರ್ ಹಣದಿಂದಲೆ ರಾಮಾಚಾರಿ ಸಿನಿಮಾ ಮಾಡಿ, ನಮ್ಮ ತಂದೆ ಗೋಸ್ಕರ ದುಡ್ಡು ಕೈಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಉದ್ದೇಶದಿಂದ ರಾತ್ರೋರಾತ್ರಿ ಸಿನಿಮಾ ಮಾಡಿ ಗೆದ್ದೆವು ಎಂಬುದಾಗಿ ಈಗ ನಟ ರವಿಚಂದ್ರನ್ ಅವರು ಹೇಳಿಕೊಂಡಿದ್ದಾರೆ.

ಹೌದು ರವಿಚಂದ್ರನ್ ಅವರು ಅಂದು ಅವರ ತಂದೆಯ ಸಲುವಾಗಿಯೇ ತುಂಬಾ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಈಗ ಅವುಗಳ ನೆನಪು ಮಾಡಿಕೊಂಡ ರವಿಚಂದ್ರನ್ ಅವರು ಈ ರೀತಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...