ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಮುಂದಿನ ನಾಯಕಿ ಯಾರು ಗೊತ್ತಾ..?

By Infoflick Correspondent

Updated:Wednesday, June 29, 2022, 10:34[IST]

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಮುಂದಿನ ನಾಯಕಿ ಯಾರು ಗೊತ್ತಾ..?

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ನಿರ್ಮಾಣದ ಸಿನಿಮಾಗಳು ಅದ್ಧೂರಿಯಾಗಿಯೂ, ವಿಭಿನ್ನವಾಗಿಯೂ ಇರುತ್ತದೆ. ಬಾಲಿವುಡ್‌ ನಿಂದ ನಾಯಕಿಯರನ್ನು ಕರೆ ತಂದು ರವಿಚಂದ್ರನ್‌ ಅವರು ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ರವಿಚಂದ್ರನ್‌ ಅವರು, ಸೌಂದರ್ಯ, ಪ್ರೇಮಾ, ಮಾಲಾಶ್ರೀ, ಶಿಲ್ಪಾಶೆಟ್ಟಿ, ಪ್ರಿಯಾಂಕಾ ಉಪೇಂದ್ರ, ಸುಧಾರಾಣಿ, ಜೂಹಿಚಾವ್ಲಾ ಸೇರಿದಂತೆ ಹಲವು ನಾಯಕಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಇದೀಗ ತಮ್ಮ ಮುಂದಿನ ಚಿತ್ರದ ಹಿರೋಯಿನ್‌ ಬಗ್ಗೆ ಮಾತನಾಡಿದ್ದಾರೆ.


ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ಕೋಟಿ ರಾಮು ಅವರು ಕೊರೊನಾ ಸೋಂಕಿನಿಂದ ಕಳೆದ ವರ್ಷ ಏಪ್ರಿಲ್ 26 ನಿಧನರಾದ ಸಂಗತಿ ಎಲ್ಲರಿಗೂ ಗೊತ್ತಿದೆ. ಕೋಟಿ ರಾಮು ಅವರಿಗೆ ತಮ್ಮ ಪತ್ನಿ, ಮಕ್ಕಳು ಎಂದರೆ, ಪಂಚಪ್ರಾಣ. 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇನ್ನು ಕಾರ್ಯಕ್ರಮವೊಂದರಲ್ಲಿ ರಾಮು ಅವರ ಬಗ್ಗೆ ಮಾತನಾಡಿದ ರವಿಚಂದ್ರನ್‌ ಅವರು ಮಾಲಾಶ್ರೀ ಅವರ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ತಮಗೆ ಕಷ್ಟವಿದ್ದಾಗ ಮಲ್ಲ ಚಿತ್ರ ಮಾಡಿದ್ದರು. ಈಗ ಈ ಖುಣ ತೀರಿಸಲು ತಾವು ಮಲ್ಲ-೨ ಚಿತ್ರದಲ್ಲಿ ಮಾಲಾಶ್ರೀ ಜೊತೆಗೆ ಮಾಡುವುದಾಗಿ ಹೇಳಿದ್ದಾರೆ.


ಅಷ್ಟೇ ಅಲ್ಲದೇ, ಮಾಲಾಶ್ರೀ ಅವರ ಮಗಳನ್ನು ತಮ್ಮ ಮುಂದಿನ ಚಿತ್ರದ ನಾಯಕಿ ಎಂದು ಹೇಳಿದ್ದು, ಒಮದಾ ನಿಮ್ಮ ಮಗಳನ್ನು ನನ್ನ ನಾಯಕಿಯಾಗಲಿ ಇಲ್ಲವೇ ನನ್ನ ಮಗನ ನಾಯಕಿಯಾಗಿ ನಟಿಸುತ್ತಾಳೆ ಎಂದು ರವಿಚಂದ್ರನ್‌ ಅವರು ಹೇಳಿದ್ದಾರೆ. ಈ ಮೂಲಕ ರವಿಚಂದ್ರನ್‌ ಅವರು ಮಾಲಾಶ್ರೀ ಅವರಿಗೆ ಬೆಂಬಲ ನೀಡಿದರು. ಮಾಲಾಶ್ರೀ ಅವರು ಸಿನಿಮಾ ನಿರ್ಮಾಣವನ್ನು ಮುಂದುವರಿಸಿಕೊಂಡು ಹೋಗಬೇಕು. ನಾವು ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಹೇಳಿದ್ದಾರೆ.