Ravichandran : ಹುಡುಗಿಯರ ಮೈ ಟಚ್ ಮಾಡದೆ ಸಿನಿಮಾ ಮಾಡೋಕೆ ಆಗೋದಿಲ್ವಾ ಎಂದಿದ್ದ ರವಿಚಂದ್ರನ್ ಪತ್ನಿ..! ಆಗಿದ್ದೇನು..?

By Infoflick Correspondent

Updated:Monday, June 27, 2022, 22:41[IST]

Ravichandran :  ಹುಡುಗಿಯರ ಮೈ ಟಚ್ ಮಾಡದೆ ಸಿನಿಮಾ ಮಾಡೋಕೆ ಆಗೋದಿಲ್ವಾ ಎಂದಿದ್ದ ರವಿಚಂದ್ರನ್ ಪತ್ನಿ..! ಆಗಿದ್ದೇನು..?

ಭಾರತ ಸಿನಿರಂಗದಲ್ಲಿ ಈಗಲೂ ಕೂಡ ಹೆಚ್ಚು ಹೆಸರು ಉಳಿಸಿಕೊಂಡಿರುವ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಅಪಾರ ಅಭಿಮಾನಿ ಬಳಗ ಇರಬಹುದು ನಿಮಗೂ ಕೂಡ ಗೊತ್ತಿದೆ. ಹೌದು ಭಾರತ ಚಿತ್ರರಂಗದಲ್ಲಿ ಬೇರೆ ಬೇರೆ ರೀತಿಯ ಟ್ಯಾಲೆಂಟ್ ಹೊಂದಿರುವ ನಿರ್ದೇಶಕರು ಇದ್ದಾರೆ. ಹಾಗೂ ಜನಪ್ರಿಯ ನಿರ್ಮಾಪಕರು ಸಹ ಇದ್ದಾರೆ. ಹಾಗೆ ಸಾಹಿತಿಗಾರರು, ಹಾಡುಗಾರರು, ಸಂಗೀತ ನಿರ್ದೇಶಕರು, ಎಲ್ಲವನ್ನೂ ಕೂಡ ಒಬ್ಬರೆ ಮಾಡುವುದಕ್ಕೆ ಆಗುವುದಿಲ್ಲ. ಅಂತಹ ಜನರು ತುಂಬಾ ಕಡಿಮೆ ಎನ್ನಬಹುದು. ಅಂತವರ ಸಾಲಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಂದಿದ್ದರು. ಒಂದೇ ಸಿನಿಮಾದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ, ಸಂಗೀತ ಕೊಟ್ಟು, ಹಾಗೆ ಸಾಹಿತಿ ಆಗಿ ಸಂಕಲನಕಾರರಾಗಿ ಎಲ್ಲಾ ವಿಧದಲ್ಲಿಯೂ ಕೂಡ ನಟ ರವಿಚಂದ್ರನ್ ಅವರ ನೈಪುಣ್ಯ ಹೊಂದಿದ್ದಂಥವರು.    

ನಟ ರವಿಚಂದ್ರನ್ ಅವರ ಜೊತೆ ನಟಿಮಣಿಯರಿಗೆ ನಟನೆ ಮಾಡುವ ಅವಕಾಶ ಬಂದರೆ, ನಟಿಯರು ಹಿಂದುಮುಂದು ನೋಡದೆ ಒಪ್ಪಿಕೊಳ್ಳುತ್ತಿದ್ದರಂತೆ. ಕಾರಣ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿಯೇ ಆದ್ಯತೆ ಕೊಟ್ಟಿರುತ್ತಾರೆ. ಹಾಗೆ ಅವರನ್ನು ಸುಂದರವಾಗಿ ಅಲಂಕಾರ ಮಾಡಿ ತೋರಿಸುತ್ತಾರೆ. ಅವರ ಕಾಸ್ಟ್ಯೂಮ್ ಎಲ್ಲಾ ಬೇರೆ ಬೇರೆ ವಿಭಿನ್ನವಾಗಿ ತೋರಿಸುವ ಕೆಲಸ ನಟ ರವಿಚಂದ್ರನ್ ಅವರದು. ಹಾಗೆ ರವಿಚಂದ್ರನ್ ಅವರ ಸಿನಿಮಾದಲ್ಲಿ ಹಣ್ಣುಗಳು ಮತ್ತು ಹೂವುಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನಲಾಗಿ, ಕೇವಲ ಬಾಲಿವುಡ್ ನಟಿಯರು ಮಾತ್ರವೇ ಅಲ್ಲದೆ ಬೇರೆ ಭಾಷೆಯ ನಟಿಯರು ಕೂಡ ರವಿಚಂದ್ರನ್ ಅವರ ಜೊತೆ ನಟನೆ ಮಾಡಲು ಅವಕಾಶ ಬಂದ ತಕ್ಷಣ ಒಪ್ಪಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಹೌದು ರವಿಚಂದ್ರನ್ ಅವರು ಸಿನಿಮಾದಲ್ಲಿ ಇನ್ನೊಂದಕ್ಕೆ ಹೆಚ್ಚು ಫೇಮಸ್. ಅದುವೇ ರೋಮ್ಯಾನ್ಸ್ ಎನ್ನಬಹುದು. ಹೌದು ರೋಮ್ಯಾಂಟಿಕ್ ಆಗಿ ನಟ ರವಿಚಂದ್ರನ್ ಅವರು ಕಾಣಿಸುತ್ತಿದ್ದ ರೀತಿಗೆ ಈಗಲೂ ಇವರಿಂದ ಲವ್ ವಿಷಯ ಕಲಿಯುತ್ತಾರೆ. ಇನ್ನೂ ಕೆಲ ಹುಡುಗಿಯರಿಗೆ ರವಿಚಂದ್ರನ್ ಅವರು ಕ್ರಶ್ ಸಹ ಆಗಿದ್ದಾರೆ. ಇತ್ತೀಚಿಗೆ ಅವರ ಮಗನಾದ ವಿಕ್ರಮ್ ರವಿಚಂದ್ರನ್ ನಟನೆಯ ತ್ರಿವಿಕ್ರಮ ಸಿನಿಮಾ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಆಗ ನಟ ರವಿಚಂದ್ರನ್ ಅವರ ಪತ್ನಿ ಸುಮತಿ ಅವರು ಒಂದು ಬಾರಿ ರವಿಚಂದ್ರನ್ ಅವರಿಗೆ ಹುಡುಗಿಯರನ್ನು ಮುಟ್ಟದೇ ನಿಮಗೆ ನಟನೆ ಮಾಡಲು ಬರುವುದಿಲ್ಲವೇ, ಅಥವಾ ಆ ರೀತಿ ಸಿನಿಮಾ ತೆಗೆಯಲು ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರಂತೆ.. ಅದೇ ವಿಚಾರವನ್ನು ಸ್ಟೇಜ್ ಮೇಲೆ ರವಿಚಂದ್ರನ್ ಅವರ ಹೇಳಿ ನಕ್ಕುಬಿಟ್ಟರು. ಹೌದು ಪತ್ನಿ ಸುಮತಿಯವರು ಆ ಪ್ರಶ್ನೆ ಕೇಳುತ್ತಿದ್ದಂತೆ ನಟ ರವಿಚಂದ್ರನ್ ಅವರಿಗೆ ನಿಜಕ್ಕೂ ಶಾಕ್ ಆಗಿತ್ತಂತೆ. ಹಾಗಾಗಿ ನಕ್ಕು ಏನನ್ನೂ ಹೇಳದೆ ಸುಮ್ಮನೆ ಆಗಿ ಬಿಟ್ಟರು ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದ..