Meghana Raj : ಪ್ರತಿಬಾರಿ ಅಪ್ಪ ಎನ್ನುತ್ತಿದ್ದ ರಾಯನ್ ರಾಜ್ ಅಮ್ಮ ಎಂದ ಮೊದಲ ಕ್ಷಣ..! ಕ್ಯೂಟ್ ವಿಡೀಯೋ ವೈರಲ್
Updated:Wednesday, May 11, 2022, 12:26[IST]

ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿ ಆರಂಭದದಿನಗಳಲ್ಲಿ ತುಂಬಾನೇ ಪ್ರಸಿದ್ಧಿ ಪಡೆದಿದ್ದ ನಟಿ ಮೇಘನಾ ರಾಜ್ ಚಿರು ಜೋಡಿ ಎಲ್ಲರಿಗೂ ಹೆಚ್ಚು ಇಷ್ಟವಾಗಿತ್ತು. ಅಭಿಮಾನಿಗಳು ಈ ಜೋಡಿ ಮದುವೆ ನೋಡಿ ವಾವ್ ಮೇಡ್ ಫಾರ್ ಈಚ್ ಅದರ್ ಎಂದು ಶುಭಕೋರಿದ್ದರು. ಹಾಗೆಯೇ ಈ ಜೋಡಿ ಎಲ್ಲರಿಗೂ ಮೋಡಿ ಮಾಡುವಂತೆ ಕಂಡಿತ್ತು ಎನ್ನಬಹುದು. ನಟಿ ಮೇಘರಾಜ್ ಕನ್ನಡ ಸಿನಿಮಾರಂಗದಲ್ಲಿ ಅವರದೇ ಆದ ಅಭಿಮಾನಿ ಬಳಗವ ಈಗಾಗಲೇ ಗಿಟ್ಟಿಸಿಕೊಂಡಿದ್ದಾರೆ. ಹೌದು ಮದುವೆ ಆಗುವ ಮುನ್ನ ನಟಿ ಮೇಘನಾ ರಾಜ್ ಅವರು ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದರು. ಬಳಿಕ ನಟ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾಗುವ ವಿಷಯ ಪ್ರಸ್ತಾಪಿಸಿ ಆಶೀರ್ವಾದ ಪಡೆದು ಮದುವೆಯಾದರು.
ಆದರೆ ದೇವರಿಗೆ ಈ ಜೋಡಿ ಸಾಕಷ್ಟು ವರ್ಷಗಳ ಕಾಲ ಜೊತೆಯಾಗಿರುವುದ ಸಹಿಸಲಿಲ್ಲ. ಹೊಟ್ಟೆಕಿಚ್ಚು ಆಯಿತೊ ಗೊತ್ತಿಲ್ಲ, ಆದರೆ ಚಿರು ಅವರನ್ನ ಬೇಗನೇ ಎಲ್ಲರಿಂದಲೂ ಕಿತ್ತುಕೊಂಡುಬಿಟ್ಟ. ಸರ್ಜಾ ಕುಟುಂಬಕ್ಕೆ, ಕನ್ನಡ ಸಿನಿರಂಗಕ್ಕೆ ಹಾಗೆ ಮೇಘನ ರಾಜ್ ಅವರಿಗೆ ತುಂಬಲಾರದ ನೋವನ್ನು ನೀಡಿ ಬಿಟ್ಟ. ಹೌದು ಚಿರಂಜೀವಿ ಸರ್ಜಾ ಅಗಲಿದ ಬಳಿಕ ಜೀವನವೇ ಬೇಡ ಎನ್ನುವಷ್ಟು ನೋವ ತುಂಬಿಕೊಂಡಿದ್ದ ಮೇಘನಾ ರಾಜ್ ಚಿರು ಅವರ ಮಗುವಿಗಾಗಿ ಬದುಕಿದರು. ಮಗು ಕೂಡ ಜನನವಾಯಿತು, ಚಿರು ಪುತ್ರನ ಭರ್ಜರಿ ನಾಮಕರಣ ಸಹ ಆಯಿತು. ಇದೀಗ ಚಿರು ರೂಪದಲ್ಲಿ ರಾಯನ್ ಬಂದಿದ್ದಾನೆ.. ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಮಗನ ಖುಷಿಯ ಕ್ಷಣಗಳನ್ನು ಮೇಘನಾ ಹಂಚಿಕೊಳ್ಳುತ್ತಿದ್ದರು. ಆಗ ಸಾಕಷ್ಟು ಬಾರಿ ಅಪ್ಪ ಎಂದಿದ್ದ ಚಿರಂಜೀವಿ ಪುತ್ರ ಇದೀಗ ಮೊದಲ ಬಾರಿ ಅಮ್ಮ ಎಂದಿದ್ದಾನಂತೆ.
ಮೇಘನಾ ಅವರ ಎದುರು ರಾಯನ್ ರಾಜ್ ಅಮ್ಮ ಎಂದಾಗ ಮೇಘನಾ ಅವರ ಆ ಖುಷಿ ಹೇಗಿತ್ತು ಗೊತ್ತಾ. ವಿಡೀಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮೇಘನಾ ರಾಜ್ ಅವರ ಬಾಯಲ್ಲಿಯೇ ಅವರ ಖುಷಿಯ ಕೇಳಿ. ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ. ಹಾಗೆ ಕ್ಯೂಟ್ ವಿಡಿಯೋ ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ...