Meghana Raj : ರಾ ರಾ ರಕ್ಕಮ್ಮ ಹಾಡಿಗೆ ಚಿರಂಜೀವಿ ಸರ್ಜಾ ಮಗ ಡ್ಯಾನ್ಸ್ ಮಾಡಿದನಾ..? ಕ್ಯೂಟ್ ವಿಡೀಯೋ ನೋಡಿ

By Infoflick Correspondent

Updated:Tuesday, July 5, 2022, 14:40[IST]

Meghana Raj :  ರಾ ರಾ ರಕ್ಕಮ್ಮ ಹಾಡಿಗೆ ಚಿರಂಜೀವಿ ಸರ್ಜಾ ಮಗ ಡ್ಯಾನ್ಸ್ ಮಾಡಿದನಾ..? ಕ್ಯೂಟ್ ವಿಡೀಯೋ ನೋಡಿ

ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಯಾರಿಗೆ ತಾನೇ ನೋವಾಗಿಲ್ಲ ಹೇಳಿ.. ಹೌದು ಇನ್ನು ಸಾಕಷ್ಟು ವರ್ಷ ಸಮಯ ಇತ್ತು, ಬದುಕಿ ಬಾಳಬೇಕಾಗಿದ್ದ ನಟ ಚಿರಂಜೀವಿ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದು ವಿಷಾದನೀಯ. ಸಿನಿಮಾರಂಗದಲ್ಲಿ ಅವರದೇ ಆದ ವಿಶೇಷ ನಟನೆಯ ಮುಕಾಂತರ ಎಲ್ಲರ ಗಮನ ಸೆಳೆದಿದ್ದರು ಚಿರು. ಹಾಗೆ ಚಿರು ಎಂದೇ ಹೆಚ್ಚು ಖ್ಯಾತಿ ಹೊಂದಿ ಎಲ್ಲರೊಟ್ಟಿಗೆ ನಗುತ್ತಲೇ ಹೆಚ್ಚು ಇರುತ್ತಿದ್ದ ವ್ಯಕ್ತಿ. ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎಂದ ತಕ್ಷಣ ಹೆಚ್ಚು ನೋವು ಮತ್ತು ಪತ್ನಿ ಮೇಘನಾ ರಾಜ್ ಅವರು ಕಣ್ಣೀರಿಟ್ಟಿದ್ದ ಆ ದೃಶ್ಯಗಳು  ಈಗಲೂ ಅಭಿಮಾನಿಗಳ ಮನಸ್ಸಿಗೆ ನೋವ ತರುತ್ತವೆ.ಆಗ ನಟಿ ಮೇಘನಾ ರಾಜ್ ಅವರು ಗರ್ಭಿಣಿ ಆಗಿದ್ದಾರೆ ಎನ್ನುವ ವಿಷಯ ಹೊರ ಬರುತ್ತಿದ್ದಂತೆ, ದೇವರು ಚಿರಂಜೀವಿ ಸರ್ಜಾ ಅವರನ್ನು ತನ್ನ ಬಳಿ ಕರೆಸಿಕೊಂಡರೂ ಮತ್ತೊಂದು ಜೀವ ಕೊಟ್ಟ ಎಂದು ಸಮಾದಾನ ಮಾಡಿಕೊಂಡರು.

ಹೌದು ಮಗನ ರೂಪದಲ್ಲಿ ಮತ್ತೆ ಚಿರಂಜೀವಿ ಅವರನ್ನೇ ಕಳಿಸಿಕೊಟ್ಟಿದ್ದಾನೆ ದೇವರು ಎನ್ನಲಾಗಿ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಖುಷಿಪಟ್ಟರು. ಹೌದು ಇದೀಗ ಜೂನಿಯರ್ ಚಿರು ಆಗಿ ರಾಯನ್ ರಾಜ ಸರ್ಜಾ ಅವರ ತಾಯಿ ಮೇಘನಾ ರಾಜ್ ಅವರ ಬಳಿ ಬೆಳೆಯುತ್ತಿದ್ದಾನೆ. ಅಮ್ಮನ ಆರೈಕೆಯಲ್ಲಿ ಸಂತೋಷದಲ್ಲಿದ್ದಾನೆ ರಾಯನ್ ಎಂದು ಹೇಳಬಹುದು. ಮೇಘನಾ ರಾಜ್ ಅವರು ಕೂಡ ಮಗನ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದು, ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಹೌದು, ಕಳೆದ ಕೆಲವು ದಿನಗಳ ಹಿಂದೆ ಮೇಘನಾ ರಾಜ್ ಅವರ ಮನೆಗೆ ನಟಿ ಶೃತಿ ಹಾಗೂ ಅವರ ಮಗಳು ಹೋಗಿ ಮಾತನಾಡಿಕೊಂಡು ಬಂದಿದ್ದರು.

ಆಗ ಜೂನಿಯರ್ ಚಿರುವನ್ನ ನಟಿ ಶ್ರುತಿ ಅವರ ಮಗಳು ಎತ್ತಿಕೊಂಡು ಆಟ ಆಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಜೊತೆಗೆ ಡ್ಯಾನ್ಸ್ ಸಹ ಮಾಡಿದ್ದನು ರಾಯನ್. ಹೌದು ಅದೇ ವಿಡಿಯೋಗೆ ಇದೀಗ ರಾ ರಾ ರಕ್ಕಮ್ಮ ಹಾಡನ್ನು ಸೆಟ್ ಮಾಡಲಾಗಿದೆ. ವಿಕ್ರಂತ್ ರೋಣ ಸಿನಿಮಾದ ಹಾಡನ್ನು ಅಳವಡಿಸಿದ್ದು, ರಾಯನ್ ರಾಜ್ ಸರ್ಜಾ ಹಾಕಿದ್ದ ಈ ಡ್ಯಾನ್ಸ್ ಸ್ಟೆಪ್ ವಿಡಿಯೋ ಈಗ ಬಾರಿ ವೈರಲಾಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ. ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ, ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು.