Meghana Raj : ಅಪ್ಪನ ಫೋಟೋಗೆ ನಮಸ್ಕಾರ ಮಾಡಿದ ರಾಯನ್ ರಾಜ್ ಸರ್ಜಾ..! ಪುಣ್ಯಸ್ಮರಣೆಯ ಈ ದೃಶ್ಯ ಕಣ್ಣೀರು ತರಿಸುತ್ತೇ

By Infoflick Correspondent

Updated:Wednesday, June 8, 2022, 07:30[IST]

Meghana Raj :  ಅಪ್ಪನ ಫೋಟೋಗೆ ನಮಸ್ಕಾರ ಮಾಡಿದ ರಾಯನ್ ರಾಜ್ ಸರ್ಜಾ..! ಪುಣ್ಯಸ್ಮರಣೆಯ ಈ ದೃಶ್ಯ ಕಣ್ಣೀರು ತರಿಸುತ್ತೇ

ಕನ್ನಡದ ಯುವ ನಾಯಕ ನಟ ಆಗಿ ಗುರುತಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಯಾರಿಗೂ ಕೂಡ ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಎರಡು ವರ್ಷಗಳಾಗಿವೆ. ಈಗಲೂ ಸಹ ಅವರ ಅಗಲಿಕೆ  ಹೆಚ್ಚು ಕಾಡುತ್ತದೆ ಎನ್ನಬಹುದು. ಈ ಸಿನಿರಂಗದಲ್ಲಿ ತನ್ನದೇ ಆದ ಪ್ರತಿಭೆ ಹೊಂದಿದ್ದ ನಟ ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಸಿನಿಮಾಗಳ ಕೊಡುಗೆ ನೀಡಿ ಹೋಗಿದ್ದಾರೆ. ಹಾಗೆ ಚಿರಂಜೀವಿ ಸರ್ಜಾ ಅವರ ಅಪಾರ ಅಭಿಮಾನಿ ಬಳಗ ಕೂಡ ಅವರ ಅಭಿನಯಕ್ಕೆ ಇತ್ತು ಎನ್ನಬಹುದು. ನಟ ಚಿರಂಜೀವಿ ಸರ್ಜಾ ಅವರು ಇಲ್ಲ ಎಂದ ತಕ್ಷಣ ಇಡೀ ಕರುನಾಡೆ ಕಣ್ಣೀರು ಹಾಕಿದ್ದು, ದೇವರು ಎಂತಹ ಕ್ರೂರಿ ಎಂದು ಎಲ್ಲರೂ ಹಿಡಿಶಾಪ ಎರಡು ವರ್ಷದ ಹಿಂದಿನ ಈ ದಿನ ಹಾಕಿದರು.

ಹೌದು ನಟಿ ಮೇಘನಾ ರಾಜ್ ಅವರ ಜೊತೆ ಪ್ರೀತಿ ಮಾಡಿ ಮದುವೆಯಾಗಿದ್ದ ನಟ ಚಿರಂಜೀವಿ ಸರ್ಜಾರ ಅಕಾಲಿಕ ಮರಣ ನಿಜಕ್ಕೂ ಕಣ್ಣೀರು ಬರುತ್ತದೆ. ಹೌದು ಚಿರಂಜೀವಿ ಸರ್ಜಾ ಅವರು ಕಾಲವಾಗುತ್ತಿದ್ದ ಹಾಗೇನೇ ಅವರ ಪತ್ನಿ ನಟಿ ಮೇಘನ ರಾಜ್ ಅವರು ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿತು. ಆನಂತರ ಆಗಿದ್ದನ್ನೇಲ್ಲವನ್ನು ಸಹ ನೀವು ನೋಡಿದ್ದೀರಿ. ಅವರ ಮಗನ ರೂಪದಲ್ಲಿ ಮತ್ತೆ ಚಿರಂಜೀವಿ ಸರ್ಜಾ ಅವರು ಹುಟ್ಟಿಬಂದರು. ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರು ಹಿಟ್ಟಾಯ್ತು. 

ಇದೀಗ ಮಗನೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿರುವ ಮೇಘನಾ ರಾಜ್ ಅವರು ಮಗನ ಮುಖ ನೋಡಿಕೊಂಡು ಪತಿ ಚಿರುವಿನ ನೆನಪಿನಲ್ಲಿ ಜೀವನ ಮಾಡುತ್ತಿದ್ದಾರೆ. ಇಂದು ಚಿರಂಜೀವಿ ಸರ್ಜಾ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ದಿನ.

ಚಿರು ಸಮಾಧಿಗೆ ಹೋಗಿ ಇಡೀ ಕುಟುಂಬ ಪೂಜೆ ಸಲ್ಲಿಸಿ ಬಂದಿದೆ. ಮೇಘನಾ ರಾಜ್, ಸುಂದರರಾಜ್, ಅವರ ತಾಯಿ ಪ್ರಮೀಳಾ ಜೋಷಾಯಿ ಹಾಗೂ ಧ್ರುವ ಸರ್ಜಾ ಹಾಗೂ ಪ್ರೇರಣ ಅವರು ಕೂಡ ಆಗಮಿಸಿದ್ದರು. ಚಿರು ಅವರ ಅಜ್ಜಿ ಕೂಡ ಆಗಮಿಸಿದ್ದರು. ಚಿರು ಅವರ ಮಗನಾದ ರಾಯನ್ ಕೂಡ ಬಂದಿದ್ದನು. ಮಗ ರಾಯನ್ ರಾಜ್ ಸರ್ಜಾ ಅಪ್ಪನ ಫೋಟೋಗೆ ನಮಸ್ಕರಿಸಿದ ಈ ದೃಶ್ಯದ ವಿಡಿಯೋ ನಿಜಕ್ಕೂ ಕಣ್ಣೀರು ತರಿಸುತ್ತೆ. ಇಲ್ಲಿದೆ ನೋಡಿ ವಿಡಿಯೋ. ಈ ಮಾಹಿತಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit : news alert )