ಅಪ್ಪನ ಚಿತ್ರದಲ್ಲಿ ನಟಿಸಿದ ಮಗ, ಅಣ್ಣನಿಗೆ ಧ್ವನಿ ನೀಡಿದ ತಮ್ಮ: ಯಾರ ಸಿನಿಮಾ ಅಂತ ಯೋಚಿಸ್ತಿದ್ದೀರಾ ಈ ಸುದ್ದಿ ನೋಡಿ..

By Infoflick Correspondent

Updated:Wednesday, April 13, 2022, 16:37[IST]

ಅಪ್ಪನ ಚಿತ್ರದಲ್ಲಿ ನಟಿಸಿದ ಮಗ, ಅಣ್ಣನಿಗೆ ಧ್ವನಿ ನೀಡಿದ ತಮ್ಮ: ಯಾರ ಸಿನಿಮಾ ಅಂತ ಯೋಚಿಸ್ತಿದ್ದೀರಾ ಈ ಸುದ್ದಿ ನೋಡಿ..

8 ವರ್ಷಗಳ ಕಾಲ ಪ್ರೀತಿಸಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಸಪ್ತಪದಿ ತುಳಿದಿದ್ದರು. ಆದರೆ ಚಿರಂಜೀವಿ ಸರ್ಜಾ ಅಜಾನಕ್ ಆಗಿ 2020ರಲ್ಲಿ ಕೊನೆಯುಸಿರೆಳೆದರು. ಆಗ ಮೇಘನಾ ರಾಜ್ 5 ತಿಂಗಳ ಗರ್ಭಿಣಿ ಆಗಿದ್ದರು. ಪತಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ ಮೇಘನಾ ರಾಜ್ ಬಾಳಲ್ಲಿ ರಾಯನ್ ರಾಜ್ ಸರ್ಜಾ ಜನನ ಹೊಸ ಬೆಳಕನ್ನು ಮೂಡಿಸಿತ್ತು. ಚಿರಂಜೀವಿ ಸರ್ಜಾ ಸಾವಿನಿಂದ ಎರಡೂ ಕುಟುಂಬಗಳಲ್ಲಿ ಮೂಡಿದ್ದ ಕಾರ್ಗತ್ತಲು ಮಗುವಿನಿಂದ ಸರಿದಿತ್ತು. 

ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದ ಮೇಘನಾ ರಾಜ್ ಈಗ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾಗಾಗಿ. ಮಗನ ಭವಿಷ್ಯಕ್ಕಾಗಿ ಮೇಘನಾ ತಮ್ಮ ಜೀವನ ಶೈಲಿಯನ್ನುಬದಲಾಯಿಸಿಕೊಂಡಿದ್ದಾರೆ. ಇದೀಗ ಬಮದಿರುವ ಸಿಹಿ ಸುದ್ದಿ ಏನೆಂದರೆ, ಚಿರಂಜೀವಿ ಸರ್ಜಾ ನಟಿಸಿದ ಸಿನಿಮಾದಲ್ಲಿ ರಾಯನ್ ರಾಜ್ ಸರ್ಜಾ ನಟಿಸಿದ್ದಾನೆ. ಹೌದು.. ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಚಿತ್ರ ಎಂದರೆ ಅದು ರಾಜಮಾರ್ತಾಂಡ. ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ನಟಿಸಿದಂತೆಯೇ ಈಗ ರಾಜಮಾರ್ತಾಂಡ ಚಿತ್ರದಲ್ಲಿ ರಾಯನ್ ರಾಜ್ ಸರ್ಜಾ ಅನ್ನು ಕೂಡ ತೋರಿಸಲಾಗಿದೆ.

ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿತ್ತು. ಆದರೆ ಇದಕ್ಕೆ ಡಬ್ಬಿಂಗ್ ಮಾಡುವ ಮುನ್ನವೇ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದರು.    

ಇದೀಗ ೀ ಚಿತ್ರ ರಿಲೀಸ್ ಗೆ ಸಜ್ಜಾಗಿದ್ದು, ವಾಯ್ಸ್ ಡಬ್ಬಿಂಗ್ ಅನ್ನು ಚಿರಂಜೀವಿ ಸರ್ಜಾ ಸಹೋದರ ಧೃವ ಸರ್ಜಾ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಶಿವರಾಜ್ ಕುಮಾರ್ ಕಂಠ ದಾನ ಮಾಡುವಂತೆಯೇ ಅಣ್ಣನ ಚಿತ್ರಕ್ಕೆ ಧೃವ ಕಂಠ ದಾನ ಮಾಡಿದ್ದಾರೆ. ಇನ್ನು ರಾಜಮಾರ್ತಾಂಡ ಚಿತ್ರವನ್ನು ಯಾವಾಗ ರಿಲೀಸ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.