ನಟಿ ಚೇತನಾ ಸಾವಿನ ಸಂಪೂರ್ಣ ವಿವರ ಇಲ್ಲಿದೆ ನಿಜವಾಗಿ ಆಗಿದ್ದೇನು ಗೊತ್ತೆ ?

By Infoflick Correspondent

Updated:Thursday, May 19, 2022, 12:25[IST]

ನಟಿ ಚೇತನಾ ಸಾವಿನ ಸಂಪೂರ್ಣ ವಿವರ ಇಲ್ಲಿದೆ ನಿಜವಾಗಿ ಆಗಿದ್ದೇನು ಗೊತ್ತೆ ?

ಸಿನಿಮಾ ಕ್ಷೇತ್ರದಲ್ಲಿರುವವರು ತಮ್ಮ ದೇಹ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಕೆಲವರು ಡಯೆಟ್‌ ಮೂಲಕ ತಮ್ಮ ಆಂಗಿಕ ಸೌಂದರ್ಯ ಕಾಪಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ವಿವಿಧ ರೀತಿಯ ಸರ್ಜರಿ ಮೂಲಕ ತಮ್ಮ ಮೈಕಾಂತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ವಿವಿಧ ರೀತಿಯ ಕಾಸ್ಮೆಟಿಕ್‌ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ನಿಧನರಾದ ನಟಿ ಚೇತನಾ ಅವರ ಸಾವಿನ ಕಾರಣದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ  

ತೆಳ್ಳಗಾಗುವ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವನ್ನು ಸ್ವತಃ ಚೇತನಾ ರಾಜ್ ಕೂಡ ಪಾಲಕರಿಗೆ ಹೇಳಿರಲಿಲ್ಲವಂತೆ. ತಮ್ಮ ಸ್ನೇಹಿತೆಯರ ಜೊತೆಯಾಗಿ ಅವಳು ಆಸ್ಪತ್ರೆ ಸೇರಿದ್ದಾಳೆ. ಈ ವಿಷಯ ಪಾಲಕರಿಗೆ ಗೊತ್ತಾಗುವ ಮುಂಚೆಯೇ ಚೇತನಾ ರಾಜ್ ಅವರನ್ನು ಸ್ನೇಹಿತೆಯರು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡರು. 

ಆದರೆ ತಾನು ದಪ್ಪ ಇರುವುದಾಗಿ ಭಾವಿಸಿದ ಚೇತನಾ ರಾಜ್, ಅದಕ್ಕಾಗಿ ಸರ್ಜರಿ ಮಾಡಿಸಿ ದೇಹದ ತೂಕ ಕಡಿಕೆ ಮಾಡಬೇಕು ಎಂದು, ಬೆಂಗಳೂರಿನ ನವರಂಗ್ ಸರ್ಕಲ್ ಬಳಿ ಇರುವ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿ ಮಾಡಿಸಲು ನಿರ್ಧಾರ ಮಾಡಿ, ತಂದೆ ತಾಯಿ ಜೊತೆಗೆ ಈ ವಿಷಯ ಹೇಳುತ್ತಾರೆ, ತಂದೆ ತಾಯಿ ಒಪ್ಪದ ಕಾರಣ ಯಾರಿಗೂ ಹೇಳದೆ ನಿನ್ನೆ ಬೆಳಗ್ಗೆ 9;30 ಗಂಟೆಗೆ ಅಡ್ಮಿಟ್ ಆಗಿ, ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಜರಿ ಮಾಡುವ ಸಮಯದಲ್ಲಿ ಶ್ವಾಸಕೋಶಕ್ಕೆ ನೀರು ಸೇರಿಕೊಂಡು, ನಂತರ ಉಸಿರಾಟಕ್ಕೆ ಸಮಸ್ಯೆ ಆಗಲು ಶುರುವಾಗಿದೆ. 

ಬಳಿಕ ನಾಲ್ಕು ಗಂಟೆಗಳ ಕಾಲ ಚೇತನಾ ಅವರಿಗೆ ಚಿಕಿತ್ಸೆ ನೀಡಿ, ಅದು ಫಲಕಾರಿಯಾಗದೆ, ಬೇರೆ ಆಸ್ಪತ್ರೆಗೆ ಕಳಿಸಿದ್ದಾರೆ. ಆದರೆ ಬೇರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಚೇತನಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು.(Video credit : trending in kannada)