ಅಸಲಿಗೆ ರೇಖಾ ದಾಸ್ ಓಂ ಪ್ರಕಾಶ್ ಅವರಿಂದ ದೂರವಾಗ್ಲೂ ಕಾರಣವೇನು..? ಈಗ ಬಯಲು

By Infoflick Correspondent

Updated:Tuesday, June 28, 2022, 08:07[IST]

ಅಸಲಿಗೆ ರೇಖಾ ದಾಸ್ ಓಂ ಪ್ರಕಾಶ್ ಅವರಿಂದ ದೂರವಾಗ್ಲೂ ಕಾರಣವೇನು..? ಈಗ ಬಯಲು

90ರ ದಶಕದ ಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡಿದ್ದ ಕನ್ನಡದ ನಟಿ ರೇಖಾದಾಸ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 90ರ ದಶಕದಲ್ಲಿ ಬಹುತೇಕ ಎಲ್ಲರಿಗೂ ನಟಿ ರೇಖಾದಾಸ್ ಅವರು ಪರಿಚಯ ಇದ್ದಾರೆ. ರೇಖಾದಾಸ್ ಅವರ ಕಾಮಿಡಿ ನಟನೆ ಅಷ್ಟರಮಟ್ಟಿಗೆ ನಗೆಯಲ್ಲಿ ಬಿದ್ದು ತೇಲಾಡುವಂತೆ ಮಾಡುತ್ತಿತ್ತು. ರೇಖಾದಾಸ್ ಅಭಿನಯ ನೋಡುನೋಡುತ್ತಿದ್ದಂತೆ ನಗು ಬರುತ್ತಿತ್ತು. ಅಷ್ಟರಮಟ್ಟಿಗೆ ಪ್ರಭಾವದಿಂದ ನಟನೆ ಮಾಡುತ್ತಿದ್ದರು ರೇಖಾದಾಸ್. ಹೌದು ನಟಿ ರೇಖಾದಾಸ್ ಅವರು ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದವರು. ಕರ್ನಾಟಕಕ್ಕೆ ಜೀವನ ಕಟ್ಟಿಕೊಳ್ಳಲು ಅತ್ತ ನೇಪಾಳದಿಂದ ಬಂದ ರೇಖಾ ದಾಸ್ ಅವರು ಆರಂಭದಲ್ಲಿ ಕನ್ನಡ ಭಾಷೆ ವಿಚಾರವಾಗಿ ಮಾತನಾಡುವ ಶೈಲಿಯ ವಿಚಾರವಾಗಿ ಹೆಚ್ಚು ಅವಮಾನಕ್ಕೆ ಒಳಗಾಗಿಡ್ದ್ದರಂತೆ.  

ಜೀವನ ಕಟ್ಟಿಕೊಳ್ಳಲು ಬಂದ ರೇಖಾ ದಾಸ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಕಷ್ಟದ ದಿನಗಳಲ್ಲಿ ಹೆಚ್ಚು ಗುರುತಿಸಿಕೊಂಡವರು. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರೇಖಾದಾಸ್ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಮೂಲತಹ ನೇಪಾಳದವರಾದರೂ ನಮ್ಮ ಕನ್ನಡ ಮೇಲಿನ ಪ್ರೀತಿ ರೇಖಾದಾಸ್ ಅವರಿಗೆ ಕೊಂಚವು ಕಡಿಮೆಯಾಗಿಲ್ಲ. ಅನ್ನ ಕೊಟ್ಟ ನಾಡು ಜೀವನ ಕೊಟ್ಟ ಭಾಷೆ ನಾವು ಎಂದೂ ಮರೆಯಬಾರದು. ಆ ಭಾಷೆಗೆ ಆ ನೆಲಕ್ಕೆ ಸಾಯುವವರೆಗೂ ಚಿರಋಣಿಯಾಗಿರಬೇಕು ಎನ್ನುತ್ತಾರೆ ರೇಖಾದಾಸ್. ಹೌದು ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಮದುವೆಯಾದ ಬಳಿಕ ರೇಖಾದಾಸ್ ಅವರಿಗೆ ಒಂದು ಹೆಣ್ಣು ಮಗು ಜನನವಾಯಿತು. ಅವರು ಕೂಡ ಈಗ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರೇ ಶ್ರಾವ್ಯ.

ನಟಿ ರೇಖಾದಾಸ್ ಪ್ರೀತಿಸಿ ಮದುವೆಯಾದ ಓಂಪ್ರಕಾಶ್ ರಾವ್ ಅವರಿಗೆ ಕೆಲವು ಭಿನ್ನಾಭಿಪ್ರಾಯದಿಂದ ವಿಚ್ಛೇದನ ನೀಡುತ್ತಾರೆ.. ಕಾರಣ ಓಂ ಪ್ರಕಾಶ್ ರಾವ್ ಅವರಿಗಿದ್ದ ಆ ಹೆಣ್ಣುಮಕ್ಕಳ ವಿಕ್ನೆಸ್ ಜೊತೆಗೆ ಹೆಚ್ಚು ಕುಪಿತರಾಗುತ್ತಿದ್ದರು ಎಂದು ಹೇಳಿ ಈ ಕಾರಣಕ್ಕಾಗಿಯೇ ವಿಚ್ಛೇದನ ನೀಡಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಓಂ ಪ್ರಕಾಶ್ ರಾವ್ ಅವರು ಹೇಗೋ ಜೀವನ ಮಾಡುತ್ತಿದ್ದಾರೆ. ಆದರೆ ಮಗಳು ಶ್ರಾವ್ಯ ಮತ್ತು ತಾಯಿ ರೇಖಾದಾಸ್ ಅವರ ಜೀವನ ಇಂದಿಗೂ ಕೂಡ ಕಷ್ಟದಲ್ಲಿಯೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ನಟ ಓಂ ಪ್ರಕಾಶ್ ರಾವ್ ಅವರು ಬಳಿಕ 2002ರಲ್ಲಿ ಭವ್ಯ ಎನ್ನುವರನ್ನ ಮದುವೆಯಾಗುತ್ತಾರೆ. ನಂತರ ಅವರಿಗೂ ಕೂಡ ವಿಚ್ಛೇದನ ನೀಡುತ್ತಾರೆ. 2012 ಹನ್ನೆರಡರಲ್ಲಿ ಟೆನಿಸನ್ ಅವರನ್ನು ಮದುವೆಯಾಗಿ ಒಟ್ಟು ಮೂವರ ಹೆಂಡತಿಯರ ಗಂಡ ಓಂ ಪ್ರಕಾಶ ರಾವ್ ಎಂದು ಹೇಳಲಾಗುತ್ತಿದೆ.