ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ನಟಿ ರೆಜಿನಾ !

By Infoflick Correspondent

Updated:Sunday, September 11, 2022, 13:33[IST]

ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ನಟಿ ರೆಜಿನಾ !

ನಟಿ ರೆಜಿನಾ ಕಸ್ಸಂದ್ರ  ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಡಬಲ್ ಮೀನಿಂಗ್ ಜೋಕ್‌ಗಳನ್ನು ಸಿಡಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ಜಿನಾ ಡಬಲ್ ಮೀನಿಂಗ್ ಜೋಕ್ ಮಾಡಿದ್ದಾರೆ. ಇದು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರೆಜಿನಾ ತನ್ನ ಮುಂಬರುವ ಚಿತ್ರವಾದ ಸಾಕಿನಿ ಡಾಕಿನಿಯನ್ನು ತನ್ನ ಸಹ-ನಟಿ ನಿವೇತಾ ಥಾಮಸ್ ಅವರೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಮಾಡುವಾಗ ಪುರುಷರನ್ನು ಮ್ಯಾಗಿ ನೂಡಲ್ಸ್‌ಗೆ ಹೋಲಿಸಿ ಹಾಸ್ಯ ಚಟಾಕಿ ಹಾರಿಸಿದರು.

ನನಗೆ ಹುಡುಗರ ಬಗ್ಗೆ ಒಂದು ತಮಾಷೆ ತಿಳಿದಿದೆ. ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ' ಎಂದು ಕೆಲ ಕಾಲ ಯೋಚಿಸಿದರು ಅವರು. ನಂತರ ಹೇಳಿಯೇ ಬಿಟ್ಟರು. 'ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ'. ಹುಡುಗರು ಮತ್ತು ಮ್ಯಾಗಿ ನೂಡಲ್ಸ್ ಕೇವಲ ಎರಡು ನಿಮಿಷಗಳು ಮಾತ್ರ," ಎಂದು ಅವರು ತಮಾಷೆ ಮಾಡಿದರು. ರೆಜಿನಾ ಪಕ್ಕದಲ್ಲಿ ಕುಳಿತಿದ್ದ ನಿವೇತಾ ಈ ಡಬಲ್ ಮೀನಿಂಗ್ ಜೋಕ್‌ಗೆ ನಗುವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್​ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ

ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ನೂಡಲ್ಸ್ ಥರಾ, ಎರಡೇ ನಿಮಿಷ ಎಂದು ಜೋಕ್ ಮಾಡಿರುವ ನಟಿ ರೆಜಿನಾ ಈಗ ಟ್ರೋಲ್ ಗೊಳಗಾಗಿದ್ದಾರೆ. ಹುಡುಗರು ಆಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.