ಹಂಸಲೇಖ ಅವರನ್ನ ಸರಿಗಮಪದಿಂದ ತೆಗೆದು ಹಾಕಿ ಈ ನಟನನ್ನ ಕರೆತನ್ನಿ..! ಇವರು ಅರ್ಹರಲ್ಲ ಎಂದ ಫ್ಯಾನ್ಸ್

By Infoflick Correspondent

Updated:Saturday, November 27, 2021, 14:56[IST]

ಹಂಸಲೇಖ ಅವರನ್ನ ಸರಿಗಮಪದಿಂದ ತೆಗೆದು ಹಾಕಿ ಈ ನಟನನ್ನ ಕರೆತನ್ನಿ..! ಇವರು ಅರ್ಹರಲ್ಲ ಎಂದ ಫ್ಯಾನ್ಸ್

ಹೌದು ಸ್ನೇಹಿತರೆ ಸಾಕಷ್ಟು ವರ್ಷಗಳಿಂದ ಸರಿಗಮಪ ಎನ್ನುವ ವೇದಿಕೆ ಹಲವಾರು ಕಲಾವಿದರಿಗೆ ಹಲವಾರು ಹಾಡುಗಾರರಿಗೆ ತುಂಬಾನೇ ಒಂದು ಒಳ್ಳೆಯ ವೇದಿಕೆ ಆಗಿದೆ. ಸರಿಗಮಪ ಮೂಲಕ ಸಾಕಷ್ಟು ಹಾಡುಗಾರರು ತಮ್ಮ ಜೀವನವನ್ನು ಬೆಳಗಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ಹಾಡಲು ಅವಕಾಶ ಗಿಟ್ಟಿಸಿಕೊಂಡು ಈಗ ಉತ್ತುಂಗತ ಸ್ಥಾನದಲ್ಲಿದ್ದಾರೆ.

ಸರಿಗಮಪ ವೇದಿಕೆಯ ಮಹಾಗುರುಗಳಾದ ಹಂಸಲೇಖ ಅವರನ್ನು ಸರಿಗಮಪ ಕಾರ್ಯಕ್ರಮದಿಂದ ತೆಗೆದು ಹಾಕಿ ಇವರ ಜಾಗಕ್ಕೆ ಕನ್ನಡದ ಇನ್ನೊಬ್ಬ ಖ್ಯಾತ ನಟನನ್ನು ಕರೆತನ್ನಿ ಎಂದು ಕೆಲವು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದು ಹಂಸಲೇಖ ವಿರುದ್ಧ ಮಾತನಾಡಿದ್ದಾರೆ ಎನ್ನಲಾಗಿದೆ.    

ಹಂಸಲೇಖ ಅವರು ಸಂಗೀತ ಮಾಂತ್ರಿಕ, ಸಂಗೀತ ನಿರ್ದೇಶಕ ನಾದಬ್ರಹ್ಮ ಎಂದೇ ಕರೆಯಲ್ಪಟ್ಟಿದ್ದಾರೆ. ಆದರೆ ಇತ್ತೀಚಿಗೆ ದಲಿತರ ಹಾಗೂ ಪೇಜಾವರ ಶ್ರೀಗಳ ಬಗ್ಗೆ ಒಂದು ಹೇಳಿಕೆ ನೀಡಿ ವಿವಾದ ಕಟ್ಟಿಕೊಂಡರು ಎಂದು ಹೇಳಬಹುದು. ಬಳಿಕ ಅವರು ಮಾಡಿದ್ದು ತಪ್ಪು ಎಂಬುದಾಗಿ ಅರಿತು ಎಲ್ಲರಲ್ಲಿ ಕ್ಷಮೆಯನ್ನು ಕೇಳಿದರು.

ಆದರೂ ಸಹ ಇದೀಗ ಕೆಲವರು ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಮಾತನಾಡಿದ್ದು, ಅವರು ಸರಿಗಮಪ ವೇದಿಕೆಗೆ ಅರ್ಹರಲ್ಲ, ಅವರ ಬದಲಿಗೆ ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಅವರನ್ನು ಕರೆತನ್ನಿ ಎಂದು ಸರಿಗಮಪ ವೀಕ್ಷಕರು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಅಭಿಮಾನಿಗಳು ಹೇಳುವ ಹಾಗೆ ಸಾಧುಕೋಕಿಲ ಅವರು ಸರಿಗಮಪ ಕಾರ್ಯಕ್ರಮದ ಜಡ್ಜ್ ಆಗುತ್ತಾರ ಕಾದು ನೋಡಬೇಕಿದೆ.