Ramya : ರಕ್ಷಿತ್ ಶೆಟ್ಟಿ ರಮ್ಯಾನ ಮದುವೆ ಆಗ್ತಾರಾ..? ಸತ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ..! ಹೇಳಿದ್ದೇನು ಗೊತ್ತಾ..?

By Infoflick Correspondent

Updated:Monday, May 16, 2022, 21:30[IST]

Ramya : ರಕ್ಷಿತ್ ಶೆಟ್ಟಿ ರಮ್ಯಾನ ಮದುವೆ ಆಗ್ತಾರಾ..? ಸತ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ..! ಹೇಳಿದ್ದೇನು ಗೊತ್ತಾ..?

ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಅಭಿನಯದ ಚಾರ್ಲಿ 777 ಸಿನಿಮಾದ ಟ್ರೈಲರ್ ಇಂದು ಭರ್ಜರಿಯಾಗಿ ಒಟ್ಟು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಟ್ರೈಲರ್ ಆಗಿ ಬಿಡುಗಡೆಯಾಗಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ವರ್ಲ್ಡ್ ವೈಡ್ ಜೂನ್ ಹತ್ತಕ್ಕೆ ಭರ್ಜರಿಯಾಗಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಹೌದು ಇಂದು ಬಿಡುಗಡೆಯಾದ ಟ್ರೈಲರ್ ನೋಡುತ್ತಿದ್ದರೆ ಪ್ರಾಮಿಸಿಂಗ್ ಟ್ರೈಲರ್ ಎಂದೆನಿಸುತ್ತದೆ.. 

ಟ್ರೈಲರ್ ಅನ್ನು ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದ ಚಾರ್ಲಿ ಚಿತ್ರತಂಡವೂ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ ಎನ್ನಬಹುದು. ರಕ್ಷಿತ್ ಶೆಟ್ಟಿ ಅವರು ಅತ್ಯದ್ಭುತ ಅಭಿನಯ ಮಾಡಿದ್ದು, ಚಾರ್ಲಿ ಪಾತ್ರ ಮಾಡಿದ ಶ್ವಾನಕ್ಕೆ ಒಂದು ಸಲ್ಯೂಟ್ ಹೊಡೆಯಲೆಬೇಕು. ಅಷ್ಟರಮಟ್ಟಿಗೆ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದೆ ಚಾರ್ಲಿ 777 ಸಿನಿಮಾದ ಟ್ರೈಲರ್.

ಕನ್ನಡದಲ್ಲಿ ಈಗಾಗಲೇ 1 ಮಿಲಿಯನ್ ವೀಕ್ಷಣೆ ಮುಗಿಸಿದ್ದು ಹಿಂದಿ ಭಾಷೆಯಲ್ಲೂ ಕೂಡ ಒಂದು ಮಿಲಿಯನ್ ವೀಕ್ಷಣೆ ಮುಕ್ತಾಯ ಮಾಡಿದೆ. ತೆಲುಗು, ತಮಿಳು, ಮಲಯಾಳಂ ಅಲ್ಲೂ ಕೂಡ ಒಳ್ಳೆಯ ಅಭಿಪ್ರಾಯ ಗಿಟ್ಟಿಸಿಕೊಳ್ಳುತ್ತಿದೆ. ಹೌದು ಇದು ಸಹ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ರೀತಿಯೇ ಯಶಸ್ವಿಯಾಗಲಿ ಎಂದು ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಹಾಗೂ ಕನ್ನಡಿಗರು ಹಾರೈಸುತ್ತಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಿದ ಚಿತ್ರತಂಡ ಸಿನಿಪ್ರಿಯರ ರಿಯಾಕ್ಷನ್ ನೋಡಿ ಖುಷಿ ಪಡುತ್ತಿದ್ದಾರೆ. ಇನ್ನೊಂದು ಕಡೆ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೂಡ ಚಿತ್ರದ ಬಗ್ಗೆ ಮಾತನಾಡಿದ್ದು ನಿರ್ದೇಶಕ ಕಿರಣ್ ಅವರ ಕೆಲಸದ ಬಗ್ಗೆ ಹಾಡಿ ಹೊಗಳಿದರು. ಸಿನಿಮಾ ಸೆಟ್ಟೇರಿದಾಗ ನಾನು ಇನ್ನೂ ಮದುವೆಯಾಗಿರಲಿಲ್ಲ, ಇದೀಗ ಎರಡು ಮಕ್ಕಳ ತಂದೆ ನಾ ಎಂದು ಎಲ್ಲರನ್ನೂ ನಗೆಯಲ್ಲಿ ತೇಲಾಡುವಂತೆ ಮಾಡಿದರು ರಿಷಬ್ ಶೆಟ್ಟಿ.

ಮಾದ್ಯಮದವರ ಮುಂದೆ ಬೇರೆ ಯಾವುದೂ ಫ್ಲಾಶ್ ನ್ಯೂಸ್ ಇಲ್ಲ. ರಕ್ಷಿತ್ ಶೆಟ್ಟಿ ರಮ್ಯ ಅವರನ್ನು  ಮದುವೆ ಆಗುತ್ತಿಲ್ಲ ಎಂಬುದಾಗಿಯೂ ಕೂಡ ಹೇಳಿ ನಕ್ಕರು. ಹಾಗೆ ಚಾರ್ಲಿ ಸಿನಿಮಾವನ್ನು ಈಗಾಗಲೇ ನೋಡಿದ್ದೇವೆ ಸಿನಿಮಾ ಪಕ್ಕ ವರ್ಲ್ಡ್ವೈಡ್ ಯಶಸ್ವಿಯಾಗುವುದು ಖಂಡಿತ ಎಂದು ಹೇಳಿದ್ದಾರೆ. ಇಂದು ಬಿಡುಗಡೆ ಆದ ಚಾರ್ಲಿ 777 ಚಿತ್ರದ ಟ್ರೈಲರ್ ಹೇಗಿದೆ ಎಂದು ಕಮೆಂಟ್ ಮಾಡಿ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...