ಮತ್ತೊಂದು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್ವುಡ್ ಜೋಡಿ..! ಸತಿ ಬಗ್ಗೆ ನಿರ್ದೇಶಕ ಹೇಳಿದ್ದಿಷ್ಟು ನೋಡಿ

By Infoflick Correspondent

Updated:Sunday, March 6, 2022, 13:09[IST]

ಮತ್ತೊಂದು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್ವುಡ್ ಜೋಡಿ..! ಸತಿ ಬಗ್ಗೆ ನಿರ್ದೇಶಕ ಹೇಳಿದ್ದಿಷ್ಟು ನೋಡಿ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಇದೀಗ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಹೌದು ಕಿರಿಕ್ ಪಾರ್ಟಿ ಸಿನಿಮಾ ನೋಡುವ ವೇಳೆ ಥಿಯೇಟರ್ಗೆ ಆಗಮಿಸಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಪ್ರಗತಿ ಅವರನ್ನು ಮೊದಲ ಬಾರಿ ನೋಡಿದ್ದು ನಂತರ ಸ್ನೇಹ ಆಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ 2017ರಲ್ಲಿ ಇವರಿಬ್ಬರು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದರು. ಹೌದು 2019ರಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಯವರಿಗೆ ಮೊದಲ ಗಂಡು ಮಗು ಹುಟ್ಟಿದ್ದು ಅದಕ್ಕೆ ರಣ್ವಿತ್ ಶೆಟ್ಟಿ ಎಂದು ನಾಮಕರಣ ಸಹ ಮಾಡಿದ್ದರು. ನಟ ರಿಷಬ್ ಶೆಟ್ಟಿ ಅವರ ಮಡದಿ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ.

ನಾನು ಪ್ರೀತಿಸಿದವರ ಹುಟ್ಟಿದ ದಿನ ಅವರು ಹುಟ್ಟಿದ ದಿನ ತುಂಬಾನೇ ವಿಶೇಷ ನನಗೆ ಎಂದು ಮಡದಿ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದರು. ಇತ್ತೀಚಿಗೆ ಗೋಲ್ಡನ್ ಗ್ಯಾಂಗ್ ನಲ್ಲಿ ಕೂಡ ಪ್ರಗತಿ ಶೆಟ್ಟಿ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು. ಹೌದು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ  (Pragathi Shetty)  ಜೋಡಿಗೆ ಇದೀಗ ಮತ್ತೊಂದು ಹೆಣ್ಣು ಮಗು ಆಗಿದೆ. ಇದು ಎರಡನೇ ಮಗುವಾಗಿದ್ದು ನಿನ್ನೆಯಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಗತಿ ಶೆಟ್ಟಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಿಷಬ್ ಶೆಟ್ಟಿ ತನ್ನ ಮಡದಿಗೆ ವಿಶೇಷವಾದ ಸಾಲುಗಳನ್ನು ಈ ರೀತಿಯಾಗಿ ಬರೆದುಕೊಂಡಿದ್ದಾರೆ. 

'ಭೂಮಿ ಸುತ್ತುವುದರಲ್ಲೇ ಹೆಚ್ಚುಕಮ್ಮಿ ಆಗಿ ನಾಳೆ ಬರಬೇಕಿದ್ದ ಈ ಶುಭದಿನ, ನನಗೋಸ್ಕರ ಇಂದೇ ಬಂದಿದೆ. ಕಳೆದ ವರ್ಷಕ್ಕಿಂತ ಮತ್ತೊಂದಿಷ್ಟು ಪ್ರೀತಿಯನ್ನು ಕೊಡು. ಒಲವಿನ ಸತಿಗೆ ಹೃದಯದ ಗತಿಗೆ ನನ್ನ ಪ್ರಗತಿಗೆ ಹ್ಯಾಪಿ ಹ್ಯಾಪಿ ಬರ್ತ್ ಡೇ' ಅಂತ ವಿಶೇಷವಾಗಿ ಪ್ರೀತಿಯ ಅವರ ಮಾಡದಿಗೆ ಹಾರೈಸಿದ್ದರು. ರಿಷಬ್ ಶೆಟ್ಟಿ ಅವರು ಎರಡನೇ ಮಗುವಿನ ತಂದೆ ಆಗುತ್ತಿದ್ದಂತೆ ಸ್ಯಾಂಡಲ್ವುಡ್ನ ಸಾಕಷ್ಟು ಕಲಾವಿದರು ಇವರಿಗೆ ಶುಭಕೋರಿದ್ದಾರೆ. ಹಾಗೆ ಸ್ನೇಹಿತರು, ಕುಟುಂಬದವರು ಕೂಡ ಹೆಚ್ಚು ಖುಷಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನೀವು ಕೂಡ ಇವರಿಗೆ ಶುಭಕೋರಿ. ನಟ ರಿಷಬ್ ಶೆಟ್ಟಿ ದಂಪತಿಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು...