Rithvik Krupakar : ರಾಮಾಚಾರಿ ಧಾರಾವಾಹಿಯ ನಾಯಕ ನಿಜಜೀವನದಲ್ಲಿ ಈ ಕಾರಣಕ್ಕೆ ನಾನ್ ವೆಜ್ ಬಿಟ್ಟರಂತೆ !
Updated:Tuesday, May 10, 2022, 14:09[IST]

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಹು ಪ್ರಸಿದ್ದ ಸೀರಿಯಲ್ 'ರಾಮಾಚಾರಿ'. ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದ ಹುಡುಗ ತನ್ನೆಲ್ಲ ಕಷ್ಟ ಸವಾಲುಗಳನ್ನು ಮೀರಿ ಹೇಗೆ ಸಾಧನೆ ಅನ್ನುವ ಕಥೆ ಹೊಂದಿದೆ. ಇಲ್ಲಿ ನಾಯಕಿ ಪುರ್ತಿ ಗಂಡುತನವನ್ನು ಹೊಂದಿರುವ ಪತ್ರ. ನಾಯಕಿ ಕೊಡುವ ಕಷ್ಟಗಳಿಂದ ಸಂಚುಗಳಿಂದ ಪಾರಾಗುವುದೇ ನಾಯಕನಿಗೆ ದೊಡ್ಡ ಟಾಸ್ಕ್ . ಇಲ್ಲಿ ನಾಯಕಿ ಬಕು ಜೊರು. ನಾಯಕ ಸಂಭಾವಿತ.
ಈ ಸೀರಿಯಲ್ನಲ್ಲಿ ರಾಮಾಚಾರಿ ಪಾತ್ರ ಮಾಡ್ತಿರೋದು ಋತ್ವಿಕ್ ಕೃಪಾಕರ್. ಸೀರಿಯಲ್ನಲ್ಲಿ ಇವರು ಮಾಡುವ ಪಾತ್ರದ ತಯಾರಿಗಾಗಿ ನಿಜಜೀವನದಲ್ಲೂ ಹಲವಾರು ತ್ಯಾಗ ಮಾಡಿ ಪಾತ್ರಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಇವರು. ಚಿಕ್ಕ ವಯಸ್ಸಿಂದಲೇ ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದ ಋತ್ವಿಕ್ ಕೊಂಚ ಹೆಚ್ಚೇ ದಪ್ಪ ಇದ್ದರು. ಕೆಲವು ದಿನ ಇವರ ತೂಕ ನೂರಾರು ಕೆಜಿಗೆ ಏರಿಕೆಯಾಗಿತ್ತು. ಧಾರಾವಾಹಿ ಆಡಿಶನ್ ನಲ್ಲಿ ನಾಯಕನ ಪಾತ್ರಕ್ಕೆ ಸೆಲೆಕ್ಟ್ ಆದ ಋತ್ವಿಕ್ ನೂರಾರು ಕೆಜಿಯಿಮದ ೮೦ ಕೆಜಿಗೆ ತೂಕ ಇಳಿಸಿದರು.
ಹೈಸ್ಕೂಲ್ ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯ ಋತ್ವಿಕ್ ನಟನೆಯಲ್ಲಿ ಎತ್ತಿದ ಕೈ. ಹಾಗಾಗಿ ಪಾತ್ರಕ್ಕಾಗಿ ಅವರು ತೂಕವನ್ನು ಮಾತ್ರ ತ್ಯಾಗ ಮಾಡದೆ ಬೇರೆ ಒಂದಿಷ್ಟನ್ನೂ ತ್ಯಾಗ ಮಾಡಿದ್ದಾರೆ. ಮೊದಲು ಸಣ್ಣ ಪುಟ್ಟದಕ್ಕೂ ಸಿಟ್ ಮಾಡುತ್ತಿದ್ದ ಋತ್ವಿಕ್ ಈ ಪಾತ್ರ ಮಾಡೋಕೆ ಶುರು ಮಾಡಿದ ಮೇಲೆ ಸಿಟ್ಟು ಮಾಡೋದು ಕಡಿಮೆ ಮಾಡ್ಕೊಂಡಿದ್ದಾರೆ. ಈ ಪಾತ್ರಕ್ಕೆ ಅವರ ಡೆಡಿಕೇಶನ್ ಎಂಥದ್ದು ಅಂದರೆ ಪಾತ್ರ ಮಾಡುತ್ತಾ ಮಾಡುತ್ತಾ ಪಾತ್ರದ ಒಳ್ಳೆಯ ಗುಣಗಳನ್ನೆಲ್ಲ ತಮ್ಮೊಳಗೂ ಅಳವಡಿಸಿಕೊಂಡು ಬಿಟ್ಟಿದ್ದಾರೆ.
ಇನ್ನು ಸಿಟ್ಟು ತೂಕ ಇಷ್ಟೇ ಮಾತ್ರವಲ್ಲದೆ ತಮ್ಮ ನೆಚ್ಚಿನ ಆಹಾರವನ್ನೂ ಪಾತ್ರಕ್ಕಾಗಿ ತ್ಯಾಗ ಮಾಡಿದ್ದಾರೆ. ಇವರಿಗೆ ನಾನ್ ವೆಜ್ ಎಂದರೆ ಪಂಚ ಪ್ರಾಣ ಆದರೆ ಪಾತ್ರಕ್ಕಾಗಿ ನಾನ್ ವೆಜ್ ಅನ್ನು ತ್ಯಾಗ ಮಾಡಿದ್ದಾರೆ. ಬಿಡು ಎಂದು ಯಾರೂ ಹೇಳಿರಲಿಲ್ಲ ಆದರೆ ಸ್ವಂತ ನಿರ್ಧಾರದಿಂದ ಪಾತ್ರಕ್ಕಾಗಿ ತ್ಯಾಗ ಮಾಡಿದ್ದಾರೆ. ಈ ಪಾತ್ರದಲ್ಲಿ ಸ್ತೋತ್ರ ಹೇಳೋದು, ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳೋದು ಇತ್ಯಾದಿ ಆಚರಣೆಗಳನ್ನು ಪಾಲಿಸಬೇಕಾಗುತ್ತದೆ. ಈ ಮನಸ್ಥಿತಿಯನ್ನು ಅಳವಡಿಕೊಳ್ಳಬೇಕಾಗುತ್ತದೆ ಹಾಗಾಗಿ ರಾಮಾಚಾರಿ ಪಾತ್ರಕ್ಕಾಗಿ ನಾನ್ವೆಜ್ ತಿನ್ನೋದನ್ನೇ ಬಿಟ್ಟುಬಿಟ್ಟಿದ್ದಾರೆ ಋತ್ವಿಕ್. ( video credit : life first )