ರಾಕಿಂಗ್ ಸ್ಟಾರ್ ಯಶ್ ಹುಟ್ಟೂರಿನಲ್ಲಿರುವ ಅವರ ಮನೆಯನ್ನು ನೋಡಿದ್ದೀರಾ..?
Updated:Monday, May 23, 2022, 21:08[IST]

ಎಷ್ಟೇ ಜನಪ್ರಿಯತೆ ಗಳಿಸಿ, ಹತ್ತೂರು ಸುತ್ತಿದರೂ, ಹುಟ್ಟೂರೆ ಪ್ರಿಯ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಕಷ್ಟದ ದಿನಗಳನ್ನು ಕಂಡು ಇಂದು ಕೋಟ್ಯಾಧೀಶ್ವರನಾದರೂ, ತಲೆ ಬಗ್ಗಿ ನಡೆಯುತ್ತಿರುವ ನಟ ನಮ್ಮ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್. ಯಶ್ ಅವರು ಇಂದು ಜೀವನದಲ್ಲಿ ಯಶಸ್ಸನ್ನು ಕಂಡು ಇಡೀ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಆದರೆ, ಯಶ್ ಅವರ ಬದುಕಿನ ಪಯಣ ಅಷ್ಟು ಸುಖವಾಗಿರಲಿಲ್ಲ. ಕಷ್ಟ-ಸುಖ ಎರಡನ್ನೂ ಸವಿದಿದ್ದಾರೆ. ಹಾಗಾಗಿಯೇ ಇಂದಿಗೂ ಕೊಂಚವೂ ಹಮ್ಮು-ಬಿಮ್ಮು ಇಲ್ಲದೆ ಬದುಕುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಹುಟ್ಟಿದ್ದು ಹಾಸನವಾದರೂ, ಬೆಳೆದಿದ್ದೆಲ್ಲಾ ಮೈಸೂರಿನಲ್ಲಿ. ಆದರೆ ಈಗ ಅವರು ವಾಸವಿರುವುದು ಬೆಂಗಳುರಿನಲ್ಲಿ. ಕಳೆದ ವರ್ಷವಷ್ಟೇ ಬೆಂಗಳೂರಿನ ವಿಂಡ್ಸನ್ ಮ್ಯಾನರ್ ಬಳಿ ಇರುವ ಪ್ರಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಅನ್ನು ಖರೀದಿಸಿದ್ದರು. ಆದರೆ ಇದಕ್ಕೂ ಮುನ್ನ ಅವರು ತಮ್ಮ ಹುಟ್ಟೂರಾದ ಹಾಸನದಲ್ಲಿ ಮನೆ ಹಾಗೂ ಜಮೀನನ್ನು ಖರೀದಿಸಿದ್ದರು. ಆ ಮನೆ ಹೇಗಿದೆ.? ಅವರ ತೋಟ ಹೇಗಿದೆ ಗೊತ್ತಾ..?
ಬಿಡುವು ಸಿಕ್ಕಾಗಲೆಲ್ಲಾ ಯಶ್ ಹಾಗೂ ಕುಟುಂಬಸ್ಥರು ತಮ್ಮರೂ ಹಾಸನಕ್ಕೆ ಬಂದು ಹೋಗುತ್ತಿರುತ್ತಾರೆ. ಹಾಸನದ ವಿದ್ಯಾನಗರದಲ್ಲಿ ಸ್ವಂತ ಮನೆಯನ್ನು ಖರೀದಿಸಿದ್ದಾರೆ. 68*70 ವಿಸ್ತೀರ್ಣದ ವಿಶಾಲ ಮನೆ ಇದಾಗಿದೆ. ಜೊತೆಗೆ ಕೃಷಿ ಕುಟುಂಬದಿಂದ ಬಂದ ಯಶ್ ಆಸೆಯಂತೆಯೇ ತೋಟವನ್ನೂ ಖರೀದಿಸಿದ್ದಾರೆ. ಅಟ್ಟಾವರ ಎಂಬಲ್ಲಿ 80 ಎಕರೆಯ ತೋಟವನ್ನು ಖರೀದಿಸಿದ್ದು, ಮಾವು, ಸಪೋಟ, ಗೋಡಂಬಿ ತೋಟ ಇದಾಗಿದೆ. ಆಗಾಗ ಬಿಡುವು ಸಿಕ್ಕಾಗ ಯಶ್ ಹಾಗೂ ಅವರ ತಂದೆ-ತಾಯಿ ಇಲ್ಲಿಗೆ ಭೇಟಿ ಕೊಡುತ್ತಾರೆ. ತೋಟವನ್ನು ಒಂದು ಸುತ್ತು ಹಾಕಿ ಬರುತ್ತಾರೆ.