ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು.? ನೆಕ್ಸ್ಟ್ ಪ್ಲಾನ್ ಏನು ಗೊತ್ತಾ..?

By Infoflick Correspondent

Updated:Thursday, April 14, 2022, 19:09[IST]

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು.? ನೆಕ್ಸ್ಟ್ ಪ್ಲಾನ್ ಏನು ಗೊತ್ತಾ..?

ರಾಕಿಂಗ್ ಸ್ಟಾರ್ ಯಸ್ ಅಭಿನಯದ ಕೆಜಿಎಫ್ 2 ಇಂದು ರಿಲೀಸ್ ಆಗಿದ್ದು, ವಿಶ್ವಾದ್ಯಂತ ಧೂಳೆಬ್ಬಿಸಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಅದ್ಭುತ ಎಂದು ಹೊಗಳಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಇನ್ನಷ್ಟು ಸಿನಿಮಾಗಳು ಮೂಡಿ ಬರಲಿ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಪ್ಯಾನ್ ಇಂಡಿಯಾ ಮೂವಿಗಳಲ್ಲೇ ಯಶ್ ಅಭಿನಯಿಸಲಿ ಎಂದಿದ್ದಾರೆ. ಆದರೆ ಈಗ ಮತ್ತೊಂದು ಸುದ್ದಿ ಹೊರ ಬಂದಿದ್ದು, ಯಶ್ ಅವರ ಮುಂದಿನ ಪ್ರಜೆಕ್ಟ್ ಬಗ್ಗೆ ತಿಳಿದು ಬಂದಿದೆ. ಅದೇನೆಂದು ಮುಂದೆ ನೋಡೋಣ ಬನ್ನಿ..   

ಮುಂದಿನ ದಿನಗಳಲ್ಲಿ ನೀವು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಮಾತ್ರ ನಟಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಯಶ್ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೇ, ಪ್ಯಾನ್ ಇಂಡಿಯಾ ಥರಹದ್ದ ಸಿನಿಮಾಗಳಲ್ಲೂ ಮಾಡಬಹುದು, ಇಲ್ಲ  ಮಾತ್ರ ನಟಿಸಬಹುದು ಎಂದು ಹೇಳೋದಿಕ್ಕೆ ಆಗೋದಿಲ್ಲ. ಹಾಗಂತ ಸಾಕಪ್ಪ ದುಡ್ಡು ದುಡಿದಿದ್ದೇನೆ ಅರಾಮಾಗಿ ಇದ್ದು ಬಿಡೋಣ ಅಂತ ಿರೋದಕ್ಕಂತೂ ಅಗಲ್ಲ. ಹಣಕ್ಕೋಸ್ಕರ ಅಲ್ಲ. ನಮ್ಮ ಅಭಿಮಾನಿಗಳಿಗೋಸ್ಕರ ಮಾಡಲೇ ಬೇಕು ಎಂದು ಹೇಳಿದ್ದಾರೆ.  

ಇನ್ನು ಪ್ರಶಾಂತ್ ನೀಲ್ ಅವರ ಜೊತೆಗೆ ಇನ್ಮುಂದೆ ಸಿನಿಮಾ ಮಾಡೋದಿಲ್ವಾ ಎಂದು ಕೇಳಿದ್ದಕ್ಕೆ, ಹಾಗೆಲ್ಲಾ ಏನಿಲ್ಲ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇವೆ. ನಾವೆಲ್ಲಾ ಈಗ ಒಂದೇ ಕುಟುಂಬದವರಂತೆ ಆಗಿಬಿಟ್ಟಿದ್ದೇವೆ. ಮುಂದೆ ನೋಡೋಣ ಎಂದು ಹೇಳಿದ್ದಾರೆ. ಸದ್ಯಕ್ಕೆ ಕಥೆಯೊಂದು ಸಿದ್ಧವಾಗುತ್ತಿದೆ. ಅದರ ಬಗ್ಗೆ ಈಗ ಹೇಳಬಾರದು. ಮುಂದೆ ಸಮಯ ಬಂದಾಗ ನಿಮಗೆ ಗೊತ್ತಾಗುತ್ತೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಮ್ಮ ಗುರಿಯಷ್ಟೇ ಶಾಶ್ವತ. ಜೀವನ ಒಂದು ಯುದ್ಧ ಭೂಮಿಯಂತೆ ನಾವು ಯಾವಾಗಲು ನುಗ್ಗುತ್ತಿರಬೇಕಷ್ಟೇ ಎಂದು ಹೇಳಿದ್ದಾರೆ.