Yash : ಬಾಲ್ಯ ಸ್ನೇಹಿತನ ಮದುವೆಗೆ ಜೊಡಿ ಸಮೇತ ತೆರಳಿದ ಯಶ್ ಮಾಡಿದ್ದೇನು ?
Updated:Saturday, May 14, 2022, 15:13[IST]

ಕೆಜಿಎಫ್ ಗೆಲುವಿನಲ್ಲಿರುವ ಯಶ್ ಈಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಕುಟುಂಬದ ಜೊತೆ ಮತ್ತು ಗೆಳೆಯರ ಜೊತೆ ಸಮಯ ಕಳೆಯುತ್ತಿದ್ದಾರೆ. ನಿನ್ನೆ ಯಶ್ ಗೆಳೆಯನ ಮದುವೆಯಿದ್ದು ಪತ್ನಿ ಸಮೇತ ಸಂತೋಷದಿಂದ ಯಶ್ ಗೆಳೆಯನ ಮದುವೆಗೆ ಹೋಗಿ ಸಂಭ್ರಮಿಸಿದ್ದಾರೆ.
ಮೈಸೂರಿನ ಕಲ್ಯಾಣಮಂಟಪವೊಂದರಲ್ಲಿ ನಿನ್ನೆ ರಾತ್ರಿ ನಡೆದ ಮದುವೆ ಕಾರ್ಯಕ್ರಮಕ್ಕೆ ಯಶ್-ರಾಧಿಕಾ ಆಗಮಿಸಿ ವಧು-ವರರಿಗೆ ಶುಭ ಕೋರಿದರು. ಯಶ್ ಬಾಲ್ಯದ ಸ್ನೇಹಿತ ಚೇತನ್ ಮದುವೆ ಇಲ್ಲಿ ನಿಗದಿಯಾಗಿತ್ತು. ಈ ಮದುವೆ ಸಮಾರಂಭಕ್ಕೆ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕೂಡಾ ಆಗಮಿಸಿದ್ದರು.
ಯಶ್ ಪತ್ನಿ ಸಮೇತರಾಗಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಅವರನ್ನು ಸ್ವಾಗತಿಸಲಾಯಿತು. ಫ್ಯಾನ್ಸ್ ಕೇಕೆ ಹಾಕಿದರು. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನವಜೋಡಿಗೆ ಶುಭ ಹಾರೈಸಿದ ಬಳಿಕ ಯಶ್ ಹಾಗೂ ರಾಧಿಕಾ ಅವರು ಅಭಿಮಾನಿಗಳತ್ತ ಕೈ ಬೀಸಿದರು.
ಗೆಳೆಯನನ್ನು ಯಶ್ ಪ್ರೀತಿಯಿಂದ ಗಲ್ಲ ಸವರಿ ಮಗುವಿನಂತೆ ಮಾತನಾಡಿಸಿದರು. ಆ ಕ್ಷಣ ಮಧುಮಗ ಭಾವುಕನಾಗಿರುವುದು ಗೆಳೆತನಕ್ಕೆ ಹಿಡಿದ ಕನ್ನಡಿಯಂತಿದೆ. ಈ ಕ್ಷಣ ಯಶ್ ಸ್ನೇಹಸಂಬಂಧಕ್ಕೆ ಸಾಕ್ಷಿಯಾಗಿತ್ತು.
VIDEO CREDIT : TV9 KANNADA