ಅವಮಾನ ಅಪಮಾನ ಎದುರಿಸಿದ್ದ ರಾಕಿ ಭೈ ಯಶ್..! ಲೈಫ್ ಸ್ಟೋರಿ ನೋಡಿದ್ರೆ ಕಣ್ಣೀರು ಬರುತ್ತೆ

By Infoflick Correspondent

Updated:Thursday, April 14, 2022, 17:16[IST]

ಅವಮಾನ ಅಪಮಾನ ಎದುರಿಸಿದ್ದ ರಾಕಿ ಭೈ ಯಶ್..! ಲೈಫ್ ಸ್ಟೋರಿ ನೋಡಿದ್ರೆ ಕಣ್ಣೀರು ಬರುತ್ತೆ

ರಾಕಿಂಗ್ ಸ್ಟಾರ್ ಯಶ್ ಇದೀಗ ಎಲ್ಲರಿಗೂ ಚಿರಪರಿಚಿತ ಇರುವ ಹೆಸರು. ಹೌದು ಒಂದಾನೊಂದು ಕಾಲದಲ್ಲಿ ತುಂಬಾನೇ ಕಷ್ಟಪಟ್ಟಿದ್ದು ಇಂದು ಇಡೀ ಪ್ರಪಂಚಕ್ಕೆ ನಟ ಯಶ್ ಯಾರೆಂಬುದು ಗೊತ್ತಾಗಿದೆ. ಅವರ ಅಭಿನಯದ ಮೂಲಕ ಇಡೀ ವಿಶ್ವಕ್ಕೆ ಯಶ್ ಅವರು ಪರಿಚಯ ಆಗಿದ್ದಾರೆ ಎಂದು ಹೇಳಬಹುದು. ಯಶ್ ಸಿನಿಮಾರಂಗಕ್ಕೆ ಬರುವ ಮುನ್ನ, ನಿಜ ಜೀವನ ಹೇಗಿತ್ತು, ಯಾವ ರೀತಿ ಕಷ್ಟಗಳನ್ನು ಅವಮಾನಗಳನ್ನು, ಅವಮಾನಗಳನ್ನು ಎದುರಿಸಿ ಇಂದು ಇಂತಹ ಉನ್ನತ ಮಟ್ಟಕ್ಕೆ ಯಶ್ ಬೆಳೆದರು ಎಂಬುದಾಗಿ ಸಣ್ಣ ಮಾಹಿತಿ ಮೂಲಕ ತಿಳಿದುಕೊಳ್ಳೋಣ. ಹೌದು ನಟ ಯಶ್ ಅವರು 1986 ರಲ್ಲಿ ಅವರ ತಾಯಿ ಹುಟ್ಟೂರಾದ ಹಾಸನ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸುತ್ತಾರೆ.

ನಂತರ ಯಶ್ ಬೆಳೆದಿದ್ದು ಓದಿದ್ದು ಕೂಡ ಮೈಸೂರಿನಲ್ಲಿ. ಓದಿನಲ್ಲಿ ಇಂಟರೆಸ್ಟ್ ಇದ್ದರೂ ಹೆಚ್ಚು ಇಂಟರೆಸ್ಟ್ ಇದ್ದಿದ್ದು ಮಾತ್ರ ಅಭಿನಯದ ಮೇಲೆ. ಚಿಕ್ಕಂದಿನಲ್ಲೇ ನಾಟಕ ನೃತ್ಯ ಅಭಿನಯ ಎಲ್ಲಾ ಶಾಲಾ ಕಾಲೇಜು ದಿನಗಳಲ್ಲಿ ಮಾಡಿದ್ದರು ಯಶ್. ಬಳಿಕ ತಂದೆ ತಾಯಿಯನ್ನು ಒಪ್ಪಿಸಿ ಬೆಂಗಳೂರಿಗೆ ಬಂದವರು. ಆರಂಭದಲ್ಲಿ ಮೆಜೆಸ್ಟಿಕ್ ನೋಡಿದ ಬಳಿಕವೇ ತುಂಬಾನೇ ಬೆರಗಾಗಿದ್ದಾರಂತೆ. ಬೃಹತ್ ಬೆಂಗಳೂರಿನಲ್ಲಿ ನಾನು ಹೇಗೆ ಸಿನಿಮಾರಂಗದಲ್ಲಿ ನಟನೆ ಮಾಡುವುದು ಎಂದು ಒಂದು ಕ್ಷಣ ಶಾಕ್ ಆಗಿದ್ದಾರಂತೆ. ಹಾಗೆ ಅವರ ಮನಸ್ಥಿತಿ ಕೂಡ ಮೆಜೆಸ್ಟಿಕ್ ನೋಡಿ ಕುಗ್ಗಿತ್ತು ಎನ್ನಲಾಗಿದೆ. ಇರಲು ಜಾಗ ಇಲ್ಲದೆ ಮೆಜೆಸ್ಟಿಕ್ ನಲ್ಲಿಯೂ ಕೂಡ ಮಲಗಿದ್ದರು ಎನ್ನಲಾಗಿ ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದರು. 

ಹೌದು ನಟ ಯಶ್ ಅವರು ಅವರ ಸ್ನೇಹಿತನ ಸಹಾಯದ ಮೂಲಕ ಮೊದಲಿಗೆ ಬೆನಕ ಎನ್ನುವ ಒಂದು ನಾಟಕದಲ್ಲಿ ಅಭಿನಯ ಅವಕಾಶ ಗಿಟ್ಟಿಸಿಕೊಂಡರು. ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರಿಂದ ಈ ಮೂಲಕ ಶಭಾಷ್ ಎನಿಸಿಕೊಂಡರು. ಬಳಿಕ ಉತ್ತರಾಯಣ ಧಾರಾವಾಹಿಯಲ್ಲಿ ಅಭಿನಯ ಆರಂಭಮಾಡಿದ್ದು, ನಂತರ ಸಿಲ್ಲಿ ಲಲ್ಲಿ ನಂದಗೋಕುಲ ಸೀರಿಯಲಲ್ಲಿ ಹೆಚ್ಚು ಗುರುತಿಸಿಕೊಂಡರು ಯಶ್. ಬಳಿಕ ಯಶ್ ಅವರು ಮೊದಲ ಬಾರಿಗೆ ಚಿತ್ರದಲ್ಲಿ ಸೈಡ್ ಪಾತ್ರ ಮಾಡಿದ್ದರು. ಮುಂದೆ ಹೋಗುತ್ತ ಹೋಗುತ್ತ ಯಶ್ ಅವರ ಸಿನಿಮಾ ಹೆಸರು ಕೂಡ ನೇಮಕ ಆಗಿತ್ತಂತೆ. ಆದ್ರೆ ಅವರನ್ನು ಕರೆಸಿ ಅವಮಾನ ಕೂಡ ಮಾಡಲಾಗಿತ್ತು ಅಪಮಾನ ಮಾಡಿ ಅವರನ್ನು ಅಭಿನಯದ ಅವಕಾಶ ಕೊಡದೆ ಹಿಂದೆ ಸರಿಯುವಂತೆ ಹೇಳಿದ್ದುಂಟು ಎನ್ನಲಾಗಿದೆ. 

ಆದರೆ ಅದೇ ನಿರ್ದೇಶಕ ಮತ್ತೆ ಮರಳಿ ಬಂದು ಮೊಗ್ಗಿನ ಮನಸ್ಸು ಚಿತ್ರದಲ್ಲಿ ಅಭಿನಯ ಮಾಡಲು ಹೇಳಿದ್ದರಂತೆ. ಹೌದು ಒಮ್ಮೆ ಮೊಗ್ಗಿನ ಮನಸ್ಸು ಚಿತ್ರ ಹಿಟ್ ಆಗುತ್ತಿದ್ದಂತೆ ಯಶ್ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ಸಕತ್ ಅಭಿನಯದ ಮೂಲಕ ಒಂದರಮೇಲೊಂದರಂತೆ ಮೊದಲಾಸಲ, ರಾಜಧಾನಿ, ಕಿರಾತಕ, ಗೂಗ್ಲಿ , ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ಪೀಸ್, ಸಂತು ಸ್ಟ್ರೈಟ್ ಫಾರ್ವರ್ಡ್ ಹೀಗೆ ಇನ್ನೂ ಸಾಕಷ್ಟು ಸಿನಿಮಾ ಹಿಟ್ ಆದವು. ಈಗ ಕೆಜಿಎಫ್ ಹಂತಕ್ಕೆ ಬಂದು ನಿಂತಿದೆ. ಇಡೀ ವಿಶ್ವಕ್ಕೆ ಪರಿಚಯ ಆಗಿದ್ದಾರೆ ಯಶ್ ಎನ್ನಬಹುದು. ಹೌದು ಒಂದಾನೊಂದು ಕಾಲದಲ್ಲಿ ಮೆಜೆಸ್ಟಿಕ್ ನಲ್ಲಿ ಮಲಗಿ ತಂದೆ-ತಾಯಿಗೆ ಜನರು ಆಡುತ್ತಿದ್ದ ನೋವಿನ ಮಾತನ್ನು ನೆನೆದು ಕಣ್ಣೀರಿಡುತ್ತಲೇ ನೋವನ್ನು ಅನುಭವಿಸಿ ಕಷ್ಟಪಟ್ಟು ಶ್ರದ್ಧೆಯಿಂದ ಚಿತ್ರರಂಗದಲ್ಲಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಕೂಡ ಇಂದು ಬಿಡುಗಡೆಯಾಗಿದೆ. ಇಡಿ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಯಶ್ ಅಭಿನಯ ಮಾಡಿದ್ದಾರೆ. ಜೊತೆಗೆ ನಟಿ ರಾಧಿಕಾ ಪಂಡಿತ್ ಅವರನ್ನು 2016ರಲ್ಲಿ ಮದುವೆಯಾಗಿದ್ದು, ಇದೀಗ ಯಶ್ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಚಿತ್ರರಂಗದಲ್ಲಿ ಕೇವಲ ಯಶಸ್ಸು ಆಗಿದ್ದೇನೆ ಎಂದು ಯಶ್ ಸುಮ್ಮನೆ ಇರಲಿಲ್ಲ. ಕೊಪ್ಪಳದ ಜಿಲ್ಲೆಯ 40 ಊರುಗಳಿಗೆ ಯಶೋ ಮಾರ್ಗದ ಮೂಲಕ ನಾಲ್ಕು ಕೋಟಿ ಹಣ ಖರ್ಚು ಮಾಡಿ ನೀರನ್ನು ಒದಗಿಸಿದ್ದಾರೆ. ಕರೋನಾ ಸಂದರ್ಭದಲ್ಲಿ ಒಂದೂವರೆ ಕೋಟಿ ಹಣ ಖರ್ಚು ಮಾಡಿ ಜನರ ಕಷ್ಟಕ್ಕೆ ನಟ ಯಶ್ ಸ್ಪಂದಿಸಿದ್ದಾರೆ. ಇನ್ನೂ ಎತ್ತರಕ್ಕೆ ಯಶ್ ಅವರು ಬೆಳೆಯಲಿ. ಹಾಗೇನೇ ಈ ಮಾಹಿತಿ ಹೇಗಿದೆ ಎಂದು ನಮಗೆ ಕಾಮೆಂಟ್ ಮಾಡಿ. ಮಾಹಿತಿ ಶೇರ್ ಮಾಡಿ ಧನ್ಯವಾದಗಳು.