Rashmika Mandanna : ವಾಟರ್ ಬೇಬಿಯಂತೆ ರಶ್ಮಿಕಾ ಮಂದಣ್ಣ: ಈ ಟೈಟಲ್ ಸಿಗಲು ಕಾರಣವೇನು ಗೊತ್ತಾ..?

By Infoflick Correspondent

Updated:Monday, May 9, 2022, 22:19[IST]

Rashmika Mandanna : ವಾಟರ್ ಬೇಬಿಯಂತೆ ರಶ್ಮಿಕಾ ಮಂದಣ್ಣ: ಈ ಟೈಟಲ್ ಸಿಗಲು ಕಾರಣವೇನು ಗೊತ್ತಾ..?

ಕಳೆದ ಐದು ವರ್ಷಗಳಲ್ಲಿ ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಹಾಲಿವುಡ್ ಹಾಗೂ ಕಾಲಿವುಡ್ ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಲೀಡಿಂಗ್ ನಲ್ಲಿರೋ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಈಗ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವೇ. ಅಲ್ಲು ಅರ್ಜುನ್ ಜೊತೆ ಪುಷ್ಪ ಚಿತ್ರ ಮಾಡಿದ ನಂತರ ರಶ್ಮಿಕಾ ಲಕ್ ಇನ್ನೂ ಡಬಲ್ ಆಗಿದೆ. ಹಲವಾರು ಪ್ರಾಡಕ್ಟ್ ಗಳಿಗೆ ಬ್ರ್ಯಾಂಡ್ ಅಂಬ್ಯಾಸಿಡರ್ ಆಗಿದ್ದಾರೆ. ಹತ್ತಾರು ಪ್ರಾಡಕ್ಟ್ ಗಳ ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಈಗ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಮಾರ್ಚ್ 10 ರಂದು ತಾವು ಯೂಟ್ಯೂಬ್ ಚಾನೆಲ್ ತೆರೆದಿದ್ದರು. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ನನ್ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೋಡಿ ಎಂದು ಲಿಂಕ್ ಶೇರ್ ಮಾಡಿದ್ದರು. ಇದರಲ್ಲಿ ಆಗಾಆ ಶಾಟ್ಸ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅದು ಬಿಟ್ಟರೆ, ಇದೀಗ ವಾಟರ್ ಬೇಬಿ ಎಂಬ ಶಾಟ್ಸ್ ಅನ್ನು ಅಪ್ ಲೋಡ್ ಮಾಡಿದ್ದಾರೆ. ಇದರಲ್ಲಿ ತಾವು ವಾಟರ್ ಬೇಬಿ ಎಂದು ಅವರೇ ಹೇಳಿಕೊಂಡಿದ್ದಾರೆ.     

ಅಷ್ಟೇ ಅಲ್ಲದೇ, ತಮಗೆ ನೀರೆಂದರೆ ತುಂಬಾ ಇಷ್ಟ. ಸ್ವಿಮ್ ಮಾಡುವುದೆಂದರೆ ಇನ್ನೂ ಇಷ್ಟ, ಶವರ್ ಕೆಳಗೆ ನಿಲ್ಲಲು ಖುಷಿಯಾಗುತ್ತೆ ಎಂದು ಕೂಡ ಹೇಳಿದ್ದಾರೆ. ಸ್ವಿಮ್ಮಿಂಗ್ ಪೋಲ್ನಲ್ಲಿ ಇಳಿದು ಈ ವೀಡಿಯೋ ಮಾಡಿದ್ದಾರೆ. ಈಗಾಗಲೇ 385,004 ವ್ಯೂವ್ಸ್ ಪಡೆದಿದೆ. 25ಕೆ ಲೈಕ್ಸ್ ಪಡೆದಿದೆ. ಅದಾಗಲೇ 91.4ಕೆ ಸಬ್ಸ್ ಕ್ರೈಬರ್ಸ್ ಗಳನ್ನು ರಶ್ಮಿಕಾ ಮಂದಣ್ಣ ಹೊಂದಿದ್ದಾರೆ. ಕಿರಿಕ್ ಪಾರ್ಟಿ, ಪೊಗರು, ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಪುಷ್ಪ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ.