ಮಳೆಗಾಲದಲ್ಲಿ ದೂದ್ ಸಾಗರ್ ಟ್ರೇಕ್ ಮಾಡಲು ಇರಲಿ ಎಚ್ಚರಿಕೆ ! ಪಾಲಿಸಿ ಈ ಮಾರ್ಗಸೂಚಿ

By Infoflick Correspondent

Updated:Tuesday, August 2, 2022, 09:03[IST]

ಮಳೆಗಾಲದಲ್ಲಿ ದೂದ್ ಸಾಗರ್ ಟ್ರೇಕ್ ಮಾಡಲು ಇರಲಿ ಎಚ್ಚರಿಕೆ ! ಪಾಲಿಸಿ ಈ ಮಾರ್ಗಸೂಚಿ

ಸುಂದರವಾದ ಪಶ್ಚಿಮ ಘಟ್ಟಗಳ ಮಡಿಲಲ್ಲಿ
ದೂಧ್‌ಸಾಗರ್ ಜಲಪಾತ ನೆಲೆಗೊಂಡಿದೆ. ಸುಮಾರು 1017 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ದೂಧ್‌ಸಾಗರ್ ಜಲಪಾತವು ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.


ನಿಮ್ಮ ಟ್ರೆಕ್ಕಿಂಗ್‌ ಅನ್ನು ಕುಲೆಮ್‌ನಿಂದ ಪ್ರಾರಂಭ ಮಾಡಿ. ಇದು 26 ಕಿ.ಮೀ ದೂರದಲ್ಲಿರುವ ಕ್ಯಾಸಲ್‌ ರಾಕ್‌ಗೆ ತಲುಪಬಹುದು. ನಂತರ ಕ್ಯಾಸಲ್ ರಾಕ್‌ನಿಂದ ದೂಧ್‌ಸಾಗರ್‌ಗೆ 11 ಕಿ.ಮೀ ಟ್ರೆಕ್ಕಿಂಗ್‌ ಮಾಡಬೇಕಾಗುತ್ತದೆ.

ಕ್ಯಾಸಲ್ ರಾಕ್ ಗೆ ಕೆಲವು ರೈಲುಗಳಿದ್ದರೂ ಸಹ ಅವು ತಲುಪುವ ಸಮಯ ಉತ್ತಮವಾಗಿಲ್ಲ.  ಬೆಳಗಿನ ಸಮಯದಲ್ಲೆ ಕ್ಯಾಸಲ್ ರಾಕ್ ಗೆ ತಲುಪುವ ರೈಲು ದೊರೆಯುತ್ತದೆ.  ಹೊರಡುವ ಸಮಯ ಇತ್ಯಾದಿಗಳನ್ನು ಮುಂಚಿತವಾಗಿ ತಿಳಿದರೆ ಉತ್ತಮ. ಒಂದೊಮ್ಮೆ ಕ್ಯಾಸಲ್ ರಾಕ್ ನಿಲ್ದಾಣದಲ್ಲಿ ಇಳಿದಿರೆಂದರೆ ನಿಮ್ಮ ಚಾರಣ ಕಾರ್ಯವನ್ನು ಆರಂಭಿಸಬಹುದು.

ಟ್ರೆಕ್ಕಿಂಗ್ ಮಾಡುವಾಗ ಪರ್ವತದ ಉದ್ದಕ್ಕೂ ಅನೇಕ ರೈಲ್ವೆ ಸುರಂಗಗಳನ್ನು ದಾಟುತ್ತೀರಿ. ಸುರಂಗಗಳು ಕತ್ತಲೆಯಾಗಿಸುವುದರಿಂದ ಟಾರ್ಚ್‌ಗಳನ್ನು ಒಯ್ಯಲು ಮರೆಯದಿರಿ.

ಲಘುವಾದ ಆಹಾರವನ್ನು ಟ್ರೆಕ್ಕಿಂಗ್‌ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಸುತ್ತಮುತ್ತ ಅಲ್ಲಿ ಯಾವುದೇ ತಿನಿಸುಗಳು ಅಂಗಡಿಗಳು ಲಭ್ಯವಿಲ್ಲ.

ಟ್ರೆಕ್ ಮಾಡುವ ಸಮಯದಲ್ಲಿ ಕೋಲು ಮುಂತಾದ ಆಧಾರಕಗಳನ್ನು ಹಿಡಿದು ಸಾಗುವುದರಿಂದ ಸಹಾಯವಾಗುತ್ತದೆ ಹಾಗೂ ಕಂಬಿಗಳ ಮೇಲೆ ಟ್ರೆಕ್ ಸಾಗುವುದರಿಂದ ಎರಡು ಕಡೆಗಳಿಂದ ರೈಲು ಬರುತ್ತಿರುವುದರ ಕುರಿತು ಎಚ್ಚರಿಕೆ ವಹಿಸಬೇಕು

ನೀವು ರೈಲಿನಲ್ಲಿದೂಧ್ ಸಾಗರ್‌ಗೆ ಪ್ರಯಾಣಿಸುತ್ತಿದ್ದರೆ, ಯಾವುದೇ ಮೂರು ಆಯ್ಕೆಗಳನ್ನು ಆರಿಸಿ. ಮೊದಲ ಆಯ್ಕೆ ಗೋವಾದ ಮಡ್ಗಾಂವ್‌ನಿಂದ ಕುಲೆಮ್‌ಗೆ ಬೆಳಿಗ್ಗೆ ರೈಲು ತೆಗೆದುಕೊಳ್ಳುವುದು .

ಪರ್ಯಾಯವಾಗಿ, ಕ್ಯಾಸಲ್ ರಾಕ್ ನಿಲ್ದಾಣಕ್ಕೆ ರೈಲಿನ ಮೂಲಕ ಪ್ರಯಾಣಿಸಿ ಹತ್ತಿರದ ಸುರಂಗದಲ್ಲಿ ದೂಧ್ ಸಾಗರ್ ಜಲಪಾತಕ್ಕೆ ಇಳಿಯಿರಿ. ದೂಧ್‌ಸಾಗರ್‌ ಫಾಲ್ಸ್‌ಗೆ ಹೋಗಲು ರೈಲ್ವೆ ದರ ಅಗ್ಗವಾಗಿದ್ದರೂ, ಜಲಪಾತ ವೀಕ್ಷಣೆ ಮಾತ್ರ ತೀರಾ ದುಬಾರಿ. ರೈಲ್ವೆ ಹಳಿ ಮೇಲೆ ಸಾರ್ವಜನಿಕರಿಗೆ ಸಂಚಾರ ನಿಷೇಧಿಸಿದ ಬಳಿಕ ಜಲಪಾತದ ಕೆಳ ತುದಿಗೆ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಹಾರ ಚುರುಕಾಗಿದೆ

ಕೊಲೆಮ್‌ನ ಚಾರಣ ಗುಂಪುಗಳು ಮತ್ತು ಹೋಟೆಲ್‌ಗಳು ಸಹ ದೂಧ್ ಸಾಗರ್ ಜಲಪಾತಕ್ಕೆ ವಿಶೇಷ ಚಾರಣ ಪ್ಯಾಕೇಜ್‌ಗಳನ್ನು ನೀಡಲು ಪ್ರಾರಂಭಿಸಿವೆ .