ಬೆಳ್ಳಿ ಪರದೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದ ಮತ್ತೊಬ್ಬ ನಟ ಕಿರುತೆರೆಗೆ ಎಂಟ್ರಿ

By Infoflick Correspondent

Updated:Thursday, March 10, 2022, 15:05[IST]

ಬೆಳ್ಳಿ ಪರದೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದ ಮತ್ತೊಬ್ಬ ನಟ ಕಿರುತೆರೆಗೆ ಎಂಟ್ರಿ

ಇತ್ತೀಚೆಗೆ ಹಿರಿತೆರೆಗಿಂತಲೂ ಕಿರುತೆರೆ ತುಂಬಾ ಫೇಮಸ್ ಆಗಿದೆ. ಹಲವು ನಟ-ನಟಿಯರು ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಹಲವು ಸಿನಿಮಾ ನಟ-ನಟಿಯರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ರಚಿತಾ ರಾಮ್, ತಾರಾ, ಅನುಪ್ರಭಾಕರ್, ಸೋನು ಗೌಡ, ನಟಿ ಲಕ್ಷ್ಮೀ, ವಿನಬಯಾ ಪ್ರಸಾದ್, ರಕ್ಷಿತಾ, ಉಮಾಶ್ರೀ, ಭಾವನಾ ಹಾಗೂ ನಟರಾದ ರವಿಚಂದ್ರನ್, ಎಸ್ ನಾರಾಯಣ್, ಮಾಸ್ಟರ್ ಆನಂದ್, ಮೋಹನ್, ಅಭಿಜಿತ್, ಜೈ ಜಗದೀಶ್, ಅನಿರುದ್ಧ್, ಬಾಲ್ ರಾಜ್, ವಿಜಯ್ ರಾಘವೇಂದ್ರ ಸೇರಿದಂತೆ ಹಲವು ಸಿನಿ ತಾರೆಯರು, ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. 

ಸಿನಿಮಾ ಕ್ಷೇತ್ರದಲ್ಲಿ ಸಕ್ಸಸ್ ಕಾಣ ಕೆಲ ನಟರಿಗೆ ಕಿರುತೆರೆ ಕೈ ಹಿಡಿದಿದೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ನಟ ಅನಿರುದ್ಧ್. ಅನಿರುದ್ಧ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಬೆಳ್ಳಿ ತೆರೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗಲಿಲ್ಲ. ಆದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಅನಿರುದ್ಧ್ ಅವರ ಕೈ ಹಿಡಿದಿದ್ದು, ಆರ್ಯವರ್ಧನ್ ಆಗಿ ಹೊರ ಹೊಮ್ಮಿದ್ದಾರೆ. ಸದ್ಯ ಅನಿರುದ್ಧ ಅವರು ಸಕ್ಸಸ್ ಕಂಡಿದ್ದು, ಎಲ್ಲರ ನೆಚ್ಚಿನ ನಟರಾಗಿದ್ದಾರೆ. 

ಇದೀಗ ಸಾಲು ಸಾಲಾಗಿ ಹಲವು ಸಿನಿ ನಟ ನಟಿಯರು ಕಿರುತೆರೆಯತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಶುರುವಾದ ರಾಮಾಚಾರಿ ಎಂಬ ಧಾರಾವಾಹಿಯಲ್ಲೂ ದೊಡ್ಡ ತಾರಾ ಬಳಗವೇ ಇದ್ದು, ನಟಿ ಭಾವನಾ ಈ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಟಿ ಉಮಾಶ್ರೀ (Umashree)  ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇನ್ನು ಪಾರು ಧಾರಾವಾಹಿಯಲ್ಲಿ ನಟಿ ವಿನಯಾ ಪ್ರಸಾದ್ ಹಾಗೂ ನಿರ್ದೇಶಕ, ನಟ ಎಸ್ ನಾರಾಯಣ್  (S Narayan) ಅವರು ನಟಿಸುತ್ತಿದ್ದಾರೆ. ಇದೀಗ ಎಸ್ ನಾರಾಯಣ್ ಅವರ ಪುತ್ರ ಪಂಕಜ್  (Pankaj) ಕೂಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಒಂದು ಸಮಯದಲ್ಲಿ ಹೆಸರು ಮಾಡಿ ನಂತರ ಸಕ್ಸಸ್ ಕಾಣದ ಪಂಕಜ್ ಈಗ ಕಿರುತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪಾರು ಧಾರಾವಾಹಿಯಲ್ಲಿ ಪಂಕಜ್ ಕಾಣಿಸಿಕೊಂಡಿದ್ದು, ಇದರಲ್ಲಿ ವೈದ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.