Sadhu Kokila : ಕೆಜಿಎಫ್2 ಸಿನಿಮಾ ಬಂದಮೇಲೆ ಜನ ಥಿಯೆಟರ್‌ ಗೆ ಬರ್ತಿಲ್ಲ ಎಂದು ಈ ಕಾರಣ ಹೇಳಿದ ಸಾಧುಕೋಕಿಲ

By Infoflick Correspondent

Updated:Wednesday, May 11, 2022, 08:39[IST]

Sadhu Kokila :   ಕೆಜಿಎಫ್2 ಸಿನಿಮಾ ಬಂದಮೇಲೆ ಜನ ಥಿಯೆಟರ್‌ ಗೆ ಬರ್ತಿಲ್ಲ ಎಂದು ಈ ಕಾರಣ ಹೇಳಿದ ಸಾಧುಕೋಕಿಲ

ಕ್ರೇಜಿಸ್ಟಾರ್‌ ರವಿಚಂದ್ರನ್‌ ಫ್ಯಾಮಿಲಿಯಿಂದ ಮತ್ತೊಬ್ಬರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿರೋದು ನಿಮ್ಗೆ ಗೊತ್ತೇ ಇದೆ. ತ್ರಿವಿಕ್ರಮ ಚಿತ್ರದ ಮೂಲಕ ರವಿಚಂದ್ರನ್‌ ಎರಡನೇ ಪುತ್ರ ವಿಕ್ರಮ್‌ ಭರ್ಜರಿಯಾಗಿಯೇ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ರವಿಚಂದ್ರನ್ ಪುತ್ರ ವಿಕ್ರಮ್‌ಗೆ ಇದು ಮೊದಲ ಸಿನಿಮಾವಾಗಿದೆ. ಈಗಾಗಲೇ ಸಿನಿಮಾದ ಹಾಡು, ಟ್ರೈಲರ್‌ಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ 'ಪ್ಲೀಸ್ ಮಮ್ಮಿ' ಹಾಡಂತೂ ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್ ಆಗಿದೆ. 

ತಿವ್ರಿಕ್ರಮ ಚಿತ್ರತಂಡದಿಂದ ಈಗ ಹೊಸ ವಿಷ್ಯವೊಂದು ಹೊರಬಿದ್ದಿದೆ. ಕ್ರೇಜಿಸ್ಟಾರ್‌ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯಿಸಿರುವ 'ತ್ರಿವಿಕ್ರಮ' ಚಿತ್ರದ ರಿಲೀಸ್‌ ಡೇಟ್‌ ಅನ್ನು ಇಂದು  ಚಿತ್ರತಂಡ ಘೋಷಣೆ ಮಾಡಿದೆ. 'ತ್ರಿವಿಕ್ರಮ' ಚಿತ್ರತಂಡ ಸುದ್ದಿಗೋಷ್ಟಿ ಕರೆದು ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.  

ಜೂನ್ 24ರಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ಘೋಷಿಸಿದೆ. ಸುದ್ದಿಗೋಷ್ಟಿಯಲ್ಲಿ ನಟಿ ತಾರಾ, ಸಾಧುಕೋಕಿಲಾ, ಮನುರಂಜನ್, ಶರಣ್, ನಟ ವಿಕ್ರಮ್ ಸೇರಿದಂತೆ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು. ನಟಿ ತಾರಾ ಅಪ್ಪನಂತೆ ಮಕ್ಕಳು ಹೆಸರು ಮಾಡಿ ಎಂದು ಸಂತಸದಿಂದ ಹರಸಿದರು.  

ಸಾಧುಕೋಕಿಲಾ ಮಾತನಾಡುತ್ತಾ ಕೆಜಿಎಫ್2 ಸಿನಿಮಾದ ಹೆಸರು ತೆಗೆದುಕೊಂಡು ಕೇಳುಗರ ಕಿವಿ ನೆಟ್ಟಗಾಗಿಸಿದರು. ಕನ್ನಡದಲ್ಲಿ ಹಿಟ್ ಸಿನಿಮಾಗಳು ಬಂದಾಗ ಜನ ಅದರ ಗುಂಗಿನಲ್ಲಿ ಇರುತ್ತಾರೆ ಜನುಮದ ಜೊಡಿ ಸಿನಿಮಾದಲ್ಲೂ ಆಗಿದ್ದು ಹಾಗೆ. ಜನುಮದ ಜೊಡಿ ಸಿನಿಮಾ ನೋಡಿದ ಜನ ನಂತರ ಎಷ್ಟೇ ಒಳ್ಳೆ ಕನ್ನಡ ಸಿನಿಮಾ ಬಂದರೂ ನೋಡಲು ಹೊಗಲೇ ಇಲ್ಲ. ನೋಡಿದ ಜನ ಸ್ವೀಕಾರ ಮಾಡಲೇ ಇಲ್ಲ. ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ. 

ಯಜಮಾನ ಸಿನಿಮಾ ಬಂತು ಅದು ಸುಪರ್ ಹಿಟ್ ಆಯಿತು ನಂತರ ದಿಗ್ಗಜರು ಬಂತು ಅದು ಹಿಟ್ ಆಗಲೇ ಇಲ್ಲ‌. ಈಗಲೂ ಕೆಜಿಎಫ್2 ಬಂದಿದೆ ಕೆಜಿಎಫ್2 ಸಿನಿಮಾ ಬಂದಮೇಲೆ ಜನ ಥಿಯೆಟರ್‌ ಗೆ ಬರ್ತಿಲ್ಲ. ಈಗ ಮತ್ತೆ ಹಾಗಾಗಬಾರದು ಈ ಸಿನಿಮಾ ನೋಡಿ ಹರಸಿ ಎಂದು ಮನವಿ ಮಾಡಿದ್ದಾರೆ ಸಾಧುಕೋಕಿಲ.