ವಿವಾದಗಳಿಗೆ ತೆರೆಯೆಳೆದು ಹೀಗೆ ಸ್ಪಸ್ಟನೆ ನೀಡಿದ ನಟಿ ಸಾಯಿಪಲ್ಲವಿ

By Infoflick Correspondent

Updated:Sunday, June 19, 2022, 11:05[IST]

ವಿವಾದಗಳಿಗೆ ತೆರೆಯೆಳೆದು ಹೀಗೆ ಸ್ಪಸ್ಟನೆ ನೀಡಿದ ನಟಿ ಸಾಯಿಪಲ್ಲವಿ

ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಯಿ ಪಲ್ಲವಿ ವಿರುದ್ಧ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ನಟಿ ಸಾಯಿ ಪಲ್ಲವಿ ತಮ್ಮ ಹೇಳಿಕೆಗೆ ಸಷ್ಟನೆ ನೀಡಿದ್ದು, ಫೇಸ್​ಬುಕ್ ಲೈವ್  ಬರುವ ಮೂಲಕ ಎಲ್ಲ ವಿವಾದಗಳಿಗೂ ಸ್ಪಷ್ಟನೆ ನೀಡಿದ್ದಾರೆ.

ವೀಡಿಯೊಗೆ ಶೀರ್ಷಿಕೆಯಲ್ಲಿ ಇಲ್ಲಿ ನನ್ನ ಸ್ಪಷ್ಟೀಕರಣವಿದೆ! ನಿಮ್ಮೆಲ್ಲರಿಗೂ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ನಂತರ ಮಾತನಾಡಿದ ಅವರು, ನಾನು ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಲು ನಿಮ್ಮ ಎದುರು ಬರುತ್ತಿದ್ದೇನೆ. ಹೃದಯದಿಂದ ಮಾತನಾಡುವಾಗ ನಾನು ಎರಡು ಬಾರಿ ಯೋಚಿಸುತ್ತೇನೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ಎಡವೋ ಅಥವಾ ಬಲವೋ ಎಂದು ಪ್ರಶ್ನೆ ಮಾಡಲಾಯಿತು. ಆಗ ನಾನು ತಟಸ್ಥ ಎನ್ನುವ ಉತ್ತರ ಕೊಟ್ಟೆ. ನಾವು ಮೊದಲು ಮನುಷ್ಯರಾಗಬೇಕು ಎಂದು ಹೇಳಿದ್ದೆ. ನಾನು ವಿಚಾರಗಳನ್ನು ಹೇಗೆ ನೋಡುತ್ತೇನೆ ಎನ್ನುವುದನ್ನು ಹೇಳಿದ್ದೆ' ಎಂದು ಮಾತು ಆರಂಭಿಸಿದ್ದಾರೆ ಅವರು.

ಯಾವುದೇ ರೂಪದಲ್ಲಿ ಹಿಂಸೆ ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ. ಆದರೆ, ಅನೇಕ ಜನರು ಇದನ್ನು ಬೇರೆ ರೀತಿ ಅರ್ಥೈಸಿಕೊಂಡಿರುವುದು ಆತಂಕಕಾರಿಯಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ವೈಯಕ್ತಿಕ ಜೀವನವನ್ನು ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್ ಅನ್ನು ವೀಕ್ಷಿಸಿದ ನಂತರ, ನಾನು ಚಿತ್ರದ ನಿರ್ದೇಶಕ (ವಿವೇಕ್ ಅಗ್ನಿಹೋತ್ರಿ) ಜೊತೆ ಮಾತನಾಡಿದೆ. ಜನರ ದುಃಸ್ಥಿತಿಯನ್ನು ನೋಡಿದ ನಂತರ ತಾನು ವಿಚಲಿತಳಾಗಿದ್ದೇನೆ ಎಂದು ಹೇಳಿದೆ.

ನಮ್ಮ ನಂಬಿಕೆಗಳಿಗೆ ಬದ್ಧರಾಗುವ ಮೊದಲು ನಾವು ಒಳ್ಳೆಯ ಮನುಷ್ಯರಾಗಿರಬೇಕು. ನರಮೇಧದ ಬಗ್ಗೆ ನನ್ನ ವಿರೋಧವಿದೆ. ಯಾರಿಗೂ ಯಾರನ್ನೂ ಕೊಲ್ಲುವ ಹಕ್ಕಿಲ್ಲ. ಯಾವುದೇ ಥರದ ಹಿಂಸೆ, ಯಾವುದೇ ಧರ್ಮದ ವಿಚಾರಲ್ಲೂ ಹಿಂಸೆ ಸರಿಯಲ್ಲ ಎಂಬುದು ನನ್ನ ಭಾವನೆ. ವೈದ್ಯೆಯಾಗಿ ನನಗೆ ಎಲ್ಲ ಜೀವವೂ ಒಂದೇ, ನಾನು ಎಲ್ಲ ಜೀವವನ್ನೂ ಗೌರವಿಸುತ್ತೇನೆ. ನಾವೆಲ್ಲರೂ ಸಮಾನರು ಎಂಬುದನ್ನು ಶಾಲಾದಿನಗಳಿಂದಲೂ ಓದುತ್ತ ಬಂದಿದ್ದೇನೆ. ಮುಂದೆ ಯಾವುದೇ ಮಗು ಕೂಡ ಅದರ ಗುರುತಿನ ಕಾರಣಕ್ಕೆ ಭಯದಲ್ಲಿ ಬದುಕುವಂಥ ವಾತಾವರಣ ಉಂಟಾಗದಿರಲಿ ಎಂದು ಆಶಿಸುತ್ತೇನೆ ಎಂದಿರುವ ಸಾಯಿ ಪಲ್ಲವಿ, ಎಲ್ಲರಿಗೂ ಸಂತೋಷ, ಶಾಂತಿ-ಪ್ರೀತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಎಲ್ಲಾ ಭಾರತೀಯರು ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯ ರೀತಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದು ಬೇಸರದ ವಿಚಾರ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ' ಎಂದಿದ್ದಾರೆ ಸಾಯಿ ಪಲ್ಲವಿ.