ಧೂಳ್ ಎಬ್ಬಿಸುತ್ತಿರುವ ಸಲಗ ಚಿತ್ರ..! ಇಲ್ಲಿಯವರೆಗೆ ಎಷ್ಟು ಕಲೆಕ್ಷನ್ ಮಾಡಿದೆ ನೋಡಿ..?!

Updated: Wednesday, October 20, 2021, 14:03 [IST]

ಧೂಳ್ ಎಬ್ಬಿಸುತ್ತಿರುವ ಸಲಗ ಚಿತ್ರ..! ಇಲ್ಲಿಯವರೆಗೆ ಎಷ್ಟು ಕಲೆಕ್ಷನ್ ಮಾಡಿದೆ ನೋಡಿ..?!

ಮೊಟ್ಟಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಹಾಗೂ ಡಾಲಿ ಧನಂಜಯ್ ಅವರ ಜೊತೆ ಅಭಿನಯಿಸಿರುವ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅವರ ಸಲಗ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಲಗ ಚಿತ್ರ ಗೆದ್ದಿದೆ ಎಂದು ಹೇಳಬಹುದು. ಸಲಗ ಚಿತ್ರ 344ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗಿದ್ದು, ಮೊದಲನೇ ವಾರಕ್ಕಿಂತ ಎರಡನೇ ವಾರವೇ ಹೆಚ್ಚು ಸದ್ದು ಮಾಡುತ್ತಿದೆ ಹಾಗೂ ಬಾಕ್ಸಾಫೀಸಲ್ಲಿ ಧೂಳೆಬ್ಬಿಸುತ್ತಿದೆ.

ನಟ ದುನಿಯಾ ವಿಜಯ್ ಅವರ ಅಭಿನಯ ಎಲ್ಲರಿಗೂ ಒಪ್ಪಿಗೆ ಆಗಿದ್ದು. ನಿರ್ದೇಶನದಲ್ಲೂ ಗೆದ್ದಿದ್ದಾರೆ. ಡಾಲಿ ಧನಂಜಯ್ ಅಭಿನಯ ನೋಡುವಂತದ್ದಾಗಿದೆ. ಇದೀಗ ಸಲಗ ಚಿತ್ರದ ಕಲೆಕ್ಷನ್ ವಿಚಾರಕ್ಕೆ ಬರೋಣ. ಹೌದು ಕಳೆದ ಗುರುವಾರ ಸಲಗ ವಿಜಯದಶಮಿ ಹಬ್ಬದ ದಿವಸ ಬಿಡುಗಡೆಯಾಗಿತ್ತು. ಸಲಗ ಚಿತ್ರ ಇಲ್ಲಿಯವರೆಗೆ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬುದಾಗಿ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರನ್ನು ಮಾಧ್ಯಮದವರು ಕೇಳಿದ್ದಾರೆ. ಆಗ ಶ್ರೀಕಾಂತ್ ಅವರು ವಿತರಕರಾದ ಜಗದೀಶ್ ಮತ್ತು ಜಯಣ್ಣ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.

ಹೌದು ಜಗದೀಶ್ ಮಾಧ್ಯಮದ ಜೊತೆ ಮಾತನಾಡಿ, ನಾಳೆಗೆ ಸಿನಿಮಾ ಬಿಡುಗಡೆಯಾಗಿ ಎಂಟು ದಿನಗಳು ಆಗಿವೆ. ನಾಳೆಯೇ ಸಲಗ ಸಿನಿಮಾ ಎಷ್ಟು ಕೋಟಿ ಹಣ ಕಲೆಕ್ಷನ್ ಮಾಡಿದೆ, ಬಾಕ್ಸಾಫೀಸಿನಲ್ಲಿ ಎಷ್ಟು ದುಡ್ಡು ಎಂಬುದಾಗಿ ಹೇಳುತ್ತೇವೆ ಎಂದು ಹೇಳಿದರು. ಸ್ನೇಹಿತರೆ ಸಲಗ ಚಿತ್ರ ಅಂದಾಜಿನ ಪ್ರಕಾರ ಗಾಂಧಿನಗರದಲ್ಲಿ ಕೇಳಿ ಬಂದಿರುವ ಸುದ್ದಿಯ ಪ್ರಕಾರ 20 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿರಬಹುದು ಎಂಬುದಾಗಿ ಕೇಳಿಬಂದಿದೆ. ಏನೇ ಇರಲಿ ನಾಳೆ ಚಿತ್ರದ ವಿತರಕರಾದ ಜಗದೀಶ್ ಅವರೇ ಸಲಗ ಸಿನಿಮಾ ಇಲ್ಲಿಯವರೆಗೆ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿಸುತ್ತಾರೆ, ಅಲ್ಲಿಯವರೆಗೂ ಕಾಯೋಣ. ನೀವು ಈಗಾಗಲೇ ಸಲಗ ಚಿತ್ರ ನೋಡಿದ್ದರೆ ಹೇಗಿದೆ ಎಂದು ಕಾಮೆಂಟ್ ಮಾಡಿ. ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...