ಸಲಾಂ ರಾಕಿ ಭಾಯ್ ಎಂದ ಯಶ್ ಪುತ್ರಿ..! ಈ ಕ್ಯೂಟ್ ನಗುವ ನೀವೂ ನೋಡಲೇಬೇಕು..!

By Infoflick Correspondent

Updated:Sunday, May 1, 2022, 19:22[IST]

ಸಲಾಂ ರಾಕಿ ಭಾಯ್ ಎಂದ ಯಶ್ ಪುತ್ರಿ..! ಈ ಕ್ಯೂಟ್ ನಗುವ ನೀವೂ ನೋಡಲೇಬೇಕು..!

ರಾಕಿಂಗ್ ಸ್ಟಾರ್ ಯಶ್ ದಂಪತಿ ಇದೀಗ ಸುದ್ದಿಯಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಇಬ್ಬರು ಮಕ್ಕಳು. ಹೌದು ಮೊದಲ ಮಗು ಐರಾ ಹೆಣ್ಣು ಮಗುವಾಗಿದ್ದು, ಎರಡನೆ ಮಗು ಗಂಡು ಮಗು ಇದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ತುಂಬಾನೇ ಸುದ್ದಿಯಲ್ಲಿದ್ದಾರೆ. ವಿಶ್ವಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಅದ್ದೂರಿಯಾಗಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಎರಡು ವಾರವಾದರೂ ಇನ್ನು ಕೂಡ ರಾಕಿ ಬಾಯ್ ಹವಾ ನಿಂತಿಲ್ಲ. ನಟ ಯಶ್ ಪುತ್ರಿ ಐರಾ ಯಶ್ ಎದುರು ಸಲಾಂ ರಾಕಿ ಬಾಯ್ ಎಂದು ರಾಕ್ ರಾಕ್ ರಾಕೀ ಎಂದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  

ಹೌದು ಕೆಜಿಎಫ್ ಭಾಗ ಒಂದರಲಿ ಸಲಾಂ ರಾಕಿ ಬಾಯ್ ಎಂಬ ಹಾಡೊಂದು ಇತ್ತು. ಅದು ಎಲ್ಲರಿಗೂ ಹೆಚ್ಚು ಇಷ್ಟ ಆಗಿತ್ತು. ಇದೀಗ ಕೆಜಿಎಫ್ ಭಾಗ 2ರಲ್ಲಿ ಸಲಾಂ ರಾಕಿ ಬಾಯ್ ಡೈಲಾಗ್ ಕೂಡ ಇದ್ದು, ಯಶ್ ಪುತ್ರಿ ಐರಾ ಸಲಾಂ ರಾಕಿ ಬಾಯ್ ರಾಕ್ ರಾಕ್ ರಾಕಿ ಹಾಡಿನ ಸಾಲೊಂದನ್ನು ಹೇಳಿದ್ದಾಳೆ. ಕೊನೆಯಲ್ಲಿ ತುಂಬಾ ಕ್ಯೂಟಾಗಿ ನಗೆ ಬೀರಿದ ಐರಾ ವಿಡಿಯೋ ನೋಡಲೇಬೇಕು. ನಟಿ ರಾಧಿಕಾ ಪಂಡಿತ್ ಆಗಾಗ ಮಗಳ ಸಕತ್ ಫನ್ನಿಯಾದ ವಿಡಿಯೋ ಮತ್ತು ಫೋಟೋಗಳನ್ನು ಅಭಿಮಾನಿಗಳ ಬಳಿ ಹಂಚಿಕೊಳ್ಳುತ್ತಾರೆ. ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗಳ ಸಲಾಂ ರಾಕಿ ಬಾಯ್ ಎನ್ನುವ ಡೈಲಾಗ್ ವಿಡಿಯೋ ಹಂಚಿಕೊಂಡು ಯಶ್ ದಿನ ಆರಂಭವಾಗುವ ವೇಳೆ ತುಂಬಾ ಫನ್ನಿಯಾಗಿ ಇರುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಹಾಗೆ ಅವರ ಮಕ್ಕಳ ಚಟುವಟಿಕೆಗಳನ್ನು ಕೂಡ ಗಮನಿಸುತ್ತಾರೆ ಅಭಿಮಾನಿಗಳು. ಅಪ್ಪನ ಎದುರು ಐರಾ ಹೇಳಿರುವ ಸಲಾಂ ರಾಕಿ ಬಾಯ್ ವಿಡಿಯೋ ನೋಡಿ ಎಷ್ಟು ಕ್ಯೂಟಾಗಿದೆ ಎಂದು ಕಮೆಂಟ್ ಮಾಡಿ. ಹಾಗೆ ಶೇರ್ ಮಾಡಿ ವಿಡೀಯೋ ಇಷ್ಟಾವಾದರೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...

 

 
 
 
 
 
 
 
 
 
 
 
 
 
 
 

A post shared by Yash (@thenameisyash)