ಅಪ್ಪು ಅಭಿನಯದ ಜೇಮ್ಸ್ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿದ ಸಮಂತಾ ಆಡಿದ ಭಾವುಕ ಮಾತು

By Infoflick Correspondent

Updated:Sunday, March 20, 2022, 12:44[IST]

ಅಪ್ಪು ಅಭಿನಯದ ಜೇಮ್ಸ್ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿದ ಸಮಂತಾ ಆಡಿದ ಭಾವುಕ ಮಾತು

ಪವರ್ ಸ್ಟಾರ್ ಪುನೀತ್ ರಾಜಕುಮಾರ್  (Puneeth Rajkumar)  ಅವರು ಅಂದರೆ ಯಾರಿಗೆ ತಾನೆ ಇಷ್ಟವಿರಲಿಲ್ಲ ಹೇಳಿ. ಹೌದು ಚಿಕ್ಕಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನ ಅಜ್ಜಿ-ತಾತ ಎಲ್ಲರೂ ಕೂಡ ಇಷ್ಟಪಡುತ್ತಿದ್ದ ವ್ಯಕ್ತಿತ್ವ ಇವರದ್ದು. ಪುನೀತ್ ರಾಜ್ಕುಮಾರ್ ಅವರು ಇದೀಗ ನಮ್ಮ ಜೊತೆಗೆ ಇರದಿರಬಹುದು, ಆದರೆ ಅದು ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾವನ್ನು  ಅಭಿಮಾನಿಗಳು ಹೆಚ್ಚಿನ ಮಟ್ಟದಲ್ಲಿ ವಿಕ್ಷಿಸಿ ಕಣ್ತುಂಬಿಕೊಂಡಿದ್ದಾರೆ. ಅಪ್ಪು ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ, ಎಲ್ಲದಕ್ಕಿಂತ ಮೇಲಾಗಿ ಮಾನವೀಯತೆಯ ಗುಣಗಳನ್ನೆ ಹೆಚ್ಚು ಹೊಂದಿದ್ದವರು. ಅದರ ಮೂಲಕವೇ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡು ಅಪಾರ ಲಕ್ಷಾಂತರ ಜನರ ಮನಸ್ಸಿನಲ್ಲಿ ಪ್ರೀತಿ ಪಾತ್ರರಾಗಿದ್ದರು...

ಅಂತಹ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಎಂದರೆ ಎಲ್ಲರಿಗೂ ಹೇಗೆ ಆಗಿರಬಾರದು ಅಲ್ಲವೇ. ಅವರ ಕುಟುಂಬಕ್ಕೆ ಯಾವ ರೀತಿ ಅದೆಷ್ಟರ ಮಟ್ಟಿಗೆ ನೋವು ಆಗಿರಬಹುದು ಅಲ್ಲವೇ, ಅಪ್ಪು ಇದೀಗ ಎಲ್ಲರ ಮನಸ್ಸಿನಲ್ಲಿ ದೇವರಾಗಿದ್ದಾರೆ. ಅಪ್ಪು ಅವರ ಹುಟ್ಟು ಹಬ್ಬದ ದಿವಸ ಬಿಡುಗಡೆಯಾದ ಜೇಮ್ಸ್ ರಾರಾಜಿಸುತ್ತಿದ್ದು ಭರ್ಜರಿ ಆಕ್ಷನ್ ಸಿನಿಮಾದಲ್ಲಿ ಪುನೀತ್ ಅವರು ಸಕ್ಕತ್ತಾಗಿ ಮಿಂಚಿದ್ದಾರೆ. ಹೌದು ತೆಲುಗು ನಟಿ ಸಮಂತಾ (Samantha) ಸಹ ಅಪ್ಪು ಅಭಿನಯದ ಜೇಮ್ಸ್ ಚಿತ್ರವನ್ನು ಹೈದರಾಬಾದಿನಲ್ಲಿ ನೋಡಿ ಬಳಿಕ ಮಾಧ್ಯಮದ ಜೊತೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರಂತೆ. ಹಾಗೆ ಈ ರೀತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.    

ಅಪ್ಪು ಸರ್ ಅವರದ್ದು ತುಂಬಾ ಸರಳ ವ್ಯಕ್ತಿ, ಅವರನ್ನು ನೋಡಿ ನಾವು ಕಲಿಯುವುದು ತುಂಬಾನೇ ಇದೆ. ಹಾಗೆ ಅವರ ಮಿಲನ ಚಿತ್ರ ನನಗೆ ತುಂಬಾ ಇಷ್ಟ. ಇಂದು ಅಪ್ಪು ಸರ್ ಅವರ ಜೇಮ್ಸ್ ಸಿನಿಮಾ ನೋಡಿದೆ, ಸಿನಿಮಾ ತುಂಬಾ ಚೆನ್ನಾಗಿದೆ. ಅಪ್ಪು ಸರ್ ಆಕ್ಷನ್ ಸಿನಿಮಾದಲ್ಲಿ ಸಕ್ಕತ್ತಾಗಿ ಅಭಿನಯ ಮಾಡಿದ್ದಾರೆ. ವಿ ಮಿಸ್ ಯು ಅಪ್ಪು ಸಾರ್ ಎಂದು ಭಾವುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಮಾಹಿತಿಯನ್ನು ಎಲ್ಲರೂ ಸಹ ಶೇರ್ ಮಾಡಿ. ಅಪ್ಪು ಜೇಮ್ಸ್ ಸಿನಿಮಾವನ್ನು ಎಲ್ಲರೂ ಥೇಯಟರಿಗೆ ಹೋಗಿ ನೋಡಿ ಧನ್ಯವಾದಗಳು...