Samantha : ಕೊನೆಗೂ ತನ್ನ ವಿಚ್ಛೇದನ ಆಗಿದ್ದು ಇವರಿಂದಲೇ ಎಂದ ಸಮಂತಾ..! ಶಾಕ್ ಆದ ಫ್ಯಾನ್ಸ್

By Infoflick Correspondent

Updated:Saturday, July 23, 2022, 08:45[IST]

Samantha : ಕೊನೆಗೂ ತನ್ನ ವಿಚ್ಛೇದನ ಆಗಿದ್ದು ಇವರಿಂದಲೇ ಎಂದ ಸಮಂತಾ..! ಶಾಕ್ ಆದ ಫ್ಯಾನ್ಸ್

ಬಾಲಿವುಡ್ ನಲ್ಲಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವ ಶೋ ಎಂದರೆ ಅದು ಕಾಫಿ ವಿತ್ ಕರಣ್ ಎಂದು ಹೇಳಬಹುದು. ಈ ವಾರದ ಸಂಚಿಕೆಯಲ್ಲಿ ಕಾಫಿ ವಿತ್ ಕರಣ್ ಶೋನಲ್ಲಿ ನಮ್ಮ ಸೌತ್ ಬೆಡಗಿ ಸಮಂತಾ ಹಾಗೂ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಆಗಮಿಸಲಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮವನ್ನ ಕರಣ್ ನಡೆಸಿಕೊಡುತ್ತಾರೆ. ಅದು ನಿಮಗೂ ಗೊತ್ತು. ಕರಣ್ ಅವರು ಒಬ್ಬ ನಟರಾಗಿ ಸಹ ಗುರುತಿಸಿಕೊಂಡಿದ್ದಾರೆ ಹೆಚ್ಚಾಗಿ ನಿರ್ಮಾಪಕರಾಗಿಯೇ ಅವರು ಕಾಣಿಸಿರುವುದು ಎಂದು ಹೇಳಬಹುದು. ಮತ್ತು ನಿರ್ದೇಶಕರಾಗಿಯೂ ಕೂಡ ಗಮನ ಸೆಳೆದಿರುವ ಕಲಾವಿದ ಕರಣ್. ಹೌದು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ಟಾರ್ ನಟ ನಟಿ ಬಂದು ಹೋಗಿದ್ದಾರೆ. ಈ ವೇದಿಕೆಯ ಮೂಲಕ ಸ್ಟಾರ್ ನಟ ನಟಿಯರ ಕೆಲವೊಂದಿಷ್ಟು ವೈಯಕ್ತಿಕ ವಿಚಾರಗಳು ಕೂಡ ಬಹಿರಂಗ ಆಗುತ್ತವೆ. 

ಅವರ ಅಭಿಮಾನಿಗಳಿಗೆ ಗೊತ್ತಿರದ ಕೆಲವು ವಿಚಾರಗಳು ತಿಳಿಯುತ್ತವೆ. ನಟಿ ಸಮಂತಾ ಹಾಗೂ ಅಕ್ಷಯ್ ಕುಮಾರ್ ಅವರು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ವಾರ ಸಕ್ಕತ್ ಎಂಜಾಯ್ ಮಾಡಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ನಟಿ ಸಮಂತಾ ಅವರನ್ನು ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಹೊತ್ತುಕೊಂಡು ವೇದಿಕೆಗೆ ಬರುತ್ತಾರೆ. ಇದನ್ನು ನೋಡಿದರೆ ಇವರಿಬ್ಬರ ಸ್ನೇಹ ಅದೆಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂದು ತಿಳಿಯುತ್ತದೆ. ಹೌದು ಇದೆ ಕಾರ್ಯಕ್ರಮದಲ್ಲಿ ನಟಿ ಸಮಂತಾ ಅವರಿಗೆ ಕೆಲ ಪ್ರಶ್ನೆಗಳ ಮಾಡಲಾಗಿತ್ತು. ಕರಣ್ ಅವರು ಆ ಪ್ರಶ್ನೆಯನ್ನು ಕೂಡ ನಟಿ ಸಮಂತಾಗೆ ಮಾಡೇ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಹಾಗೂ ನಟ ನಾಗಚೈತನ್ಯ ಅವರ ಜೀವನದ ಬಗ್ಗೆ ಮಾತನಾಡಿದ್ದು ವಿಚ್ಛೇದನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಆಗ ನಟಿ ಸಮಂತಾ ಅವರು ಅವರ ವಿಚ್ಛೇದನಕ್ಕೆ ಈ ಒಬ್ಬ ಆಸಾಮಿಯೇ ಕಾರಣ ಎನ್ನುವಂತೆ ಹೇಳಿರುವುದಾಗಿ ಈಗ ಬಿಂಬವಾಗಿರುವ ಈ ವಿಡಿಯೋದಲ್ಲಿ ಕಂಡು ಬಂದಿದೆ. ನಟಿ ಸಮಂತ ನಾಗಚೈತನ್ಯ ವಿಚ್ಛೇದನಕ್ಕೆ ಕಾರಣ ಆಗಿದ್ದ ಆ ಆಸಾಮಿ ಯಾರೆಂದು ಈ ವಾರದ ಅಂತ್ಯದಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಿಳಿಯುತ್ತದೆ. ಹಾಗಾಗಿ ನೀವು ಸಮಂತ ಅವರ ವಿಚ್ಛೇದನದ ಬಗ್ಗೆ ತಿಳಿದುಕೊಳ್ಳಬೇಕಾದಲ್ಲಿ ತಪ್ಪದೇ ಈ ವಾರ ಕಾಫಿ ವಿತ್ ಕರಣ್ ಕಾರ್ಯಕ್ರಮ ನೋಡಿ ಎಲ್ಲವೂ ತಿಳಿಯುತ್ತದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...