ದಿನ ದಿನಕ್ಕೂ ಹಾಟ್ ಆಗುತ್ತಿರುವ ಸಮಂತಾ: ಅಭಿಮಾನಿಗಳು ಫುಲ್ ಗರಂ..!!

By Infoflick Correspondent

Updated:Wednesday, September 14, 2022, 19:01[IST]

ದಿನ ದಿನಕ್ಕೂ ಹಾಟ್ ಆಗುತ್ತಿರುವ ಸಮಂತಾ: ಅಭಿಮಾನಿಗಳು ಫುಲ್ ಗರಂ..!!

ಹತ್ತಿರ ಹತ್ತಿರ ಒಂದು ವರ್ಷದಿಂದ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಸಮಂತಾ ಅವರು ಬ್ಲಾಕ್ ಬಸ್ಟರ್ ಮೂವಿ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ಗೆ ಬಣ್ಣ ಹಚ್ಚಿದ್ದಾರೆ. ಸಿನಿಮಾ ರಿಲೀಸ್ ಗೂ ಮುನ್ನವೇ ಸಮಂತಾ ಅವರ ಐಟಂ ಸಾಂಗ್ ಊ ಅಂಟವಾ ಮಾಮ ಯೂಟ್ಯೂಬ್ ನಲ್ಲಿ ವೈರಲ್ ಆಗಿತ್ತು. ಈ ಹಾಡನ್ನು ಚಿಕ್ಕ ಮಕ್ಕಳಿಂದ ಹಿಡಿದು, ಪಡ್ಡೆ ಹುಡುಗರೂ ಮೆಚ್ಚಿಕೊಂಡಿದ್ದಾರೆ. ಈ ಹಾಡಿನಲ್ಲಿ ಸಮಂತಾ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಹಾಟ್ ಲುಕ್ ಗೆ ಫಿದಾ ಆಗಿದ್ದ ಅಭಿಮಾನಿಗಳು ಈಗ ಗರಂ ಆಗುತ್ತಿದ್ದಾರೆ.

ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅಕ್ಕಿನೇನಿ ಬೇರೆಯಾಗಿ ವರ್ಷವಾಗುತ್ತಾ ಬಂದಿದೆ. ಈ ತಿಂಗಳ ಆರಂಭದಲ್ಲೇ ಇಬ್ಬರೂ ಕೂಡ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇಬ್ಬರ ಸಂಬಂಧವೂ ಕಳಚಿದೆ. ಇಬ್ಬರೂ ಕಷ್ಟಕ್ಕೆ ಜೊತೆಯಾಗಿರುವುದಾಗಿ ಪೋಸ್ಟ್ ಮಾಡಿ ದೂರಾಗಿದ್ದೇವೆ ಎಂದಿದ್ದರು. ಆದರೆ ಇವರಿಬ್ಬರು ಬೇರೆಯಾಗಲು ಕಾರಣ ಏನು ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗೇ ಉಳಿದಿದೆ. ಅಕ್ಕಿನೇನಿ ಕುಟುಂಬವೂ ಕೂಡ ಇವರಿಬ್ಬರ ಬಾಂಧವ್ಯ ಕಳಚಲು ಕಾರಣ ಏನು ಎಂಬುದನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಇಬ್ಬರೂ ಬೇರೆಯಾದ ಮೇಲೆ ಸಮಂತಾ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  

ಕೆಲ ಪ್ರಾಡಕ್ಟ್ಗಳ ಜಾಹೀರಾತುಗಳನ್ನು ಕೂಡ ಮಾಡುತ್ತಿದ್ದಾರೆ. ಇನ್ನು ಸಿನಿಮಾಗಳಲ್ಲಿ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ಅವರು ತಮ್ಮ ಶಕುಂತಲಂ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಇದರಲ್ಲಿ ಸಮಂತಾ ಅವರ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಸಮಂತಾ ಅವರು ನಾಗಿಣಿ ವರ್ಕೌಟ್ ಮಾಡಿ ವೀಡಿಯೋ ಅಪ್ ಲೋಡ್ ಮಾಡಿದ್ದರು. ವೀಡಿಯೋಗೆ ಸಾವಿರಾರು ಲೈಕ್ಸ್ ಗಳು ಬಂದಿದ್ದು, ಅಭಿಮಾನಿಗಳು ಕಮೆಂಟ್ ಕೂಡ ಮಾಡಿದ್ದರು. ಇನ್ನು ಇತ್ತೀಚೆಗೆ ಮದ್ಯಪಾನದ ಜಾಃಈರಾತಿನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅರ್ಧಂಬರ್ಧ ಬಟ್ಟೆಯನ್ನು ಧರಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಗರಂ ಆಗಿದ್ದು, ಇದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಸಮಂತಾ ಅವರು ಕ್ಯಾರೆ ಎನ್ನದೇ ತಮ್ಮ ಪಾಡಿಗೆ ತಾವಿದ್ದಾರೆ.