Samantha : ನಟಿ ಸಮಂತಾ ಮತ್ತು ನಾಗಚೈತನ್ಯ ಜೋಡಿ ಮತ್ತೆ ಒಂದಾಗುತ್ತಿದ್ದಾರಂತೆ..!

By Infoflick Correspondent

Updated:Monday, September 19, 2022, 20:20[IST]

Samantha  : ನಟಿ ಸಮಂತಾ ಮತ್ತು ನಾಗಚೈತನ್ಯ ಜೋಡಿ ಮತ್ತೆ ಒಂದಾಗುತ್ತಿದ್ದಾರಂತೆ..!

ನಟಿ ಸಮಂತಾ ಹಾಗೂ ನಾಗಚೈತನ್ಯ ಅಕ್ಕಿನೇನಿ ಇಬ್ಬರೂ ಪ್ರೀತಿಸಿ ಮದುವೆಯಾದವರು. ಕಾರಣಾಂತರಗಳಿಂದ ಕೇವಲ ನಾಲ್ಕು ವರ್ಷಕ್ಕೆ ಇಬ್ಬರೂ ದೂರಾದರು. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಈ ಜೋಡಿ ವಿಚ್ಛೇಧನ ಪಡೆಯಿತು. ಈ ಜೋಡಿ ದೂರಾಗಿದ್ದನ್ನು ಕೇಳಿ ಅಭಿಮಾನಿಗಳಷ್ಟೇ ಅಲ್ಲದೇ, ಸಿನಿ ರಂಗವೂ ಶಾಕ್ ಆಗಿತ್ತು. ಇವರಿಬ್ಬರು ಬೇರೆಯಾಗಲು ಕಾರಣ ಏನು ಎಂಬುದು ಇಂದಿಗೂ ಬಹಿರಂಗವಾಗಿಲ್ಲ. ಇಬ್ಬರೂ ಬೇರೆಯಾದರು ಎಂಬ ಕಾರಣಕ್ಕೆ ಯಾರೊಬ್ಬರೂ ಪರಸ್ಪರ ದೂರುವುದಾಗಲಿ, ಬೇಸರವಾಗುಂತಹ ಮಾತುಗಳನ್ನಾಗಲೀ ಆಡಿಲ್ಲ. ಇದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿತ್ತು.  

ಇನ್ನು ನಟಿ ಸಮಂತಾ ನಾಗಚೈತನ್ಯ ಅವರಿಂದ ದೂರಾದ ಮೇಲೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರೂ ಹೆಚ್ಚು ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪುಷ್ಪಾ ಚಿತ್ರದಲ್ಲಿ ಐಟಂ ಸಾಮಗ್ ಗೆ ಸ್ಟೆಪ್ ಹಾಕಿದ್ದಲ್ಲದೇ, ಕೆಲ ಚಿತ್ರಗಳಲ್ಲಿ ಪುಟ್ಟ ಪುಟ್ಟ ಉಡುಗೆ ತೊಟ್ಟು ನಟಿಸಿದ್ದಾರೆ. ಇದರಿಂದ ಕೆಲ ಅಭಿಮಾನಿಗಳು ಬೇಸರವಾಗಿದ್ದೂ ಉಂಟು, ಅದರಂತೆಯೇ ಖುಷಿ ಪಟ್ಟಿದ್ದೂ ಇದೆ. ಆದರೆ ಸಮಂತಾ ಅವರು ಯಾರ ಮಾತಿಗೂ ಕೇರ್ ಮಾಡದೇ, ತಮಗೆ ಹೇಗೆ ಬೇಕೋ ಹಾಗೆ ಅರಾಮವಾಗಿ ಇದ್ದಾರೆ. 

ಇನ್ನು ಇತ್ತೀಚೆಗೆ ನಾಗಚೈತನ್ಯ ಅವರು ಸಂದರ್ಶನ ನೀಡಿದ್ದರು. ಈ ವೇಳೆ ಸಮಂತಾ ಅವರ ಕುರಿತು ಪ್ರಶ್ನೆಸಿದ್ದಕ್ಕೆ ನಾಗಚೈತನ್ಯ ಅವರು, ಸಮಂತಾ ಸಿಕ್ಕರೆ ಹಾಯ್ ಹೇಳಿ ಹಗ್ ಮಾಡುತ್ತೇನೆ ಎಂದು ಹೇಳಿದ್ದರು. ಈ ಮಾತು ಎಲ್ಲಾ ಕಡೆಯೂ ವೈರಲ್ ಆಗಿತ್ತು. ಇತ್ತ ಸಮಂತಾ ಕೂಡ ಎಲ್ಲೂ ನಾಗಚೈತನ್ಯ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಇದೆಲ್ಲವನ್ನೂ ನೋಡುತ್ತಿದ್ದರೆ, ಸಮಂತಾ ಹಾಗೂ ನಾಗಚೈತನ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರು ಈಗಲೂ ಪ್ರೀತಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಅಲ್ಲದೇ ಇಬ್ಬರೂ ಮತ್ತೆ ಒಂದಾಗುತ್ತಾರೆ ಎಂಬ ಗುಸು-ಗುಸು ಕೂಡ ಶುರುವಾಗಿದೆ.