ಮಗಳ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ದೊಡ್ಡ ನಿರ್ಧಾರ ಕೈಗೊಂಡ ಸಮನ್ವಿ ತಂದೆ..! ಇಡೀ ರಾಜ್ಯ ಶಾಕ್

By Infoflick Correspondent

Updated:Saturday, January 15, 2022, 11:39[IST]

ಮಗಳ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ದೊಡ್ಡ ನಿರ್ಧಾರ ಕೈಗೊಂಡ ಸಮನ್ವಿ ತಂದೆ..! ಇಡೀ ರಾಜ್ಯ ಶಾಕ್

ಒಂದು ಕಡೆ ಸಂಕ್ರಾಂತಿ ಹಬ್ಬ, ಇನ್ನೊಂದು ಕಡೆ ರಾಜ್ಯವೇ ಕನ್ನಡ ಕಿರುತೆರೆ ಲೋಕದ ಮಿಂಚು ಸಮನ್ವಿ ಅಗಲಿಕೆಯ ನೋವಿನಲ್ಲಿ ಕಂಬನಿ ಮಿಡಿಯುತ್ತಿದೆ. ಹೌದು ನಿನ್ನೆಯಷ್ಟೇ ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಬಾಲ ಕಲಾವಿದೆ ಸಮನ್ವಿಯ ಅಂತ್ಯಕ್ರಿಯೆಯನ್ನು ಅತ್ತ ಬನಶಂಕರಿಯಲ್ಲಿ ಮುಗಿಸಲಾಯಿತು. ಹೌದು ಮೊನ್ನೆಯಷ್ಟೇ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ, ರಸ್ತೆ ಅಪಘಾತಕ್ಕೆ ಒಳಗಾಗಿ ಸಮನ್ವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ತಾಯಿ ಮಗಳು ಸಂಕ್ರಾಂತಿ ಹಬ್ಬಕ್ಕಾಗಿ ಬಟ್ಟೆ ತರಲು ಹೋಗಿದ್ದರು. ಆಗ ಸಮನ್ವಿ ಹಾಗೂ ಅವರ ತಾಯಿ ದ್ವಿಚಕ್ರವಾಹನದಲ್ಲಿ ಬರುವಾಗ ಕೋಣನಕುಂಟೆ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಮಗಳನ್ನು ಕಳೆದುಕೊಂಡು ಅಮೃತ ನಾಯ್ಡು ಹಾಗೂ ರೂಪೇಶ್ ಅವರು ಕಣ್ಣೀರಿಡುತ್ತಿದ್ದಾರೆ. ಇನ್ನು ಜೀವನದಲ್ಲಿ ಬದುಕಿ ಬಾಳಬೇಕಾದ ಸಮನ್ವಿಯ ಆಸೆ ಕನಸುಗಳೆಲ್ಲಾ ನುಚ್ಚುನೂರಾಗಿದೆ. ದೇವರು ತುಂಬಾ ಕಠಿಣ ಹೃದಯದ ಎಂದು ಮತ್ತೆ ಸಾಬೀತಾಗಿದೆ. ಮಗಳ ಅಂತ್ಯಕ್ರಿಯೆ ಕಾರ್ಯ ಮುಗಿಯುತ್ತಿದ್ದಂತೆ ಸಮನ್ವಿಯ ತಂದೆ ರೂಪೇಶ್ ಅವರು ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಹಾಗೆ ನಗರದಲ್ಲಿ ದೊಡ್ಡ ದೊಡ್ಡ ವಾಹನಗಳು ಈ ರೀತಿ ಮೈಮೇಲೆ ಜವಾಬ್ದಾರಿ ಇಲ್ಲದೆ ಚಲಾಯಿಸಿದರೆ ದ್ವಿಚಕ್ರ ವಾಹನದ ಸವಾರರು ಎಲ್ಲಿ ಹೋಗಬೇಕು, ನನ್ನ ಮಗಳ ಸಾವಿನ ಮೂಲಕವೇ ಇದು ಕೊನೆಯಾಗಲಿ, ಲಾರಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಬಂದಿದ್ದಾರೆ ಎನ್ನಲಾಗುತ್ತಿದೆ.

ಮಗಳ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ದೊಡ್ಡ ನಿರ್ಧಾರ ಕೈಗೊಂಡ ರೂಪೇಶ್ ಅವರು ಇದು ಇಡೀ ರಾಜ್ಯಕ್ಕೆ ಒಂದು ಪಾಠವಾಗಲಿ. ನನ್ನ ಮಗಳ ಸಾವಿನ ಮೂಲಕವೇ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮಕೈಗೊಳ್ಳಿ ಎಂದು ಹೇಳಿದ್ದು ಆ ಲಾರಿ ಚಾಲಕನಿಗೆ ಕಠಿಣ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾರಂತೆ...