ಅಸಲಿಗೆ ಆಕ್ಸಿಡೆಂಟ್ ಆದ ಸ್ಥಳದಲ್ಲಿ ಮೊನ್ನೆ ಆಗಿದ್ದೇನು..? ಈ ವಿಡಿಯೋ ನೋಡಿದ್ರೆ ಈಗಲೂ ಎದೆ ಜೆಲ್ ಅನ್ನುತ್ತೆ

By Infoflick Correspondent

Updated:Saturday, January 15, 2022, 16:48[IST]

ಅಸಲಿಗೆ ಆಕ್ಸಿಡೆಂಟ್ ಆದ ಸ್ಥಳದಲ್ಲಿ ಮೊನ್ನೆ ಆಗಿದ್ದೇನು..? ಈ ವಿಡಿಯೋ ನೋಡಿದ್ರೆ ಈಗಲೂ ಎದೆ ಜೆಲ್ ಅನ್ನುತ್ತೆ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿದ್ದ ನನ್ನಮ್ಮ ಸೂಪರ್ಸ್ಟಾರ್ ಖ್ಯಾತಿಯ ಸಮನ್ವಿ ಈಗಾಗಲೇ ಸಾವನ್ನಪ್ಪಿದ್ದಾಳೆ. ಪುಟ್ಟ ಕಂದಮ್ಮನನ್ನು ಇಷ್ಟು ಬೇಗನೆ ಕಳೆದುಕೊಂಡ ಸಮನ್ವಿ ಅಪ್ಪ-ಅಮ್ಮನಿಗೆ ದೊಡ್ಡದಾಗಿ ಆಘಾತವಾಗಿದೆ. ಹೌದು ಮೊನ್ನೆಯಷ್ಟೇ ಸಾಯಂಕಾಲದ ಹೊತ್ತು ಸಂಕ್ರಾಂತಿ ಹಬ್ಬಕ್ಕೆ ಬಟ್ಟೆ ತರಲು ಹೋಗಿದ್ದ ಅಮೃತ ನಾಯ್ಡು ಹಾಗೂ ಸಮನ್ವಿ ದ್ವಿಚಕ್ರವಾಹನದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸಮನ್ವಿ ಜೀವ ಬಿಟ್ಟಿದ್ದಾಳೆ. ಒಂದು ಟಿಪ್ಪರ್ ಹಿಂದಿನಿಂದ ಬಂದು ಅಮೃತ ನಾಯ್ಡು ಅವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಗುದ್ದಿಕೊಂಡು ಹೋಗಿತ್ತು.

ಸ್ಥಳದಲ್ಲಿಯೇ ಸಮನ್ವಿ ಸಾವನ್ನಪ್ಪಿದಳು. ಬಳಿಕ ಅಮೃತ ನಾಯ್ಡು ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿದ್ದು ಅವರ ಸ್ಥಿತಿ ಕೂಡ ಗಂಭೀರ ಆಗಿದೆ ಎನ್ನಲಾಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದರು. ನಂತರ ಏನೆಲ್ಲಾ ನಡೆಯಿತು ಎಂದು ನಿಮಗೆ ಗೊತ್ತಿದೆ. ಹೌದು ನಿನ್ನೆಯಷ್ಟೇ ಬನಶಂಕರಿಯಲ್ಲಿ ಸಮನ್ವಿಯ ಅಂತ್ಯಕ್ರಿಯೆ ಕಾರ್ಯ ಕೂಡ ಮುಗಿದೇ ಹೋಯಿತು. ಕನಸು ಆಸೆಗಳನ್ನು ಕಟ್ಟಿಕೊಂಡಿದ್ದ ಸಮನ್ವಿ ಸಣ್ಣ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿದಳು. ಅಸಲಿಗೆ ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಅಂದು ನಿಜಕ್ಕೂ  ನಡೆದದ್ದಾದರೂ ಏನು.? ಯಾರದ್ದು ನಿಜವಾದ ತಪ್ಪು, ಲಾರಿ ಚಾಲಕ ಮಾಡಿದ್ದಾದರೂ ಏನು.?    

ಮುಂದೆ ನಿಂತಿದ್ದ ಒಂದು ತಳ್ಳುವ ಗಾಡಿ ರಸ್ತೆ ಪಕ್ಕ ನಿಂತಿಲ್ಲ ಅಂದಿದ್ದರೆ, ಅಮೃತ ನಾಯ್ಡು ಅವರ ಮಗಳು ಸಮನ್ವಿ ಸಾವನ್ನಪ್ಪುತ್ತಿದ್ದಳ ಎನ್ನುವ ಸಾಕಷ್ಟು ಪ್ರಶ್ನೆ ಮೂಡುತ್ತಿವೆ. ಒಂದು ಬಾರಿ ಈ ವಿಡಿಯೋ ನೋಡಿ, ನಿಜಕ್ಕೂ ನಡೆದದ್ದೇ ಬೇರೆ ಎಂದೆನಿಸುತ್ತದೆ. ಪುಟ್ಟ ಕಂದ ಸಮನ್ವಿ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಇವರ ತಂದೆತಾಯಿಗಳಿಗೆ ದುಃಖ ನುಂಗುವ ಶಕ್ತಿ ನೀಡಲಿ... ( video credit : rathi tv kannada )