ಸಮನ್ವಿಯ ನನ್ನಮ್ಮ ಸೂಪರ್ ಸ್ಟಾರ್ ಪ್ರೊಮೋ ವಿಡಿಯೋ..! ದೇವರೇ ನಿನೆಷ್ಟು ಕ್ರೂರಿ ಛೇ..!

By Infoflick Correspondent

Updated:Friday, January 14, 2022, 12:33[IST]

ಸಮನ್ವಿಯ ನನ್ನಮ್ಮ ಸೂಪರ್ ಸ್ಟಾರ್ ಪ್ರೊಮೋ ವಿಡಿಯೋ..! ದೇವರೇ ನಿನೆಷ್ಟು ಕ್ರೂರಿ ಛೇ..!

ಜೀವನ ಅಂದ್ರೆ ಹಾಗೇನೇ, ಯಾವಾಗ ಯಾರ ಜೀವನದಲ್ಲಿ ಯಾವ ರೀತಿಯ ನೋವು ಕಷ್ಟಗಳು ಬರುತ್ತವೆ ಎಂಬುದನ್ನು ಹೇಳಲಿಕ್ಕಾಗದು, ಜೊತೆಗೆ ಒಳ್ಳೆಯ ಜೀವನ ಖುಷಿ ಕ್ಷಣಗಳು ಕೂಡ ಯಾವಾಗ ನಮ್ಮನ್ನು ಬೇಕು ಎಂದು ಅರಸಿ ಬರುತ್ತವೆ ಎಂಬುದಾಗಿಯೂ ಸಹ ಹೇಳಲಿಕ್ಕಾಗದು. ಕನ್ನಡ ಕಿರುತೆರೆ ಕಲರ್ಸ್ ಕನ್ನಡದ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಇದೀಗ ನಮ್ಮ ಜೊತೆ ಇಲ್ಲವಾಗಿದ್ದಾರೆ. ನಿನ್ನೆಯಷ್ಟೇ ಕೋಣನಕುಂಟೆ ರಸ್ತೆಯಲ್ಲಿ ನಡೆದ ಅವಘಡದಲ್ಲಿ ಸಮನ್ವಿ ಜೀವ ಕಳೆದುಕೊಂಡಿದ್ದಾಳೆ. ಹೌದು ಡಾನ್ಸ್ ಕ್ಲಾಸಿನಿಂದ ಮಗಳನ್ನು ಕರೆತರುತ್ತಿರುವ ವೇಳೆ ರಸ್ತೆಯಲ್ಲಿ ಈ ಅವಗಡ ನಡೆದಿರುವುದಾಗಿ ತಿಳಿದುಬಂದಿದೆ.

ಆರು ವರ್ಷದ ಪುಟ್ಟ ಬಾಲಕಿ ಸಮನ್ವಿ ಅವರ ತಾಯಿ ಕೂಡ ಖ್ಯಾತ ನಟಿ. ಅವರೇ ಅಮೃತ ನಾಯ್ಡು. ಹೌದು ಅಮೃತ ನಾಯ್ಡು ಅವರು ಸತ್ಯ ಸೀರಿಯಲ್ನಲ್ಲಿ ನಟನೆ ಮಾಡಿದ್ದಾರೆ.  ಸಾಕಷ್ಟು ಐತಿಹಾಸಿಕ ವಿಷಯದ ಬಗ್ಗೆಯೂ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಹರಿ ಬಿಡುತ್ತಿದ್ದರು. ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಮಗಳು ಸಾವನ್ನಪ್ಪಿ ಅಮೃತ ನಾಯ್ಡು ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ನನ್ನಮ್ಮ ಸೂಪರ್ ಸ್ಟಾರ್ ಶೋ ಆರಂಭವಾಗಿತ್ತು. ಆ ಕಾರ್ಯಕ್ರಮಕ್ಕೆ ಆರು ವರ್ಷದ ಪುಟ್ಟ ಕಲಾವಿದೆ ಸಮನ್ವಿ ಹಾಗೂ ಅವರ ತಾಯಿ ನೀಡಿದ ಒಂದು ಪ್ರಮೋದಲ್ಲಿ ಕಾಣಿಸಿಕೊಂಡಿದ್ದರು.  

ಪ್ರೊಮೋ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದ್ದು ಪ್ರೊಮೋದಲ್ಲಿ ಸಮನ್ವಿ ಆಡಿದ ಮಾತುಗಳು ನಿಜ ಕಣ್ಣೀರು ಬರುವಂತಿವೆ. ದೇವರು ಎಂತಹ ಕ್ರೂರ ಎಂದೆನಿಸುತ್ತಿದೆ. ಇಷ್ಟು ಮುದ್ದುಮುದ್ದಾಗಿ ಮಾತನಾಡುತ್ತಿದ್ದ ಸಮನ್ವಿ ಅಗಲಿಕೆ ಕಿರುತೆರೆ ಪ್ರಿಯರಿಗೆ ಹೆಚ್ಚು ನೋವು ತಂದಿದೆ. ಈ ವಿಡಿಯೋ ನೋಡಿ ನಿಜಕ್ಕೂ ಸಮನ್ವಿ ತಾಯಿಯ ಬಗ್ಗೆ ನೆನೆದುಕೊಂಡರೆ ಕರುಳು ಕಿತ್ತು ಬರುತ್ತದೆ ದೇವರೇ ನೀನೆಷ್ಟು ಕ್ರೂರಿ..