ಆಶ್ರಮದಲ್ಲೂ ಸಹ ಸಂಪತ್ ಅವರಿಗೆ ಇರಲು ಅವಕಾಶ ಕೊಡ್ತಿಲ್ವಂತೆ..? ಇದು ಅತಿಯಾಯ್ತು ನೋಡಿ

By Infoflick Correspondent

Updated:Monday, April 11, 2022, 17:23[IST]

ಆಶ್ರಮದಲ್ಲೂ ಸಹ ಸಂಪತ್ ಅವರಿಗೆ ಇರಲು ಅವಕಾಶ ಕೊಡ್ತಿಲ್ವಂತೆ..? ಇದು ಅತಿಯಾಯ್ತು ನೋಡಿ

ಕಳೆದ ಒಂದುವಾರದಿಂದ ಕನ್ನಡದ ನಿರೂಪಕಿ ಅನುಶ್ರೀ ಅವರ ತಂದೆ ಎನ್ನಲಾದ ಸಂಪತ್ ಅವರ ವಿಚಾರ ಇದೀಗ ದೊಡ್ಡದಾಗಿ ಸದ್ದು ಮಾಡುತ್ತಿದೆ. ಎಲ್ಲಿ ನೋಡಿದ್ರೂ ಸಂಪತ್ ಅವರಿಗೆ ಸಹಾಯ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದರ ನಡುವೆಯೇ ಆಶ್ರಯ ಆಶ್ರಮದವರು ಅವರನ್ನ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದು ಎಲ್ಲರೂ ಮೆಚ್ಚುವ ಕೆಲಸ. ಹೀಗಿರುವಾಗ ಅನುಶ್ರೀ ತಂದೆ ನಾನೇ ಎಂದು ಆಸ್ಪತ್ರೆಯಲ್ಲಿದ್ದ ವೇಳೆ ಹೇಳಿಕೊಂಡ ಸಂಪತ್ ಅವರ ಜೀವನದಲ್ಲಿ ಈಗ ತುಂಬಾನೇ ಬದಲಾವಣೆಗಳಾಗಿವೆ ಎಂದು ಹೇಳಬಹುದು. ಸುಮಾರು ಎಂಟು ವರ್ಷಗಳ ಹಿಂದೆ ಇಡೀ ಕುಟುಂಬವನ್ನು ಬಿಟ್ಟು ಹೋಗಿದ್ದೆ ಎನ್ನುವ ಮಾತನ್ನ ಅವರೆ ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆಯ ನಡುವೆ ಸಂಪತ್ ಅವರನ್ನು ಕ್ಷಮಿಸಿ ಮನೆಗೆ ಕರೆಸಿ ಅವರಿಗೆ ಸಹಕಾರ ನೀಡಿ ಎಂದು ಕೆಲವರು ಅನುಶ್ರೀ ಅವರಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ಆದರೆ ಅನುಶ್ರೀ ಅವರು ಮಾತ್ರ ನಮ್ಮನ್ನು ಕಷ್ಟದ ಸಮಯದಲ್ಲಿ ಬಿಟ್ಟುಹೋದ ಹಾಗೂ ಸಂಬಂಧಗಳಿಗೆ ಬೆಲೆ ಕೊಡದ ವ್ಯಕ್ತಿನ ನಾವು ಎಂದು ಕೂಡ ಕ್ಷಮಿಸುವುದಿಲ್ಲ, ಸಂಬಂಧಗಳ ಬೆಲೆ ಗೊತ್ತಿರದ ವ್ಯಕ್ತಿ ನಮಗೆ ಬೇಡ ಎಂದು ಸುಮ್ಮನೆ ಇದ್ದಾರೆ ಎನ್ನಲಾಗಿದೆ. ಹೌದು ಅನುಶ್ರೀ ಅವರ ತಂದೆ ಸಂಪತ್ ಅವರನ್ನು ಇದೀಗ ಆಶ್ರಯ ಆಶ್ರಮ ಕರೆದುಕೊಂಡು ಹೋಗಿ ಅವರ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಇಷ್ಟು ಒಳ್ಳೆ ಕೆಲಸ ಮಾಡಿರುವ ಆ ಆಶ್ರಮದಲ್ಲಿಯೂ ಕೂಡ ಗಲಾಟೆ ಮಾಡಿ ಸಂಪತ್ ಅವರನ್ನು ಅಲ್ಲಿಯೂ ಸಹ ಇರಲು ಬಿಡದೆ ಸಂಪತ್ ಅವರನ್ನು ಹೊರಗಡೆ ಬನ್ನಿ ಎಂದು ಆಶ್ರಮ ಎದುರು ಗಲಾಟೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.    

ಸಂಪತ್ ಅವರನ್ನು ನೀವೇನು ನೋಡಿಕೊಳ್ಳುತ್ತೀರಿ ಎಂದು ಶಿವಲಿಂಗಯ್ಯನವರ ಕಡೆಯವರು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಚಾರದ ಗಿಮಿಕ್ ಗಾಗಿ ಮಾತನಾಡುತ್ತಿದ್ದಾರೆ ಆ ಶಿವಲಿಂಗಯ್ಯನ ಕಡೆಯವರು ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ. ಶಿವಲಿಂಗಯ್ಯ ಅವರ ಕಡೆಯವರು ಈ ರೀತಿ ಆಶ್ರಮದ ಬಳಿ ಬಂದು ಗಲಾಟೆ ಮಾಡುತ್ತಿರುವುದು ನಮಗೆ ಸರಿ ಬರುವುದಿಲ್ಲ, ನಿಮಗೆ ಇಲ್ಲಿ ಇರಲು ಮುಜುಗರ ಆಗುತ್ತಿದ್ದರೆ, ಅಥವಾ ಈ ಜಾಗ ನನಗೆ ಸರಿಯಾಗುವುದಿಲ್ಲ ಎಂದೆನಿಸಿದರೆ, ಇಲ್ಲಿಂದ ನೀವು ಹೋಗಬಹುದು ಎಂದು ಆಶ್ರಮದವರು ಹೇಳುತ್ತಿದ್ದಾರೆ. ಹೌದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ.(video credit : third eye )