ಸಂಚಾರಿ ವಿಜಯ್ ಬಗ್ಗೆ ಶಾಕಿಂಗ್ ನ್ಯೂಸ್: ಈ ಸುದ್ದಿ ಕೇಳಿದರೆ ನೀವು ನಿರಾಳರಾಗ್ತೀರಿ..

Updated: Monday, June 14, 2021, 17:58 [IST]

    

ಬೆಳಗ್ಗೆಯಿಂದಲೂ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿತ್ತು. ಮಾಧ್ಯಮಗಳ ಈ ಸುದ್ದಿ ಕೇಳಿದ ವೈದ್ಯರು ಮಾಡಿದ ಕೆಲಸವೇನು ಗೊತ್ತಾ..?
ಮಾಧ್ಯಮಗಳಲ್ಲಿ ನಟ ಸಂಚಾರಿ ವಿಜಯ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬರುತ್ತಿದ್ದದ್ದನ್ನು ಕಂಡ ವೈದ್ಯರು ಸ್ವತಃ ತಾವೇ ಸ್ಪಷ್ಟನೆಯನ್ನು ನೀಡಿದ್ದಾರೆ. ಅದೇನೆಂದರೆ, ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ ಎಂದು ನಾವೆಲ್ಲೂ ಹೇಳಿಲ್ಲ. ಾದರೂ

ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ನಾವು ಹೇಳದೆ ಯಾಕೆ ಹೀಗೆ ಅಪಪ್ರಚಾರ ಮಾಡಲಾಗುತಿದ್ಯೋ ಗೊತ್ತಿಲ್ಲ. ಸಂಚಾರಿ ವಿಜಯ್ ಅವರು ಇನ್ನು ಉಸಿರಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.  


ಅಷ್ಟೇ ಅಲ್ಲದೇ, ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರ ಮುಂಧಿನ ಪರೀಸ್ಥಿತಿ ಬಗ್ಗೆ ಅರಿಯಲು ಕೆಲ ಟೆಸ್ಟ್ ಗಳನ್ನು ಮಾಡಲಾಗಿದೆ. ಆ ಟೆಸ್ಟ್ ಗಳ ರಿಸಲ್ಟ್ ಬರಲು ಇನ್ನು ನಾಲ್ಕು ಗಂಟೆಗಳು ಸಮಯ ಹಿಡಿಯುತ್ತೆ.  ಆಗಷ್ಟೇ ಅವರಿಗೆ

ಯಾವ ಚಿಕಿತ್ಸೆ ಕೊಡಬೇಕು ಎಂಬ ಬಗ್ಗೆ ತಿಳಿಯುತ್ತೆ. ಆದರೆ, ಅಷ್ಟರಲ್ಲಾಗಲೇ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ಹೇಳಿದ್ದಾರೆ. 
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸಂಚಾರಿ ವಿಜಯ್ ಹಾಗೂ ಅವರ ಸ್ನೇಹಿತ ನವೀನ್ ಇಬ್ಬರು ಬೈಕ್ ನಲ್ಲಿ ಹೋಗಬೇಕಾದರೆ, ಗಾಡಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿಜಯ್ ಬಲ ತೊಡೆ ಹಾಗೂ ತಲೆಗೆ ಗಂಭೀರವಾದ ಗಾಯಗಳಾಗಿವೆ. ಅವರೀಗ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.