ದಿಗಂತ ಸದ್ಯದ ಆರೋಗ್ಯದ ಬಗ್ಗೆ ಅವರ ತಂದೆಯ ಹೇಳಿಕೆ ಇಲ್ಲಿದೆ

By Infoflick Correspondent

Updated:Tuesday, June 21, 2022, 22:04[IST]

ದಿಗಂತ ಸದ್ಯದ ಆರೋಗ್ಯದ ಬಗ್ಗೆ ಅವರ ತಂದೆಯ ಹೇಳಿಕೆ ಇಲ್ಲಿದೆ

ನಟ ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಬೀಚ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರಲಾಗಿದೆ. ಸದ್ಯ ನಟ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ದಿಗಂತ್ ತಂದೆ ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್ ಮೈನರ್ ಇಂಜುರಿ ಆಗಿದೆ ಎಂದು ದಿಗಂತ್ ತಂದೆ ಕೃಷ್ಣಮೂರ್ತಿ ಹೇಳಿದ್ದಾರೆ. ದಿಗಂತ್ ಆರೋಗ್ಯ ಸ್ಥಿತಿಯ ಕುರಿತು ಮಾಧ್ಯಮಕ್ಕೆ ದಿಗಂತ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.  

ದಿಗಂತ್ ಅವರ ಕುತ್ತಿಗೆ ಭಾಗಕ್ಕೆ ಮಾತ್ರ ಗಾಯವಾಗಿದ್ದು, ಬೆನ್ನುಮೂಳೆಗೆ ಯಾವುದೇ ತೊಂದರೆಯಾಗಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ. ಹೀಗಾಗಿ ದಿಗಂತ್​ಗೆ ಇನ್ಮುಂದೆ ನಡೆದಾಡಲು ಸಾಧ್ಯವಾಗುವುದಿಲ್ಲ. ಅಥವಾ ನಿಲ್ಲಲಾಗುವುದಿಲ್ಲ ಎಂಬಿತ್ಯಾದಿ ವದಂತಿಗಳಿಗೆ ಯಾರು ಕೂಡ ಕಿವಿಗೊಡಬೇಡಿ ಎಂದು ಇದೇ ವೇಳೆ ಕೃಷ್ಣಮೂರ್ತಿ ಅವರು ಮನವಿ ಮಾಡಿದರು.

ಡಾಕ್ಟರ್ ಹೇಳಿದ್ದಾರೆ ಏನೂ ಆಗಲ್ಲ ಅಂತ. ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಅಂತ ಹೇಳಿದ್ದಾರೆ. ಇನ್ಸಿಡೆಂಟ್ ನಾನು ನೋಡಿಲ್ಲ. ಓಡಾಡುವಾಗ ಬೀಳೋದು ಸಹಜ. ಇದೀಗ ಚೆನ್ನಾಗಿ ಮಾತನಾಡ್ತಿದ್ದಾನೆ. ದಿಗಂತ್‌ನನ್ನು ಆಪರೇಷನ್ ಗೆ ಕರೆದುಕೊಂಡು ಹೋಗಿದ್ದಾರೆ. ಮೈನರ್ ಇಂಜುರಿ ಆಗಿರೋದ್ರಿಂದ ಈಗಲೇ ಆಪರೇಷನ್ ಮಾಡ್ತೀವಿ ಅಂತ ಕರೆದುಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಾರದು ಅಂತ ಈಗಲೇ ಆಪರೇಷನ್ ಮಾಡಲಿದ್ದಾರೆ ಎಂದು ದಿಗಂತ್ ತಂದೆ ಮಾಹಿತಿ ನೀಡಿದ್ದಾರೆ.