Sanjana garlani : ಮಗುವಿನ ನಾಮಕರಣ ಮಾಡಿ ಸುಂದರವಾದ ತೊಟ್ಟಿಲು ಖರೀದಿಸಿದ ಸಂಜನಾ ಗಲ್ರಾನಿ..! ವಿಡಿಯೋ ನೋಡಿ :

By Infoflick Correspondent

Updated:Monday, June 27, 2022, 16:25[IST]

Sanjana garlani :  ಮಗುವಿನ ನಾಮಕರಣ ಮಾಡಿ ಸುಂದರವಾದ ತೊಟ್ಟಿಲು ಖರೀದಿಸಿದ ಸಂಜನಾ ಗಲ್ರಾನಿ..! ವಿಡಿಯೋ ನೋಡಿ :

ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಕಾಣಿಸಿದ್ದ ಹಾಗೂ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟಿ ಸಂಜನಾ ಗಲ್ರಾನಿ ಅವರು ಕರೋನಾ ಸಂದರ್ಭದಲ್ಲಿ ಮಾದಕ ವಿಷಯಕ್ಕೆ ಸಂಬಂಧಿಸಿದಂತೆ, ಮಾದಕ ಸೇವನೆ ಮತ್ತು ಮಾದಕ ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿಗಳ ಬಳಿ ವಿಚಾರಣೆಗೆ ಒಳಗಾಗಿದ್ದರು. ತದನಂತರ ಪರಪ್ಪನ ಅಗ್ರಹಾರಕ್ಕೆ ಹೋಗಿಬಂದ ವಿಷಯ ನಿಮಗೂ ಗೊತ್ತು. ಸಂಜನಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿಯೇ ಆಕ್ಟಿವ್ ಇದ್ದಾರೆ ಎನ್ನಬಹುದು. ಕಳೆದ ತಿಂಗಳು ಮೇ 19 ನೇ ತಾರೀಕು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು ಸಂಜನಾ. ಈ ವಿಷಯ ತಿಳಿದ ಅವರ ಅಭಿಮಾನಿಗಳು ಮತ್ತು ಕುಟುಂಬದ ಸ್ನೇಹಿತರು ಎಲ್ಲರೂ ಕೂಡ ಮಗುವಿಗೆ ಶುಭಹಾರೈಸಿ, ತಾಯಿಗೆ ತಾಯ್ತನದ ಬಗ್ಗೆ ಕೆಲವು ಕಿವಿಮಾತನ್ನು ಸಹ ಹೇಳಿದ್ದರು.   

ಅದರಂತೆ ತಾಯ್ತನ ಸವಿಯುತ್ತಿರುವ ಸಂಜನಾ ಗಲ್ರಾನಿ ಅವರು ಇದೀಗ ಅವರ ಒಂದು ತಿಂಗಳ ಮಗುವಿನ ಹೆಸರು ರಿವಿಲ್ ಮಾಡಿದ್ದಾರೆ... ಜೊತೆಗೆ ಮಗನ ಹೆಸರಿನಲ್ಲಿಯೇ ಒಂದು ಇನ್ಸ್ಟಾಗ್ರಾಮ್ ಹೊಸ ಖಾತೆಯನ್ನು ತೆರದಿದ್ದಾರೆ. ಮಗುವಿನ ಹೆಸರಿನ ಮೂಲಕ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದು ಮಗನ ಹೆಸರನ್ನು ರಿವೀಲ್ ಮಾಡಿದ ನಟಿ ಸಂಜನಾ ಗಲ್ರಾಣಿ ಅವರ ಪೋಸ್ಟ್ಗೆ ಕೆಲವು ಸಕಾರಾತ್ಮಕ ಕಾಮೆಂಟ್ ಬಂದರೆ ಇನ್ನು ಕೆಲ ನಕಾರಾತ್ಮಕ ಅಭಿಪ್ರಾಯಗಳು ಬಂದಿವೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿಯ ಈ ಪೋಸ್ಟ್ ಒಳಗೆ, ಅವರ ತಿಂಗಳ ಮಗುವಿಗೆ ಹೇಳಿದ್ದು ಎನ್ನಲಾಗಿ ಬರೆದುಕೊಂಡ ಪೋಸ್ಟ್ ಹೀಗಿದೆ ನೋಡಿ. 'ನಾನು ಅಧಿಕೃತವಾಗಿ ನಿಮಗೆ ಪರಿಚಯಗೊಳ್ಳಲು ಬಂದಿದ್ದೇನೆ.

ನನಗೆ ಇದೀಗ ಒಂದು ತಿಂಗಳು, ನನ್ನನ್ನು ನನ್ನ ತಾಯಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ನನ್ನ ತಂದೆಗೂ ಕೂಡ ನಾನು ಧನ್ಯವಾದಗಳ ತಿಳಿಸುತ್ತೇನೆ. ನನ್ನ ಹೆಸರು ಅಲಾರಿಕ್ ಎಂದು. ನನ್ನ ತಂದೆ ಅಜೀಜ್ ಧನ್ಯವಾದ ಸಹ ತಿಳಿಸುವೆ, ನನ್ನ ಹೊಸ ಖಾತೆಯನ್ನ ನೋಡಿ ನನಗೆ ಪ್ರೀತಿ ನೀಡಿ ನನ್ನ ಫಾಲೋ ಮಾಡಿ ಎಂಬಂತೆ, ಸಂಜನಾ ಗಲ್ರಾನಿ ಅವರೇ ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಅಕೌಂಟನ್ನು ಸಂಜನಾ ಗಲ್ರಾಣಿ ಅವರೇ ಬಳಸುತ್ತಾರೆ ಸದ್ಯದ ಮಟ್ಟಕ್ಕೆ ಎಂದು ಕೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..ನೆಟ್ಟಿಗರು ಅವೆಲ್ಲವನ್ನೂ ಮುಂದೆ ಮಕ್ಕಳು ಮಾಡಿಕೊಳ್ಳುತ್ತಾರೆ. ಮೊದಲು ನೀನು ಸರಿಯಾಗಿ ಮಕ್ಕಳನ್ನು ಪೋಷಣೆ ಮಾಡುವುದರಲ್ಲಿ ಗಮನ ಕೊಡು ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...