ಮಗನೊಂದಿಗೆ ಫೋಟೋಶೂಟ್ ಮಾಡಿಸಿಕೊಂಡ ನಟಿ ಸಂಜನಾ ಗಲ್ರಾನಿ

By Infoflick Correspondent

Updated:Saturday, July 30, 2022, 11:14[IST]

ಮಗನೊಂದಿಗೆ ಫೋಟೋಶೂಟ್ ಮಾಡಿಸಿಕೊಂಡ ನಟಿ ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರು ಈಗ ತುಂಬಾ ಬ್ಯುಸಿಯಾಗಿದ್ದಾರೆ. ಹೊಸ ವರ್ಷದಲ್ಲಿ ಸಿಹಿ ಸುದ್ದಿ ಕೊಟ್ಟ ಸಂಜನಾ ಅವರು ಗರ್ಭಿಣಿಯಾಗಿರುವ ವಿಚಾರವನ್ನು ತಿಳಿಸಿದ್ದರು. ತಾವು ತಾಯಿಯಾಗುತ್ತಿರುವ ವಿಚಾರವನ್ನು ಸಂತೋಷದಿಂದ ಹೇಳಿಕೊಂಡಿದ್ದರು. ಅವರ ಕುಟುಂಬದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಸಂಜನಾ ಅವರು ಗಂಡ-ಹೆಂಡತಿ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. 

ಕೇವಲ ಚಿತ್ರಗಳಲ್ಲಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಗಲ್ರಾನಿ ಅವರು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ, ಮುಜ್ಞೆ ಶಾದಿ ಕರೋಗೆ? ಎಂಬ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಅವರು ಭಾಗವಹಿಸಿದ್ದರು. ಸ್ವರ್ಣ ಖಡ್ಗಂ ಎಂಬ ಧಾರಾವಾಹಿಗೂ ನಟಿ ಸಂಜನಾ ಗಲ್ರಾನಿ ಅವರು ಬಣ್ಣ ಹಚ್ಚಿದ್ದರು. ಇನ್ನು ಕೆಲ ವೆಬ್ ಸೀರೀಸ್ ನಲ್ಲೂ ನಟಿಸಿರುವ ಸಂಜನಾ ಗಲ್ರಾನಿ ಅವರು ಇತ್ತೀಚೆಗಷ್ಟೇ ಮಲಯಾಳಂ ನ ಚಿತ್ರ ಒಂದರಲ್ಲಿ ನಟಿಸಿದ್ದಾರೆ. ಇನ್ನು ಮೇ ತಿಂಗಳಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.   

ಬ್ಯುಸಿ ಲೈಫ್ ಬಿಟ್ಟು ಕುಟುಂಬಕ್ಕೆ ಸಮಯ ಕೊಟ್ಟಿರುವ ಸಂಜನಾ ಅವರು, ತಾಯ್ತನದ ಅನುಭವವನ್ನು ಖುಷಿಯಿಂದ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಸೀಮಂತ, ಮೆಟರ್ನಿಟಿ ಫೋಟೋಶೂಟ್ ಸೇರಿದಂತೆಮಗು ಜೊತೆಗೆ ಕೆಲ ರೀಲ್ಸ್ ಗಳನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗನ ಜೊತೆಗೆ ಫೊಟೋಶೂಟ್ ಮಾಡಿಸಿದ್ದಾರೆ. ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಗಲ್ರಾನಿ ಅವರು ಹಂಚಿಕೊಂಡಿದ್ದಾರೆ.