Sanjana Garlani : ಮೊದಲ ಬಾರಿಗೆ ಮಗನ ವಿಡಿಯೋ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ..! ಬಳಿಕ ಹೇಳಿದ್ದೆ ಬೇರೆ

By Infoflick Correspondent

Updated:Wednesday, May 25, 2022, 12:23[IST]

Sanjana Garlani  :  ಮೊದಲ ಬಾರಿಗೆ ಮಗನ ವಿಡಿಯೋ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ..! ಬಳಿಕ ಹೇಳಿದ್ದೆ ಬೇರೆ

ಕನ್ನಡ ಚಿತ್ರರಂಗದ ಖ್ಯಾತ ನಟಿ ಸಂಜನಾ ಗಲ್ರಾನಿ ಅವರು ಕಳೆದ ಎರಡು ವರ್ಷಗಳಿಂದ ತುಂಬಾನೇ ಸುದ್ದಿಯಲ್ಲಿದ್ದಾರೆ. ಹೌದು ಡ್ರ*ಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಅವರು ಜೈಲಿಗೆ ಹೋಗಿ ಬಂದರು. ಆನಂತರದ ದಿನಗಳಲ್ಲಿ ಬೇಲ್ ಮುಖಾಂತರ ಹೊರಗಡೆ ಬಂದ ಸಂಜನಾ ಗಲ್ರಾನಿ ಮತ್ತೆ ಕ್ಯಾಬ್ ಡ್ರೈವರ್ ಜೊತೆ ಜಗಳ ಮಾಡಿಕೊಂಡು ಸುದ್ದಿ ಆದ ವಿಚಾರವನ್ನು ನಾವು ನೋಡಿದೆವು. ಸಂಜನಾ ಹೀಗೆ ಒಂದಲ್ಲ ಒಂದು ವಿಚಾರಗಳಿಗೆ ಹೆಚ್ಚು ವಿವಾದಗಳಿಗೆ ಚರ್ಚೆ ಆಗುತ್ತಲೆ ಇರುತ್ತಾರೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ಕೆಲ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸುದ್ದಿಯಾಗುವುದು ಮಾಮೂಲಿ. ಅವರ ಸಾಲಿಗೆ ನಟಿ ಸಂಜನಾ ಗಲ್ರಾನಿ ಅವರು ಕೂಡ ಸೇರುತ್ತಾರೆ. ಸದಾ ಒಂದಿಲ್ಲೊಂದು ವಿವಾದಗಳ ಸುಳಿಯಲ್ಲಿ ಇರುವ ನಟಿ ಸಂಜನಾ ಗಲ್ರಾನಿ ಕಳೆದ ವರ್ಷ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿದ್ದರು. 

ಈ ವಿಷಯ ಎಲ್ಲರಿಗೂ ಗೊತ್ತಾಗಿತ್ತು. ನಂತರದ ದಿನಗಳಲ್ಲಿ ಸಂಜನಾ ಸೀಮಂತ ಕಾರ್ಯ ಕೂಡ ಮಾಡಿಕೊಂಡಿದ್ದರು. ಹಾಗೆ ಬೇಬಿ ಶವರ್, ಬೇಬಿ ಬಂಪ್ ಬಾರಿ ಫೋಟೋಶೂಟ್ ಮಾಡಿಸಿ ಮಗುವಿನ ಆಗಮನದ ಖುಷಿಯಲ್ಲಿದ್ದರು. ಹಾಗೆ ಮಗುವಿನ ಆಗಮನದ ಖುಷಿ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ನಟಿ ಸಂಜನಾ ಗಲ್ರಾನಿ ಅವರು ಗಂಡು ಮಗುವಿಗೆ ಜನ್ಮ ನೀಡಿ ತಾಯಿಯಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂಜನಾ ಮಗುವಿನ ಹೊಸ ವಿಡಿಯೋ ಜೊತೆ ಕಂಡುಬಂದಿದ್ದು, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವುಕ ಸಾಲುಗಳ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಂಜನಾ ಗಲ್ರಾನಿ ಅವರು ಹೇಳುವ ಹಾಗೆ, ನನ್ನ ಗುಡಿಗೆ ನನ್ನ ಪುಟ್ಟ ಕಂದನ ಜೊತೆ ಮತ್ತೆ ಮರಳಿ ಬಂದಿದ್ದೇನೆ.  

ಈ ನಾಲ್ಕು ದಿನಗಳಲ್ಲಿ ನಾನು ಸಂಪೂರ್ಣ ಬದಲಾವಣೆಯ ನನ್ನ ಜೀವನದಲ್ಲಿ ಕಂಡಿದ್ದೇನೆ. ಈ ತಾಯ್ತನ ಮತ್ತು ರಕ್ಷಣೆ ನನ್ನ ಮಗನ ಆರೈಕೆ ಮಾಡುವುದೇ ಒಂದು ಮುನ್ನುಡಿ. ಮತ್ತೆ ಇವನು ಬಂದಮೇಲೆ ನಾಲ್ಕೇ ದಿನದಲ್ಲಿ ಜೀವನ ತುಂಬಾ ಬದಲಾಗಿದೆ ನನ್ನ ಗೂಡಿಗೆ ನನ್ನ ಕಂದನ ಮೊದಲ ಆಗಮನ ಎಂದಿದ್ದಾರೆ ನಟಿ ಸಂಜನಾ ಗಲ್ರಾನಿ. ಮನೆಗೆ ಬಂದ ತಾಯಿ ಮತ್ತು ಮಗುವನ್ನ ದೃಷ್ಟಿ ತೆಗದು ಒಳಗಡೆ ಕರೆದುಕೊಂಡು ಹೋಗಿದ್ದಾರೆ. ನಟಿ ಸಂಜನಾ ಅವರು ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಮಗು ಹೇಗಿದೆ ಗೊತ್ತಾ.? ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ಸಂಜನಾ ಮಗುವನ್ನು ಹೇಗೆ ಮನೆಗೆ ಕರೆತಂದಿದ್ದಾರೆ ಎಂಬುದು ತಿಳಿಯುತ್ತದೆ. ಹಾಗೇನೇ ಈ ಕ್ಯೂಟ್ ವಿಡಿಯೋಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ, ತಪ್ಪದೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ....