Sanjana Garlani : ತನ್ನ ಮಗನನ್ನು ಅದೆಂಥಾ ತೊಟ್ಟಿಲಲ್ಲಿ ಹಾಕಿದ್ದಾರೆ ಗೊತ್ತಾ ಸಂಜನಾ ಗಲ್ರಾನಿ : ತಾಯಿ ಪ್ರೀತಿ ನೋಡಿ

By Infoflick Correspondent

Updated:Thursday, July 7, 2022, 14:45[IST]

Sanjana Garlani  :  ತನ್ನ ಮಗನನ್ನು ಅದೆಂಥಾ ತೊಟ್ಟಿಲಲ್ಲಿ ಹಾಕಿದ್ದಾರೆ ಗೊತ್ತಾ ಸಂಜನಾ ಗಲ್ರಾನಿ : ತಾಯಿ ಪ್ರೀತಿ ನೋಡಿ

ನಟಿ ಸಂಜನಾ ಗಲ್ರಾನಿ ಅವರು ಈಗೀಗ ಹೆಚ್ಚು ಆಕ್ಟಿವ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಖ್ಯಾತ ನಟಿಯರ ಪೈಕಿ ಒಬ್ಬರಾಗಿದ್ದು ಗಂಡ ಹೆಂಡತಿ ಚಿತ್ರದ ಮೂಲಕ ಮಾದಕವಾಗಿ ಕಾಣಿಸಿ ಬೋಲ್ಡ್ ನಟನೆಯಲ್ಲಿ ಹೆಚ್ಚು ಹೆಸರು ಮಾಡಿದರು. ನಟಿ ಸಂಜನಾ ಗಲ್ರಾನಿ ಅವರು ಕಳೆದ ಕರೋನ ಸಂದರ್ಭದಲ್ಲಿ ಹೆಚ್ಚು ಸುದ್ದಿಯಾಗಿದ್ದು ಮಾದಕ ಸೇವನೆ ಮತ್ತು ಮಾದಕ ಸರಬರಾಜು ವಿಚಾರಕ್ಕೆ. ಅದನ್ನು ಬಿಟ್ಟರೆ ಹೆಚ್ಚು ಸದ್ದು ಆಗಿದ್ದು ಇತ್ತೀಚಿಗೆ ಅವರು ಗರ್ಭಿಣಿ ಆದಾಗಿನಿಂದ ಎನ್ನಬಹುದು. ಸಂಜನಾ ಗಲ್ರಾನಿ ಮಾದಕ ವಸ್ತುಗಳ ಸರಬರಾಜು ವಿಚಾರವಾಗಿ ಏನ್ ಸಿ ಬಿ ಅಧಿಕಾರಿಗಳ ಬಳಿ ವಿಚಾರಕ್ಕೂ ಒಳಗಾಗಿದ್ದರು. ತದನಂತರ ಪರಪ್ಪನ ಅಗ್ರಹಾರಕ್ಕೂ ಕೂಡ ಕೆಲವು ತಿಂಗಳು ಹೋಗಿ ಈ ವಿಚಾರಕ್ಕೆ ಸಂಬಂಧಿಸಿದ್ದು ಜೈಲ್ ಒಳಗೆ ಇದ್ದರು. 

ನಂತರ ಬೇಲ್ ಮೂಲಕ ನಟಿ ಸಂಜನಾ ಹೊರ ಬಂದಿದ್ದಾರೆ. ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಲೆ ಇದ್ದಾರೆ.. ಗರ್ಭಿಣಿ ಆಗಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದ ಸಂಜನಾ ವಿಭಿನ್ನವಾದ ಫೋಟೋ ಬಂಪ್  ಫೋಟೋ ಶೂಟ್ ಮಾಡಿಸಿ, ಹೆಚ್ಚು ಗಮನ ಸೆಳೆದಿದ್ದರು. ಇದೀಗ ಸಂಜನಾ ಗಲ್ರಾನಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಬಂದಾಗ ತಮ್ಮ ಮಗುವನ್ನ ಬರಮಾಡಿಕೊಂಡಿದ್ದ ಆ ಆತಿತ್ಯದ ವಿಡಿಯೋವನ್ನು ನೀವು ನೋಡಿದ್ದೀರಿ. ಸಂಜನಾ ಗಲ್ರಾನಿಯವರು ಇದೀಗ ಮಗನೊಟ್ಟಿಗೆ ಮಗನ ಆರೈಕೆ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಹಾಗೆ ಮಗನ ಜೊತೆ ತಾಯಿ ಮಮತೆ ಕ್ಷಣಗಳನ್ನು ಸವಿಯುತ್ತಿದ್ದಾರೆ ಎಂದು ಹೇಳಬಹುದು.

ಸಂಜನಾ ಮಗನಿಗೆ ಒಂದು ಚಿನ್ನದ ರೀತಿಯ ತೊಟ್ಟಿಲ ತಯಾರಿಸಿದ್ದು, ಅದರಲ್ಲಿ ಆ ಮಗುವನ್ನು ಹಾಕಿ ಲಾಲಿ ಹಾಡುತ್ತಿದ್ದಾರೆ. ಸೋಜ ಜರಾ ಎನ್ನುವ ಹಾಡಿನ ಮೂಲಕ ಮಗನ ಆರೈಕೆ ಮಾಡುತ್ತಿರುವ ಸಂಜನಾ ಗಲ್ರಾನಿ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಮಗುವಿನ ಮೇಲೆ ಪ್ರೀತಿ ಹಾರೈಕೆ ಇರಲಿ, ಆದರೆ ಈ ರೀತಿ ವಿಡಿಯೋ ಮಾಡಿ ಎಲ್ಲರಿಗೂ ಅದನ್ನ ತೋರಿಸುವುದು ಬೇಕಾ ಎಂದು ಕಿಚಾಯಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿ ಶೇರ್ ಮಾಡಿ..