ನಟ ಸಂಜು ಬಸಯ್ಯನ ಜೀವನದಲ್ಲಿ ಏನಾಯಿತು..? ಮೊದಲು ಪ್ರೇಯಸಿ ಈಗ ಅಕ್ಕ..! ಕಾರಣ ಇಲ್ಲಿದೆ

By Infoflick Correspondent

Updated:Friday, April 8, 2022, 14:10[IST]

ನಟ ಸಂಜು ಬಸಯ್ಯನ ಜೀವನದಲ್ಲಿ ಏನಾಯಿತು..? ಮೊದಲು ಪ್ರೇಯಸಿ ಈಗ ಅಕ್ಕ..! ಕಾರಣ ಇಲ್ಲಿದೆ

ಕಾಮಿಡಿ ಕಿಲಾಡಿಗಳು ಮೂಲಕ ಇಡೀ ಕರ್ನಾಟಕದ ಜನತೆಗೆ ತಲುಪಿದ್ದ ಹಾಸ್ಯನಟ ಸಂಜು ಬಸಯ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿರುವ ಕಲಾವಿದ. ಹೌದು ಕಳೆದ ಕೆಲವು ತಿಂಗಳ ಹಿಂದೆ ಸಂಜು ಬಸಯ್ಯ ಜೀ ಕನ್ನಡದ ವೇದಿಕೆಯಲ್ಲಿ ನಾನು ಮತ್ತು ಬಳ್ಳಾರಿಯ ಪವಿತ್ರ ಎನ್ನುವವರು ಮದುವೆಯಾಗುತ್ತಿದ್ದೇವೆ ನಾವಿಬ್ಬರೂ ಸಹ ಪ್ರೀತಿ ಮಾಡುತ್ತಿದ್ದೇವೆ, ಖುಷಿ ವಿಚಾರವನ್ನ ಈ ವೇದಿಕೆ ಮೂಲಕ ಹೇಳಿಕೊಳ್ಳುತ್ತಿದ್ದೇನೆ ಎಂದು ಎಂಟು ವರ್ಷಗಳ ಪ್ರೀತಿ ವಿಚಾರವಾಗಿ ಬಹಿರಂಗಪಡಿಸಿದ್ದರು. ರಕ್ಷಿತಾ ಅವರೇ ಖುದ್ದಾಗಿ ಪಲ್ಲವಿ ಅವರನ್ನು ನೀವು ಸಂಜು ಅವರನ್ನು ಪ್ರೀತಿ ಮಾಡುತ್ತಿದ್ದೀರಾ ಎಂಬುದಾಗಿ ಕೇಳಿದಾಗ, ಪಲ್ಲವಿ ಅವರು ಕೊಟ್ಟ ಉತ್ತರ ಎಸ್ ಆಗಿತ್ತು.   

ಹೌದು ಮೇಡಂ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಪವಿತ್ರ ಹೇಳಿದ್ದರು. ಸಂಜು ಬಸಯ್ಯ ಅವರ ಈ ಮದುವೆ ವಿಚಾರ, ಪ್ರೀತಿ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಅಂದು ಹೆಚ್ಚಾಗಿ ವೈರಲ್ ಆಗಿತ್ತು. ಈ ವಿಷಯ ಎಲ್ಲಾ ಕಡೆ ಹೊರಬರುತ್ತಿದ್ದಂತೆ ಸಂಜುಬಸಯ್ಯ ಮತ್ತೊಂದು ವಿಡಿಯೋ ಮೂಲಕ ಬಂದು,, 'ನಮ್ಮಿಬ್ಬರ ನಡುವೆ ಅಂಥದ್ದೇನು ಇಲ್ಲ,  ನಾವಿಬ್ಬರೂ ಪ್ರೀತಿ ಮಾಡುತ್ತಿಲ್ಲ ಬದಲಿಗೆ ಪಲ್ಲವಿ ಬಳ್ಳಾರಿ ಅವರು ನನಗೆ ಅಕ್ಕನ ರೀತಿ, ನಾನು ವೇದಿಕೆ ಮೇಲೆ ಆ ರೀತಿ ಹೇಳಿದ್ದು ಸ್ಕ್ರಿಪ್ಟ್ ಗಾಗಿಯೇ ಮಾತ್ರ, ನಮ್ಮಿಬ್ಬರ ನಡುವೆ ಏನು ಇಲ್ಲ' ಎಂಬುದಾಗಿ ಹೇಳಿದ್ದರು. ಹೌದು ಇವರಿಬ್ಬರ ಪ್ರೀತಿ ನೋಡಿ ಸಾಕಷ್ಟು ಜನರು ಪ್ರೀತಿ ಎಂತಹವರ ನಡುವೆ ಆಗುತ್ತದೆ ಎಂದು ಹೇಳಲಿಕ್ಕಾಗದು, ನಿಜಕ್ಕೂ ಇವರಿಬ್ಬರಿಗೂ ಒಳ್ಳೆಯದಾಗಲಿ, ತುಂಬಾನೇ ಮುದ್ದಾದ ಜೋಡಿ ಎಂದು ಹರಸಿದ್ದರು.

ಈ ಎಲ್ಲಾ ಕುರಿತು ಅಂದು ಸಂಜೆ ಬಸಯ್ಯ ಅವ್ರು ವಿಡಿಯೋ ಮಾಡಿದ ರೀತಿ, ಮೊದಲು ಪ್ರೇಯಸಿ ಆಗಿದ್ದ ಪಲ್ಲವಿ ಬಳ್ಳಾರಿ ನಂತರ ಅಕ್ಕ ಆಗಿದ್ದೇಕೆ..? ಇದಕ್ಕೆ ಕಾರಣ ಏನೆಂದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಅಂದು ಈ ಸಂಜು ಬಸಯ್ಯ  ಹೇಳಿರುವುದು ನೋಡಿದರೆ ನಿಜಕ್ಕೂ ಕನ್ನಡಿಗರು ಸಂಜು ಬಸಯ್ಯನ ಮೇಲೆ ಇಟ್ಟ ನಂಬಿಕೆ ಹುಸಿಯಾಯಿತು ಎಂದೆನಿಸುತ್ತದೆ. ಈ ವಿಡಿಯೋ ನೋಡಿ, ಹಾಗೇನೇ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ.

(video credit : third eye )..