ಅಪ್ಪು ಬಯೋಪಿಕ್ ಬಗ್ಗೆ ಬಾಯಿಬಿಟ್ಟ ಸಂತೋಷ್ ಆನಂದ ರಾಮ್..! ಸುಳಿವು ಕೊಟ್ಟ ಈ ಪೋಸ್ಟ್

Updated: Friday, November 26, 2021, 08:55 [IST]

ಅಪ್ಪು ಬಯೋಪಿಕ್ ಬಗ್ಗೆ ಬಾಯಿಬಿಟ್ಟ ಸಂತೋಷ್ ಆನಂದ ರಾಮ್..! ಸುಳಿವು ಕೊಟ್ಟ ಈ ಪೋಸ್ಟ್

ಕನ್ನಡ ಸಿನಿಮಾರಂಗದ ಅಜಾತಶತ್ರು ಎನ್ನಬಹುದಾದ ಪವರ್ ರೀತಿಯೇ ಎಲ್ಲರಿಗೂ ಹೆಚ್ಚಿನ ಮಟ್ಟದಲ್ಲಿಯೇ ಸ್ಪೂರ್ತಿದಾಯಕ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆ ಇಲ್ಲವಾಗಿದ್ದಾರೆ. ಅದು ಕೇವಲವಾಗಿ  ದೈಹಿಕವಾಗಿ ಅಪ್ಪು ದೂರವಾಗಿದ್ದಾರೆ ಎಂದು ಹೇಳಬಹುದು. ಕಾರಣ ಪುನೀತ್ ಅವರನ್ನ ಎಂದಿಗೂ ನಾವು ಮರೆಯುವುದಕ್ಕೆ ಆಗುವುದಿಲ್ಲ. ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ಅಪ್ಪು ಅವರ ಕೈಯಲ್ಲಿ ಸಾಕಷ್ಟು ಸಹಾಯಗಳು ಆಗಿವೆ. ಸಮಾಜ ಸೇವೆಗಳು ಆಗಿವೆ. ಹೌದು ಸಂತೋಷ್ ಆನಂದ ರಾಮ್ ಹಾಗೂ ಪುನೀತ್ ಅವರ ಒಡನಾಟ ಅವರ ಬಾಂಧವ್ಯ ಹೇಗಿತ್ತು ಎಂಬುದಾಗಿ ನಿಮಗೂ ಕೂಡ ಗೊತ್ತಿದೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ ಆನಂದ ರಾಮ್ ಅವರಿಗೆ ಒಂದು ಮನವಿಯನ್ನು ಮಾಡಿದ್ದರು. ಅಪ್ಪು ಅವರ ನೆನಪಲ್ಲಿ ಪ್ರತಿದಿನ ನಮ್ಮ ಜೀವನವನ್ನು ಸಾಗಿಸುತ್ತೇವೆ..ಆದರೆ ನೀವು ಪುನೀತ್ ಬಯೋಪಿಕ್ ತೆರೆಮೇಲೆ ತರುತ್ತೀರಾ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಪ್ರಶ್ನೆ ಮಾಡಿದ್ದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂತೋಷ್ ಆನಂದರಾಮ್ ಅವರು ಖಂಡಿತ ನಾನು ಆದಷ್ಟು ಪ್ರಯತ್ನ ಪಡುತ್ತೇನೆ ಅಪ್ಪು ಬಯೋಪಿಕ್ ಸಿನಿಮಾ ತೆರೆಮೇಲೆ ತರಲು ಪ್ರಯತ್ನಿಸುತ್ತೇನೆ ಎಂದು  ಹೇಳಿದ್ದಾರೆ. 

ಹೌದು ಅಪ್ಪು ಇಲ್ಲವಾದ ಬಳಿಕ ಸಂತೋಷ್ ಆನಂದ ರಾಮ್ ಅಪ್ಪು ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಂಡು ನೀವು ಎಂದೆಂದಿಗೂ ಜೀವಂತ, ನನ್ನ ಪ್ರತಿಯೊಂದು ಪೋಸ್ಟ್ ಅಲ್ಲಿಯೂ ನಿಮ್ಮನ್ನು ಟ್ಯಾಗ್ ಮಾಡುತ್ತೇನೆ, ನಿಮ್ಮ ನಿಷ್ಕಲ್ಮಶ ಹೃದಯ, ಯಾವ ಸೊಕ್ಕು ಯಾವುದೇ ಅಹಂಕಾರ ಇಲ್ಲದ ನಿಮ್ಮ ನಗು ಎಂದೆಂದಿಗೂ ಜೀವಂತ. ಸದಾ ನಮ್ಮ ಜೊತೆಗೆ ನೀವು ಇದ್ದೀರಾ, ಎಲ್ಲಿ ನೀವೂ ಹೋಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದರು. ಅದರ ಪ್ರಕಾರ ಅಭಿಮಾನಿಯ ಒಂದು ಪ್ರಶ್ನೆಗೆ ಪ್ರಯತ್ನಿಸುತ್ತೇನೆ ಎನ್ನಲಾಗಿ ಉತ್ತರ ನೀಡಿದ ಆನಂದ ರಾಮ್ ವರ್ಷಕ್ಕೆ ಅಪ್ಪು ಬಗ್ಗೆ ಒಂದು ಹಾಡನ್ನು ಮಾಡುವುದಾಗಿ ಸಾವಿರ ಶೇಕಡಾ ಓಕೆ ಎಂದು ಹೇಳಿದ್ದಾರೆ....