Sanya Iyer : ಸಾನ್ಯಾ ಸುದೀಪ್ ಹೇಳಿದ ಮಾತನ್ನು ಉಳಿಸಿಕೊಳ್ಳಲಿಲ್ಲ ಯಾವ ವಿಚಾರಕ್ಕೆ ಗೊತ್ತೆ

By Infoflick Correspondent

Updated:Wednesday, August 31, 2022, 07:23[IST]

Sanya Iyer :  ಸಾನ್ಯಾ ಸುದೀಪ್ ಹೇಳಿದ ಮಾತನ್ನು ಉಳಿಸಿಕೊಳ್ಳಲಿಲ್ಲ ಯಾವ ವಿಚಾರಕ್ಕೆ ಗೊತ್ತೆ

ಬಿಗ್ ಬಾಸ್ ನಲ್ಲಿ ಸಾನ್ಯಾ ಅಯ್ಯರ್ ಉತ್ತಮ ಸ್ಪರ್ಧಿ‌. ಟಾಸ್ಕ್ ಗಳನ್ನು ಚೆನ್ನಾಗಿ ಆಡುತ್ತಿದ್ದಾರೆ. ಹಲವು ಸಂದರ್ಭಗಳನ್ನು ಸಾನ್ಯಾ ನಿರ್ವಹಿಸಿದ ರೀತಿ ಅನೇಕರಿಗೆ ಇಷ್ಟವಾಗಿದೆ. ಆದರೆ, ಅವರಲ್ಲಿ ಒಂದು ಮೈನಸ್ ಪಾಯಿಂಟ್ ಇದೆ. ಸುದೀಪ್ ಕಳೆದ ವಾರ ಇದನ್ನು ಹೈಲೈಟ್ ಮಾಡಿದ್ದರು‌    ಸಾನ್ಯಾ ಪದೇ ಪದೇ ಕಣ್ಣೀರು ಹಾಕುತ್ತಾರೆ ಹಾಗಾಗಿ  ಕಳೆದ ವಾರ ಸುದೀಪ್ ಅವರು ಒಂದು ಮಾತನ್ನು ನಡೆಸಿಕೊಡುವಂತೆ ಸಾನ್ಯಾ ಅಯ್ಯರ್ ಬಳಿ ಕೋರಿದ್ದರು. ಆದರೆ, ಈ ಮಾತನ್ನು ನಡೆಸಿಕೊಡಲು ಅವರು ವಿಫಲರಾಗಿದ್ದಾರೆ. ಅದು ಏನು ಗೊತ್ತೆ 

ಈ ವಿಚಾರದ ಬಗ್ಗೆ ಸುದೀಪ್ ಕಳೆದ ವಾರ ಮಾತನಾಡಿದ್ದರು. ರೂಪೇಶ್ ಹಾಗೂ ಸಾನ್ಯಾ ಅಯ್ಯರ್ ಫ್ರೆಂಡ್​ಶಿಪ್ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡಿದ್ದರು. ಇದೇ ವಿಚಾರ ಚರ್ಚೆಗೆ ಬಂದಾಗ ಸಾನ್ಯ ಅಯ್ಯರ್ ಕಣ್ಣೀರು ಹಾಕಿದ್ದರು. ಈ ಬಗ್ಗೆ ಚರ್ಚೆ ಮಾಡುವಾಗ 'ಸಾನ್ಯ ಅವರೇ ಇನ್ಮುಂದೆ ಅಳಬೇಡಿ. ಅದು ನಿಮಗೆ ಸೂಟ್ ಆಗುವುದಿಲ್ಲ' ಎಂದು ಸುದೀಪ್ ಹೇಳಿದ್ದರು. ಇದಕ್ಕೆ ಸಾನ್ಯಾ ಒಪ್ಪಿಗೆ ಸೂಚಿಸಿದ್ದರು.

ಆದರೆ, ಈಗ ಸಾನ್ಯಾ ಅಯ್ಯರ್ ಮತ್ತೆ ಅತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉದಯ್ ಸೂರ್ಯ ಅವರು ಸಾನ್ಯಾ ಹಾಗೂ ರೂಪೇಶ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈ ವಿಚಾರ ಗೊತ್ತಾದಾಗ ಸಾನ್ಯಾ ಅಯ್ಯರ್ ಕಣ್ಣೀರು ಹಾಕಿದ್ದಾರೆ. ಲಕ್ಷುರಿ ಬಜೆಟ್​ನಲ್ಲಿ ತಮಗೆ ಪನೀರ್ ಹಾಗೂ ಕಾಫಿ ಪೌಡರ್ ಸಿಕ್ಕಿಲ್ಲ ಎಂದಾಗಲೂ ಕಣ್ಣೀರು ಹಾಕಿದ್ದಾರೆ.