ಸಾನ್ಯ ಅಯ್ಯರ್ ತಾಯಿ ಬಿಚ್ಚಿಟ್ಟ ಮಗಳ ರಹಸ್ಯ..! ಅಸಲಿಗೆ ಮಗಳಿಗೆ ಮೋಸ ಮಾಡಿದ ಆ ಹುಡುಗ ಯಾರು..?

By Infoflick Correspondent

Updated:Monday, August 8, 2022, 12:00[IST]

ಸಾನ್ಯ ಅಯ್ಯರ್ ತಾಯಿ ಬಿಚ್ಚಿಟ್ಟ ಮಗಳ ರಹಸ್ಯ..! ಅಸಲಿಗೆ ಮಗಳಿಗೆ ಮೋಸ ಮಾಡಿದ ಆ ಹುಡುಗ ಯಾರು..?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಈ ಬಾರಿ ಬೇರೆಯದ್ದೇ ರೀತಿಯಲ್ಲಿ ವಿಭಿನ್ನವಾಗಿ ಎಂಟ್ರಿ ಪಡೆದಿದೆ. ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಒಟ್ಟು 16 ಜನರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಇದರಲ್ಲಿ ಟಾಪ್ 5 ಜನರನ್ನು ಬಿಗ್ ಬಾಸ್ ಸೀಸನ್ ೯ಕ್ಕೆ ಆಯ್ಕೆ ಮಾಡಲಿದೆಯಂತೆ. ಬಿಗ್ಬಾಸ್ ಮನೆಗೆ ಸೋನು ಹಾಗೂ ಆರ್ಯವರ್ಧನ್ ಗುರೂಜಿ ಆಯ್ಕೆಯನ್ನು ಸಾಕಷ್ಟು ಜನರು ಪ್ರಶ್ನೆ ಸಹ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಸಾನ್ಯ ಅಯ್ಯರ್ ವಿಚಾರವಾಗಿ ಒಂದೊಂದೇ ವಿಷಯಗಳು ಹೊರ ಬರುತ್ತಿದ್ದು ಬಿಗ್ಬಾಸ್ ಅಭಿಮಾನಿಗಳು ತುಂಬಾ ಕಾತುರದಿಂದ ವಿಷಯವನ್ನು ತಿಳಿದುಕೊಳ್ಳಲು ಉತ್ಸಾಹಕಾರಾಗಿದ್ದಾರೆ ಎನ್ನಬಹುದು.

ಬಿಗ್ ಬಾಸ್ ಮನೆಯಲ್ಲಿ ಮೊನ್ನೆಯ ಟಾಸ್ಕ್ ಗಳಲ್ಲಿ ಕಣ್ಣೀರು ಹಾಕಿರುವ ಸ್ಪರ್ಧಿಗಳು ಅವರವರ ಜೀವನದಲ್ಲಿ ನಡೆದಂತಹ ಕಹಿ ಘಟನೆಗಳ ಬಗ್ಗೆ ಮೆಲಕು ಹಾಕಿದ್ದಾರೆ. ಹೌದು, ಸಾನ್ಯ ಅಯ್ಯರ್ ಅವರ ಹೇಳಿಕೊಂಡಿರುವ ವಿಚಾರಗಳ ಕುರಿತು ಇದೀಗ ಅವರ ತಾಯಿ ಏನೇನೆಲ್ಲ ಹೇಳಿದರು ಗೊತ್ತ ಮುಂದೆ ಓದಿ. ಹೌದು ಬಿಗ್​ಬಾಸ್ ಸ್ಪರ್ಧಿ ಸಾನ್ಯ ಅಯ್ಯರ್ ತಾಯಿ ದೀಪ ಅಯ್ಯರ್ ಅವರು ತಮ್ಮ ಮಗಳ ಕುರಿತು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಸಾನ್ಯ ಟಾಸ್ಕ್​ನಲ್ಲಿ ಅಳೋದನ್ನ ನೋಡಿ ಭಾವುಕರಾದ ಅವರ ತಾಯಿ, ಅವಳಿಗೆ ಅಪ್ಪನ ಪ್ರೀತಿಯೇ ಸಿಗಲಿಲ್ಲ, ಹಾಗಾಗಿ ನಾನು ಎರಡನೇ ಮದುವೆ ಆದೇ. ಅದು ಅವಳಿಗೆ ಅಪ್ಪ ಬೇಕು ಅಂತ. ಆದ್ರೆ ಆ ಮನುಷ್ಯನಿಂದ ಸಾನ್ಯ ಅನಾನುಕೂಲ ಫೀಲ್ ಆಗ್ತಿದ್ಲು, ಹಾಗಾಗಿ ಮತ್ತೆ ಡಿವೋರ್ಸ್ ಆಯ್ತು ಎಂದರು.   

ಮತ್ತೆ ಸಾನ್ಯ ಆಗಲೇ ಲವ್ ರಿಲೇಷನ್ ಶಿಪ್​ನಲ್ಲೂ ಸಹ ನೊಂದಿದ್ದಾಳೆ.. ಅವನು ಅಬ್ಯೂಸ್ ಮಾಡ್ತಿದ್ದ ಅವಳಿಗೆ ಅದನ್ನ ರಾತ್ರಿ ಟಾಸ್ಕ್ ನಲ್ಲಿ ಹೇಳಿಕೊಂಡಿದ್ದಾಳೆ. ಹೌದು ಒಂದು ದಿವಸ ಬಂದು ನಾನು ಈ ಕರಿಯರ್ ಇಲ್ಲಿಗೆ ಬಿಡುತ್ತೇನೆ ಒಂದು ಹುಡುಗನ್ನ ಲವ್ ಮಾಡ್ತಿದ್ದೇನೆ ಅವನನ್ನು ಮದುವೆ ಆಗ್ತೀನಿ ಎಂದು ಸಾನ್ಯ ತಾಯಿ ಬಳಿ ಹೇಳಿದ್ದರಂತೆ. ಆಗ ಜೀವನ ತುಂಬಾ ದೊಡ್ಡದು ಇದು ಮುಂದೆ ಹೋಗುತ್ತ ಹೋಗುತ್ತ ಅವಳಿಗೆ ಅರ್ಥ ಆಗುತ್ತೆ ಎಂದು ಸರಿ ಎಂದು ಹೇಳಿದೆ. ಆ ಹುಡುಗ ನನ್ನ ಮಗಳಿಗೆ ನಿಂದನೆ ಮಾಡುತ್ತ ಇದ್ದನಂತೆ, ಕೆಲವು ದಿನಗಳಲ್ಲಿ ಅವರಿಬ್ಬರ ನಡುವೆ ಲವ್ ಬ್ರೇಕಪ್ ಆಯ್ತು, ನಂತರ ಹೆಚ್ಚು ಅಳುತ್ತಿದ್ದಳು ಆಮೇಲೆ ಆದರಿಂದ ಈಗ ಹೊರಗಡೆ ಬಂದಿದ್ದಾಳೆ, ಬಿಗ್ಬಾಸ್ ಮನೆಯಲ್ಲಿ ಸೋನು ಗೌಡ ಜೊತೆ ಕ್ಲೋಸ್ ಅಗಬಹದು ಎಂದು ಅವರ ತಾಯಿ ದೀಪ ಅವರು ಹೇಳಿಕೊಂಡಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಹಾಗೆ ನಿಮಗೆ ಬಿಗ್ಬಾಸ್ ಒಟಿಟಿ ಒಂದರ ನೆಚ್ಚಿನ ಕಂಟೆಸ್ಟೆಂಟ್ ಯಾರು ಎಂದು ಕಾಮೆಂಟ್ ಮಾಡಿ ಧನ್ಯವಾದಗಳು...