ಸಾನ್ಯ ಅಯ್ಯರ್ ವಿಡೀಯೋ ಮಾಡಿ ತೋರಿಸಿದ್ದ ಮಲತಂದೆ..! ಅಸಲಿಗೆ ಆ ವಿಡಿಯೋದಲ್ಲಿ ಏನಿತ್ತು..?

By Infoflick Correspondent

Updated:Tuesday, August 9, 2022, 22:25[IST]

ಸಾನ್ಯ ಅಯ್ಯರ್ ವಿಡೀಯೋ ಮಾಡಿ ತೋರಿಸಿದ್ದ ಮಲತಂದೆ..! ಅಸಲಿಗೆ ಆ ವಿಡಿಯೋದಲ್ಲಿ ಏನಿತ್ತು..?

ಇದೀಗ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಹೆಚ್ಚು ಜನಮನ್ನಣೆ ಗಳಿಸಿದ್ದ ಬಿಗ್ ಬಾಸ್ ಈಗ ಒಟಿಟಿ ಸೀಸನ್ ಒಂದರ ಮೂಲಕ ಮತ್ತೆ ಆರಂಭವಾಗಿದೆ. ಬಿಗ್ ಬಾಸ್ ಮನೆಗೆ ಈಗಾಗಲೇ ಒಟ್ಟು 16 ಜನರನ್ನು ಸ್ಪರ್ಧಿಗಳನ್ನ ಬಿಗ್ ಮನೆಗೆ ಕಳುಹಿಸಲಾಗಿದೆ. ಹೌದು ಕನ್ನಡದ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಸಾನ್ಯ ಅಯ್ಯರ್ ನಿಮಗೂ ಗೊತ್ತು. ಬಿಗ್ ಬಾಸ್ ಆರಂಭದ ಎರಡು ದಿನಗಳಲ್ಲಿ ನೀವು ಯಾರು ಎಂಬುದಾಗಿ ಪ್ರಶ್ನೆ ಮಾಡಿ ನಿಮ್ಮ ಬಗ್ಗೆ ಈ ಬಿಗ್ ಬಾಸ್ ಪುಸ್ತಕದಲ್ಲಿ ಬರೆಯಿರಿ ಎಂದು ಹೇಳಿಕೊಂಡಿದ್ದರು ಆಗ ನಟಿ ಸಾನಿಯಾ ಅಯ್ಯರ್ ಅವರ ಬಿಗ್ಬಾಸ್ ಆದೇಶ ನೀಡಿದ್ದರು. ಆಗ ಸಾನ್ಯ ತನ್ನ ತಂದೆಯಿಂದಾದ ಕೆಟ್ಟ ಕೆಲಸಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ.

ನಟಿ ಸಾನ್ಯ ಅಯ್ಯರ್ ಅವರು ಹೇಳುವ ಹಾಗೆ ನನ್ನ ತಾಯಿ ಇಬ್ಬರಿಂದ ವಿಚ್ಛೇದನ ಪಡೆದ ಮಹಿಳೆ. ಮೊದಲ ತಂದೆ ಬಯಲಾಜಿಕಲ್ ಫಾದರ್, ಅವರೊಟ್ಟಿಗೆ ಹೆಚ್ಚು ಸಮಯ ನಾನು ಕಳೆದ ನೆನಪು ಇಲ್ಲ, ಕಾರಣ ಸಣ್ಣ ವಯಸ್ಸಿನಲ್ಲಿಯೇ ಅವರು ನಮ್ಮಿಂದ ದೂರವಾಗಿದ್ದರು. ಎರಡನೇ ತಂದೆ ನನಗೆ ಫಾದರ್ ಫಿಗರ್. ಇವರನ್ನ ಸಣ್ಣಂದಿನಿಂದಲೆ ನೋಡಿದ್ದೇನೆ. ನಮ್ಮ ಜೊತೆಗೆ ಇದ್ದರು. ನಮ್ಮ ತಾಯಿಯ ಜೊತೆ ಒಳ್ಳೆ ಸ್ನೇಹಿತರು ಆಗಿದ್ದರು. ನಂತರ ದಿನದಲ್ಲಿ ನಮ್ಮ ತಾಯಿಯನ್ನ ಇವರೇ ಮದುವೆಯಾದರು. ನಮ್ಮ ತಾಯಿಗೆ ಮದುವೆ ಆದ ಬಳಿಕ ಅನಿಸಿದ್ದು ನಾನು ತಪ್ಪು ಮಾಡಿದೆ ಎಂದು. ಕಾರಣ ಯಾಕೆಂದರೆ ಸ್ನೇಹ ಇದ್ದ ವೇಳೆ ಇವರು ಇದ್ದ ರೀತಿಯೇ ತುಂಬಾ ಚೆನ್ನಾಗಿತ್ತು, ನಂತರದಲ್ಲಿ ಸರಿ ಇರಲಿಲ್ಲ ಎನ್ನುವಂತೆ ಅವರೇ ನನಗೆ ಹೇಳಿದ್ದಾರೆ ಎಂದು ಮಾತನಾಡಿದ್ದಾರೆ.    

ಫಾದರ್ ಫಿಗರ್ ಅವರೊಟ್ಟಿಗೆ ನಾನು ಮಾತನಾಡುವುದಿಲ್ಲ. ನಮ್ಮ ತಾಯಿ ಜೊತೆ ಉಳಿದುಕೊಳ್ಳಬೇಕು ಎಂದು ನನ್ನನ್ನು ಕೆಟ್ಟದಾಗಿ ತೋರಿಸಿದ್ದಾರೆ ಈ ತಂದೆ, ಒಂದು ದಿವಸ ನಾನು ನನ್ನ ಬಾಯ್ ಫ್ರೆಂಡ್ ರೂಮಿನಲ್ಲಿ ಕುಳಿತುಕೊಂಡಿದ್ದೆವು. ಮಂಚದ ಮೇಲೆ ನಾವು ಕುಳಿತುಕೊಂಡಿದ್ದೆವು ಅಷ್ಟೇ, ನಮ್ಮ ಬಟ್ಟೆಯೂ ಕೂಡ ಎಲ್ಲವೂ ಸರಿಯಾಗಿತ್ತು. ಆದರೆ ಈ ಫಾದರ್ ಫಿಗರ್ ಪಕ್ಕದ ಮನೆಗೆ ಹೋಗಿ ಕೆಟಕಿಯಿಂದ ನಾವಿಬ್ಬರೂ ಕುಳಿತುಕೊಂಡು ಮಾತನಾಡುವ ವಿಡಿಯೋ ಮಾಡಿಕೊಂಡು ನನ್ನ ಅಜ್ಜಿಗೆ ಅದನ್ನು ತೋರಿಸಿದ್ದಾರೆ. ನಮ್ಮ ಚಿಕ್ಕಮ್ಮನಿಗೂ ಸಹ ತೋರಿಸಿದ್ದಾರೆ. ಅದರಲ್ಲಿ ಅಂತಹದ್ದು ಏನು ಇರುವುದಿಲ್ಲ, ನಾನು ನನ್ನ  ಬಾಯ್ ಫ್ರೆಂಡ್ ಜೊತೆ ಸುಮ್ಮನೆ ಕುಳಿತುಕೊಂಡು ಮಾತನಾಡುತ್ತಿದ್ದೆ. ಇಂದಿಗೂ ಆ ವಿಡಿಯೋವನ್ನು ನಮ್ಮ ತಾಯಿ ನೋಡಿಲ್ಲ, ಅದರಲ್ಲಿ ನಿಜಕ್ಕೂ ಅಂತಹದ್ದೇನಿದೆ ಎಂದು ಆಗಾಗ ಕೇಳುತ್ತಲೇ ಇರುತ್ತಾರೆ. 

ಇದೇ ಕಾರಣಕ್ಕೆ ಫಾದರ್ ಫಿಗರ್ ನನ್ನನ್ನು ಕೆಟ್ಟದಾಗಿ ಮಾಡಿ ನಮ್ಮ ಅಮ್ಮನ ಜೊತೆ ಉಳಿದುಕೊಳ್ಳಲು ಹೀಗೆ ಪ್ಲಾನ್ ಮಾಡಿ ನನ್ನನ್ನು ಕೆಟ್ಟವಳನ್ನಾಗಿ ತೋರಿಸಿದ್ದಾರೆ. ನಂತರದಲ್ಲಿ ಇವರು ಸಿನಿಮಾರಂಗದ ಹಿನ್ನೆಲೆಯುಳ್ಳವರಾದ ಕಾರಣಕ್ಕೆ ಎಲ್ಲರಿಗೂ ಕೂಡ ಆ ವಿಡಿಯೋವನ್ನು ತೋರಿಸಿ ನನ್ನನ್ನು ಕೆಟ್ಟವಳಂತೆ ಬಿಂಬಿಸಿದ್ದರು. ಅದರಿಂದ ಈಗ ನಾನು ಹೊರಗೆ ಬಂದಿದ್ದೇನೆ. ನಾವು ಇಂಡಿಪೆಂಡೆಂಟ್ ಮಹಿಳೆಯರು. ನಮ್ಮ ಜೀವನವನ್ನ ನಾವೇ ರೂಪಿಸಿಕೊಳ್ಳಬೇಕು, ಈತನಿಂದ ನನ್ನ ತಾಯಿ ತಲೆತಗ್ಗಿಸುವಂತೆ ಆಯಿತು, ಈತನ ಮೂಲಕವೇ ಈತನಿಗೆ ತಿಳಿಹೇಳಿ, ನನ್ನ ತಾಯಿ ಬಳಿ ಕ್ಷಮೆ ಕೇಳಿಸುತ್ತೇನೆ ಎಂದು ಸಾನ್ಯ ಅಯ್ಯರ್  ಬಿಗ್ ಬಾಸ್ ಮನೆಯಲ್ಲಿ ತನ್ನ ಮಲತಂದೆಯಿಂದ ಆದ ಅನ್ಯಾಯವನ್ನ ಬಿಚ್ಚಿಟ್ಟಿದ್ದಾರೆ. ಆದರೆ ಆ ವಿಡಿಯೋದಲ್ಲಿ ಇವರು ಹೇಳುವ ಹಾಗೆ ಏನು ಇರಲಿಲ್ಲ ಸುಮ್ಮನೆ ಕುಳಿತುಕೊಂಡು ಮಾತನಾಡುವುದನ್ನೆ ವಿಡಿಯೋ ಮಾಡಿಕೊಂಡು ಬೇರೆ ರೀತಿಯಾಗಿ ಎಲ್ಲರಿಗೆ ತೋರಿಸಿ ನನ್ನ ಹೆಸರು ಕೆಡಿಸಿದ್ದಾರೆ ಎಂದು ಹೇಳುತ್ತಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...